/newsfirstlive-kannada/media/media_files/2026/02/25/team-india-24-2026-02-25-14-43-33.jpg)
ಸೌತ್​ ಆಫ್ರಿಕಾ ಎದುರು ಸೋತ ಟೀಮ್​ ಇಂಡಿಯಾ ಜಿಂಬಾಬ್ವೆ ಎದುರಿನ ಸವಾಲಿಗೆ ಸಿದ್ಧವಾಗ್ತಿದೆ. ಗೆಲುವಿನೊಂದಿಗೆ ರನ್​ರೇಟ್​ ಕೂಡ ಹೆಚ್ಚಿಸಿಕೊಳ್ಳೋ ಸವಾಲು ಇದೀಗ ಟೀಮ್​ ಇಂಡಿಯಾ ಮುಂದಿದೆ. ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಏನು ಮಾಡಬೇಕು? ಸೆಮಿಸ್​ ಕನಸು ಜೀವಂತವಾಗಿರಿಸಿಕೊಳ್ಳೋಕೆ ಭಾರತ ತಂಡದ ಮುಂದಿರೋ ದಾರಿ ಏನು?
ಸೌತ್​ ಆಫ್ರಿಕಾ ವಿರುದ್ಧದ ಹೀನಾಯ ಸೋಲು ಟೀಮ್​ ಇಂಡಿಯಾದ ಸೆಮಿಫೈನಲ್​​ ಹಾದಿಯನ್ನ ದುರ್ಗಮಗೊಳಿಸಿದೆ. ಮುಂದಿನ 2 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಭರ್ಜರಿ ಗೆಲುವು ಅನಿವಾರ್ಯವಾಗಿದೆ. ಪಾತಾಳಕ್ಕೆ ಕುಸಿದಿರೋ ರನ್​ರೇಟ್ ಹೆಚ್ಚಿಸಿಕೊಳ್ಳಬೇಕಿರೋದು ಟೀಮ್ ಇಂಡಿಯಾ ಮುಂದಿರೋ ಮೊದಲ ಟಾರ್ಗೆಟ್​​. ಅದಕ್ಕೆ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕಿಂತ ಬೆಸ್ಟ್​ ಅವಕಾಶ ಮತ್ತೊಂದಿಲ್ಲ. ಜಿಂಬಾಬ್ವೆ ವಿರುದ್ಧ ಪಕ್ಕಾ ಪ್ಲ್ಯಾನಿಂಗ್​ನೊಂದಿಗೆ ಕಣಕ್ಕಿಳಿದ್ರೆ ಗೆಲುವಿನ ಜೊತೆಗೆ ರನ್​ರೇಟ್​ ಕೂಡ ಹೆಚ್ಚಿಸಿಕೊಳ್ಳಬಹುದು.
ಮೊದಲು ಬ್ಯಾಟಿಂಗ್​, 250+ ರನ್​
ರನ್​ರೇಟ್​​ ಹೆಚ್ಚಿಸಿಕೊಳ್ಳಬೇಕಂದ್ರೆ ಟೀಮ್​ ಇಂಡಿಯಾ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಲೇಬೇಕಿದೆ. ಮೊದಲು ಬ್ಯಾಟಿಂಗ್​ ನಡೆಸಿ 250ಕ್ಕಿಂತ ಹೆಚ್ಚು ರನ್​ಗಳಿಸೋದು ಅನಿವಾರ್ಯವಾಗಿದೆ. ಜಿಂಬಾಬ್ವೆ ವಿರುದ್ಧ ವೆಸ್ಟ್​ ಇಂಡೀಸ್​ ಬ್ಯಾಟಿಂಗ್​ ನಡೆಸ್ತಲ್ವಾ? ಹಾಗೇ ಎಕ್ಸ್​​ಟ್ರಾಡಿನರಿ ಬ್ಯಾಟಿಂಗ್​ ನಡೆಸಿದ್ರೆ ರನ್​ರೇಟ್​​ ಹೆಚ್ಚಿಸಿಕೊಳ್ಳಬಹುದು. ಚೆನ್ನೈನ ಚೆಪಾಕ್​ ಅಂಗಳದಲ್ಲಿ 200+ ರನ್​ಗಳಿಸೋದೆ ಬಿಗ್​ ಚಾಲೆಂಜ್​. ಅಂತಾದ್ರಲ್ಲಿ 250 ರನ್​ಗಳಿಸಬೇಕಂದ್ರೆ ಇಂಡಿಯನ್​ ಬ್ಯಾಟರ್ಸ್​ ನೆಕ್ಸ್ಟ್​ ಲೆವೆಲ್​ ಗೇಮ್​ ಆಡಬೇಕಿದೆ.
ಇದನ್ನೂ ಓದಿ: NCERT ಪಠ್ಯಪುಸ್ತಕದದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖಕ್ಕೆ ಸುಪ್ರೀಂಕೋರ್ಟ್ ಸಿಜೆಐ ಆಕ್ರೋಶ : CJI ಹೇಳಿದ್ದೇನು?
ಬ್ಯಾಟಿಂಗ್​ ಜೊತೆಗೆ ಜಿಂಬಾಬ್ವೆ ಎದುರು ಬೌಲಿಂಗ್​ನಲ್ಲೂ ಮೆನ್ ಇನ್​ ಬ್ಲ್ಯೂ ಪಡೆ ಎ ಗೇಮ್ ಆಡಬೇಕಿದೆ. ಜಿಂಬಾಬ್ವೆ ಅಂತಾ ಲೈಟ್​ ಆಗಿ ಪರಿಗಣಿಸದೇ ಟೈಟ್​ ಸ್ಪೆಲ್​ಗಳನ್ನ ಹಾಕಿ 120ರೊಳಗೆ ಆಲೌಟ್​ ಮಾಡಬೇಕಿದೆ. ವಿಂಡೀಸ್​ ಎದುರು ಜಿಂಬಾಬ್ವೆ ಬ್ಯಾಟರ್ಸ್​ ಸ್ಪಿನ್​ಗೆ ಸ್ಟ್ರಗಲ್ ಮಾಡಿದ್ದಾರೆ. ಚೆಪಾಕ್ ಮೈದಾನ ಕೂಡ ಸ್ಪಿನ್​ ಫ್ರೆಂಡ್ಲಿ ಆಗಿರೋದ್ರಿಂದ ವರುಣ್​ ಚಕ್ರವರ್ತಿ, ಕುಲ್​​​​ದೀಪ್​ ಯಾದವ್, ಅಕ್ಷರ್​ ಪಟೇಲ್​​ಗೆ ಅಡ್ವಾಂಟೇಜ್​ ಇದೆ. ಸ್ಪಿನ್ನರ್ಸ್​​ ಜವಾಬ್ದಾರಿ ತೆಗೆದುಕೊಂಡು ಜಿಂಬಾಬ್ವೆಯನ್ನ ಕಟ್ಟಿ ಹಾಕಬೇಕಿದೆ.
ರಿಧಮ್ ಕಂಡುಕೊಳ್ಳಬೇಕಿದೆ ಬ್ಯಾಟರ್ಸ್​
ವಿಶ್ವಕಪ್​ ಟೂರ್ನಿಯ ಮೊದಲ ಗೇಮ್​ನಿಂದಲೂ ಟೀಮ್ ಇಂಡಿಯಾ ಬ್ಯಾಟರ್ಸ್ ಸಂಘಟಿತ ಪರ್ಫಾಮೆನ್ಸ್​ ನೀಡಿಲ್ಲ. ಲೀಗ್ ಹಂತದಲ್ಲಿ ಒಂದೊಂದು ಗೇಮ್​ನಲ್ಲಿ ಒಬ್ಬೊಬ್ಬ ಆಟಗಾರ ತಂಡಕ್ಕೆ ಆಪತ್ಭಾಂದವನಾಗಿ ನಿಂತಿದ್ರು. ಸೂಪರ್​ 8ನ ಮೊದಲ ಪಂದ್ಯದಲ್ಲಿ ಯಾರೊಬ್ಬರೂ ತಂಡಕ್ಕೆ ನೆರವಾಗಲಿಲ್ಲ. ಬ್ಯಾಟರ್ಸ್​ ಇನ್​ಕನ್ಸಿಸ್ಟೆಂಟ್​ ಆಟ ಅತಿಯಾದ ಆತ್ಮವಿಶ್ವಾಸ ಸೋಲಿನ ದಾರಿ ತೋರಿಸಿತು. ಜಿಂಬಾಬ್ವೆ ವಿರುದ್ಧ ಬಿಗ್​​ಸ್ಕೋರ್​ಗಳಿಸಬೇಕಂದ್ರೆ ಮೊದಲು ಬ್ಯಾಟರ್ಸ್​ ರಿಧಮ್​ ಕಂಡುಕೊಳ್ಳಬೇಕಿದೆ.
ಇದನ್ನೂ ಓದಿ: ‘ಸ್ಟಾರ್ಟಿಂಗ್​ ಟ್ರಬಲ್’ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ.. ಮುಂದಿನ ಪ್ಲಾನ್ ಏನು ಗೊತ್ತಾ?
ಫೀಲ್ಡಿಂಗ್​ ಸಮಸ್ಯೆಗೆ ಬೇಕಿದೆ ಪರಿಹಾರ
ಟಿ20 ವಿಶ್ವಕಪ್​ನಲ್ಲಿ​ ಟೀಮ್​ ಇಂಡಿಯಾ ಫೀಲ್ಡಿಂಗ್ ವಿಭಾಗದಲ್ಲಂತೂ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಬರೋಬ್ಬರಿ 9 ಕ್ಯಾಚ್​ಗಳನ್ನ ಟೀಮ್​ ಇಂಡಿಯಾ ಆಟಗಾರರು ಡ್ರಾಪ್​ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಕಳಪೆ ಫೀಲ್ಡಿಂಗ್​ ಟೀಮ್​ ಎಂಬ ಹಣೆಪಟ್ಟಿ ಟೀಮ್​ ಇಂಡಿಯಾಗೆ ಅಂಟಿಕೊಂಡಿದೆ. ಈ ಫೀಲ್ಡಿಂಗ್​ ಸಮಸ್ಯೆಗೆ ಮೊದಲು ಪರಿಹಾರ ಕಂಡುಕೊಳ್ಳಬೇಕಿದೆ. ಮಸ್ಟ್​ ವಿನ್​ ಗೇಮ್​ಗಳಲ್ಲಿ ಕ್ಯಾಚ್​ ಡ್ರಾಪ್​ ಮಾಡಿದ್ರೆ ವಿಶ್ವಕಪ್​ ಟ್ರೋಫಿಯನ್ನೇ ಡ್ರಾಪ್ ಮಾಡಿದಂತೆ.
ಜಿಂಬಾಬ್ವೆ ಕಟ್ಟಿ ಹಾಕಲು ಬೇಕು ಪರ್ಫೆಕ್ಟ್​ ಪ್ಲಾನ್
ವಿಶ್ವಕಪ್​ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಜಿಂಬಾಬ್ವೆ ಹೊರಗೆ ಕಳಿಸಿದೆ. ಶ್ರೀಲಂಕಾ ತಂಡಕ್ಕೂ ಕೊನೆ ಲೀಗ್​ ಗೇಮ್​ನಲ್ಲಿ ಸೋಲಿನ ರುಚಿ ತೋರಿಸಿದೆ. ಹೀಗಾಗಿ ಜಿಂಬಾಬ್ವೆಯನ್ನ ಈಸೀಯಾಗಿ ಪರಿಗಣಿಸುವಂತೆ ಇಲ್ಲ. ಟೀಮ್ ಇಂಡಿಯಾಗೂ ಜಿಂಬಾಬ್ವೆ ಬಾಯ್ಸ್​ ಶಾಕ್ ಕೊಡ್ತಾರೆ. ಹೀಗಾಗಬಾರದು ಅಂದ್ರೆ ಪರ್ಫೆಕ್ಟ್​ ಗೇಮ್​ಪ್ಲಾನ್​ನೊಂದಿಗೆ ಕಣಕ್ಕಿಳಿಯಬೇಕಿದೆ. A ಪ್ಲಾನ್​ ಜೊತೆಗೆ ಬ್ಯಾಕ್​ಅಪ್​ಗೆ B ಪ್ಲಾನ್​ ಕೂಡ ರೆಡಿ ಇರಬೇಕು. ಅಂತಿಮವಾಗಿ ಇಷ್ಟೆಲ್ಲಾ ಆಗಬೇಕಂದ್ರೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆಟದ ಜೊತೆಗೆ ಟೀಮ್​ ಇಂಡಿಯಾಗೆ ಲಕ್​ನ ಸಾಥ್​ ಕೂಡ ಬೇಕಿದೆ. ಅದೃಷ್ಠ ಟೀಮ್​ ಇಂಡಿಯಾ ಕೈ ಹಿಡಿಯುತ್ತಾ? ಕಾದು ನೋಡೋಣ.
ಇದನ್ನೂ ಓದಿ:ಭಾರತದ 4 ಐಟಿ ದಿಗ್ಗಜ ಕಂಪನಿಗಳ ಮೌಲ್ಯವನ್ನು ಮೀರಿಸಿದ ಆಂಥ್ರೋಪಿಕ್ ಎಐ ಕಂಪನಿ!! : 5 ವರ್ಷದಲ್ಲಿ ಸಾಧನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us