/newsfirstlive-kannada/media/media_files/2026/01/22/team-india-2026-01-22-07-06-38.jpg)
ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಅಜೇಯ ಓಟಕ್ಕೆ ಬ್ರೇಕ್​ ಬಿದ್ದಿದೆ. ಸೌತ್​ ಆಫ್ರಿಕಾ ವಿರುದ್ಧ ಹೀನಾಯ ಸೋಲುಂಡ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ನಮೋ ಅಂಗಳದಲ್ಲಿ ಮುಖಭಂಗ ಅನುಭವಿಸಿರೋ ಟೀಮ್​ ಇಂಡಿಯಾ ಇನ್ನುಳಿದ 2 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಗೆಲುವಿನ ಟ್ರ್ಯಾಕ್​ಗೆ ಮರಳಬೇಕಂದ್ರೆ ಟೂರ್ನಿ ಆರಂಭದಿಂದಲೂ ತಂಡಕ್ಕೆ ಕಾಡ್ತಿರೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.
ಇದನ್ನೂ ಓದಿ: ಬಿಹಾರದಲ್ಲಿ 28 ವರ್ಷದ ಮುಸ್ಲಿಂ ಶಿಕ್ಷಕಿಯನ್ನು ಮದುವೆಯಾದ 60 ವರ್ಷದ ಪ್ರಿನ್ಸಿಪಾಲ್!! : ಉದ್ವಿಗ್ನ ಪರಿಸ್ಥಿತಿ ನಿರ್ಮಾಣ
ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಿಂದ ಹಿಡಿದು ಸೌತ್​ ಆಫ್ರಿಕಾ ಎದುರಿನ ಪಂದ್ಯದವರೆಗೆ ಟೀಮ್ ಇಂಡಿಯಾಗೆ ಕನ್ಸಿಸ್ಟೆಂಟ್​ ಆಗಿ ಕಾಡ್ತಿರೋದು ಒಂದೇ ಸಮಸ್ಯೆ. ಅದೇ ಸ್ಟಾರ್ಟಿಂಗ್ ಟ್ರಬಲ್​. ಅಭಿಷೇಕ್​ ಶರ್ಮಾ, ಇಶಾನ್​ ಕಿಶನ್ ಟೂರ್ನಿಯೂದ್ದಕ್ಕೂ​ ಗುಡ್​ ಸ್ಟಾರ್ಟ್​ ನೀಡುವಲ್ಲಿ ಫೇಲ್​ ಆಗಿದ್ದಾರೆ. ಇವರಿಬ್ಬರ ವೈಫಲ್ಯದಿಂದ ಟೀಮ್​ ಇಂಡಿಯಾಗೆ ಆರಂಭದಲ್ಲೇ ಹಿನ್ನಡೆ ಎದುರಾಗ್ತಿದೆ. ಉಳಿದ ಆಟಗಾರರ ಮೇಲೆ ಒತ್ತಡ ಹೆಚ್ಚಿಸ್ತಿದೆ.
ಟೀಮ್​ ಇಂಡಿಯಾಗೆ ‘ಸ್ಟಾರ್ಟಿಂಗ್ ಟ್ರಬಲ್​’
- ಯುಎಸ್​ಎ-8
- ನಮಿಬೀಯಾ-25
- ಪಾಕಿಸ್ತಾನ-1
- ನೆದರ್ಲೆಂಡ್ಸ್​-0
- ಸೌತ್​ ಆಫ್ರಿಕಾ-0
ಮ್ಯಾನೇಜ್​ಮೆಂಟ್​ಗೆ ಪೀಕಲಾಟ
ಟೀಮ್​ ಇಂಡಿಯಾ ಓಪನರ್​ಗಳ ಪರದಾಟ, ಸದ್ಯ ಟೀಮ್​ ಮ್ಯಾನೇಜ್​ಮೆಂಟ್​ಗೆ ಪೀಕಲಾಟ ತಂದಿಟ್ಟಿದೆ. ಅಭಿಷೇಕ್ ಶರ್ಮಾ ಸತತ ವೈಫಲ್ಯ, ಇನ್​ಕನ್ಸಿಸ್ಟೆನ್ಸಿ ಗಂಭೀರ್​ & ಟೀಮ್​ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಳೆದೊಂದು ವರ್ಷದಿಂದ ಬ್ಯಾಕ್​ ಮಾಡಿ, ಸತತವಾಗಿ ಪಂದ್ಯಗಳನ್ನಾಡಿಸಿ ಅಭಿಷೇಕ್​ ಶರ್ಮಾನ ಮ್ಯಾನೇಜ್​ಮೆಂಟ್​ ಪ್ರಿಪೇರ್​ ಮಾಡಿತ್ತು. ನಿರೀಕ್ಷೆಯಂತೆ ದ್ವಿಪಕ್ಷೀಯ ಸರಣಿಯಲ್ಲಿ ಅಭಿಷೇಕ್ ಆರ್ಭಟಿಸಿದ್ರು. ಆದ್ರೆ, ವಿಶ್ವಕಪ್​ ಟೂರ್ನಿಯಲ್ಲಿ ಸೈಲೆಂಟ್​ ಆಗಿದ್ದಾರೆ.
ಇದನ್ನೂ ಓದಿ: ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ಏಳನೀರು ಬೆಲೆ ಏರಿಕೆ! ರೈತರಿಗೆ ಏರಿಕೆಯಾದ ಬೆಲೆಯ ಲಾಭ ಸಿಗುತ್ತಿದೆಯೇ?
/filters:format(webp)/newsfirstlive-kannada/media/media_files/2026/01/28/sanju-samson-2026-01-28-15-03-06.jpg)
ಸೌತ್​ ಆಫ್ರಿಕಾ ವಿರುದ್ಧದ ಸೋಲಿನ ಬೆನ್ನಲ್ಲೇ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಬದಲಾವಣೆಯ ಸುಳಿವು ನೀಡಿದೆ. ಸದ್ಯ ಟೀಮ್ ಇಂಡಿಯಾದ ಟಾಪ್​ ಆರ್ಡರ್​ನಲ್ಲಿ ಲೆಫ್ಟ್​ ಹ್ಯಾಂಡರ್​ಗಳೇ ತುಂಬಿದ್ದಾರೆ. ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ತಿಲಕ್​ ವರ್ಮಾ.. ಮೂವರು ಲೆಫ್ಟಿಗಳು ಟಾಪ್​​-3ನಲ್ಲಿ ಆಡ್ತಿದ್ದಾರೆ. ಇದೀಗ ಬದಲಾವಣೆಗೆ ಚಿಂತಿಸಿರೋ ಮ್ಯಾನೇಜ್​ಮೆಂಟ್​ ರೈಟ್​ ಹ್ಯಾಂಡ್​ ಬ್ಯಾಟರ್​ ಆ್ಯಡ್​ ಮಾಡೋಕೆ ಚಿಂತಿಸಿದೆ. ಇಶಾನ್ ಕಿಶನ್ ಉತ್ತಮ ಫಾರ್ಮ್​ನಲ್ಲಿರೋದ್ರಿಂದ, ತಿಲಕ್ ಅಥವಾ ಅಭಿಷೇಕ್​ಗೆ ಇಲೆವೆನ್​ನಿಂದ ಕೊಕ್​ ಕೊಡೋ ಸಾಧ್ಯತೆಯಿದೆ.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಬದಲಾವಣೆಗೆ ಮುಂದಾದ್ರೆ, ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗೋ ಸಾಧ್ಯತೆ ದಟ್ಟವಾಗಿದೆ. ಓಪನಿಂಗ್ ಅಥವಾ ನಂಬರ್​ 3 ಎರಡೂ ಸ್ಲಾಟ್​ಗೂ ಸಂಜು ಸ್ಯಾಮ್ಸನ್ ಫಿಟ್​ ಆಗೋ ಪ್ಲೇಯರ್​​. ಅನುಭವಿ ಕೂಡ ಆಗಿರೋದ್ರಿಂದ ಒತ್ತಡವನ್ನ ನಿಭಾಯಿಸೋ ಸಾಮರ್ಥ್ಯ ಸಂಜುಗಿದೆ. ಈ ಬಗ್ಗೆ ಮ್ಯಾನೇಜ್​ಮೆಂಟ್​ ಲೆವೆಲ್​ನಲ್ಲೂ ಚರ್ಚೆ ನಡೆದಿದ್ದು, ಅಭಿಷೇಕ್ ಶರ್ಮಾ ಅಥವಾ ತಿಲಕ್​ ವರ್ಮಾ ಇಬ್ಬರಲ್ಲಿ ಒಬ್ಬರ ಸ್ಥಾನಕ್ಕೆ ಸಂಜು ಎಂಟ್ರಿ ಕೊಡೋ ಸಾಧ್ಯತೆಯಿದೆ.
ಒಟ್ಟಿನಲ್ಲಿ, ಸೌತ್​ ಆಫ್ರಿಕಾ ಸೋಲಿನ ಬಳಿಕ ಕೊನೆಗೂ ಟೀಮ್​ ಮ್ಯಾನೇಜ್​ಮೆಂಟ್​ ಎಚ್ಚೆತ್ತುಕೊಂಡಂತೆ ಕಾಣ್ತಿದೆ. ಹೀಗಾಗಿಯೇ ಮೊದಲ ಪಂದ್ಯದಿಂದಲೂ ಕಾಡ್ತಿರೋ ಸ್ಟಾರ್ಟಿಂಗ್ ಟ್ರಬಲ್ ಬಗ್ಗೆ ಸೌತ್​ ಆಫ್ರಿಕಾ ಎದುರಿನ ಹೀನಾಯ ಸೋಲಿನ ಬಳಿಕ ಗಂಭೀರವಾದ ಚಿಂತನೆ ನಡೆದಿದೆ. ಜಿಂಬಾಬ್ವೆ ವಿರುದ್ಧ ಪಂದ್ಯದಿಂದ ಅಭಿಷೇಕ್​, ತಿಲಕ್ ಇಬ್ಬರಲ್ಲಿ ಯಾರು ಹೊರಬೀಳ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ನವ ವಧು ರಶ್ಮಿಕಾಗೆ ಕುಟುಂಬದ ಬಳೆ, ಆಭರಣ ನೀಡಿದ ವಿಜಯ ದೇವರಕೊಂಡ ತಾಯಿ ಮಾಧವಿ: ನಾಳೆ ವಿವಾಹ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us