ರಾಜಸ್ಥಾನದಲ್ಲಿ ಮದುವೆ ಆಗ್ತಿದ್ರೂ ದಕ್ಷಿಣ ಭಾರತದ ಸಂಪ್ರದಾಯ: ‘ವಿರೋಶ್’ ವಿವಾಹದ ಎಕ್ಸ್‌ಕ್ಲೂಸಿವ್ ಡೀಟೇಲ್ಸ್..!

ಕ್ಯೂಟ್ ಕಪಲ್ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ರೌಡಿ ಬಾಯ್ ವಿಜಯ್ ದೇವರಕೊಂಡ ಮದುವೆ ಸಂಭ್ರಮ ರಾಜಸ್ಥಾನದಲ್ಲಿ ಕಳೆಗಟ್ಟಿದೆ. ವಿಶೇಷ ಎಂದರೆ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ರಾಜಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದರೂ, ಈ ಜೋಡಿ ಅಪ್ಪಟ ದಕ್ಷಿಣ ಭಾರತದ ಸಂಪ್ರದಾಯಕ್ಕೆ ಮಣೆ ಹಾಕಿದೆ.

author-image
Ganesh Kerekuli
Rashmika
Advertisment

ಕ್ಯೂಟ್ ಕಪಲ್ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ರೌಡಿ ಬಾಯ್ ವಿಜಯ್ ದೇವರಕೊಂಡ ಮದುವೆ ಸಂಭ್ರಮ ರಾಜಸ್ಥಾನದಲ್ಲಿ ಕಳೆಗಟ್ಟಿದೆ. ವಿಶೇಷ ಎಂದರೆ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ರಾಜಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದರೂ, ಈ ಜೋಡಿ ಅಪ್ಪಟ ದಕ್ಷಿಣ ಭಾರತದ ಸಂಪ್ರದಾಯಕ್ಕೆ ಮಣೆ ಹಾಕಿದೆ. ಸದ್ಯ 'ವಿರೋಶ್' (Virosh) ಮದುವೆಯ ಆತಿಥ್ಯದ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಹಲವು ಅಚ್ಚರಿಯ ಮಾಹಿತಿಗಳು ಹೊರಬಿದ್ದಿವೆ.

ಗೆಸ್ಟ್‌ಗಳಿಗೆ ಎಳನೀರು ಸ್ವಾಗತ, ಬಾಳೆ ಎಲೆ ಊಟ!

ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಯುತ್ತಿದ್ದರೂ, ಅಲ್ಲಿನ ವ್ಯವಸ್ಥೆಗಳು ಮಾತ್ರ ಪಕ್ಕಾ ಸೌತ್ ಇಂಡಿಯನ್ ಸ್ಟೈಲ್‌ನಲ್ಲಿವೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ದಕ್ಷಿಣ ಭಾರತದ ಸಂಪ್ರದಾಯದಂತೆ ಎಳನೀರು ಕೊಟ್ಟು ಅತ್ಯಂತ ಪ್ರೀತಿಯಿಂದ ಸ್ವಾಗತಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಬಂದಂತಹ ಗೆಸ್ಟ್‌ಗಳಿಗೆ ಸಾಂಪ್ರದಾಯಿಕವಾಗಿ ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಈ ದಕ್ಷಿಣ ಭಾರತ ಶೈಲಿಯ ಆತಿಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:ಆರ್ಥಿಕ ಸಮಸ್ಯೆ, ನೆಮ್ಮದಿ ಇರೋದಿಲ್ಲ -ರಾಶಿ ಭವಿಷ್ಯ

rarshmika and vijay devarakonda

ಇಂದು ಅರಿಶಿಣ ಶಾಸ್ತ್ರ, ನಿನ್ನೆ ಜಪಾನೀಸ್ ಭೋಜನ!

ಉದಯಪುರದ ಐಷಾರಾಮಿ ಹೋಟೆಲ್ 'ಐಟಿಸಿ ಮೆಮೆಂಟೋ' (ITC Mementos) ನಲ್ಲಿ ಇಂದು ಅರಿಶಿಣ ಶಾಸ್ತ್ರ (ಹಳದಿ ಕಾರ್ಯಕ್ರಮ) ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ. ಇದಕ್ಕೂ ಮುನ್ನ ನಿನ್ನೆ ನಡೆದ ಮೆಹಂದಿ ಶಾಸ್ತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಗೆ ವಿಶೇಷವಾಗಿ ಜಪಾನ್ ಶೈಲಿಯ ಭೋಜನವನ್ನು (Japanese cuisine) ಉಣಬಡಿಸಲಾಗಿದೆ. ದಕ್ಷಿಣ ಭಾರತ ಹಾಗೂ ವಿದೇಶಿ ಶೈಲಿಯ ಊಟದ ಸಮ್ಮಿಲನ ಅತಿಥಿಗಳಿಗೆ ವಿಭಿನ್ನ ಅನುಭವ ನೀಡುತ್ತಿದೆ.

ನಾಳೆ ಮದುವೆ, ಕೇವಲ 100 ಜನರಿಗಷ್ಟೇ ಆಹ್ವಾನ!

ನಾಳೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ರಾಜಸ್ಥಾನದ ಮದುವೆಗೆ ಯಾವುದೇ ವಿಐಪಿಗಳ ದಂಡೇನೂ ಇರುವುದಿಲ್ಲ. ಬದಲಾಗಿ ಕೇವಲ ನೂರು (100) ಮಂದಿ ಆಪ್ತರು ಹಾಗೂ ಕುಟುಂಬಸ್ಥರಿಗಷ್ಟೇ ಆಹ್ವಾನ ನೀಡಲಾಗಿದ್ದು, ಅತ್ಯಂತ ಖಾಸಗಿಯಾಗಿ ವಿವಾಹ ಮಹೋತ್ಸವ ನಡೆಯಲಿದೆ.

ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ:

ರಾಜಸ್ಥಾನದ ಮದುವೆ ಮುಗಿದ ನಂತರ, ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಗಣ್ಯರು, ಸ್ನೇಹಿತರು ಹಾಗೂ ಹಿತೈಷಿಗಳಿಗಾಗಿ ಹೈದರಾಬಾದ್‌ನಲ್ಲಿ 'ವಿರೋಶ್' ಜೋಡಿಯ ಅದ್ದೂರಿ ಆರತಕ್ಷತೆ (ರಿಸೆಪ್ಷನ್) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಒಟ್ಟಿನಲ್ಲಿ ರಾಜಸ್ಥಾನದ ಅರಮನೆಯಲ್ಲಿ ದಕ್ಷಿಣ ಭಾರತದ ಘಮಲು ಹರಡಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ 'ವಿರೋಶ್' ಜೋಡಿಯ ಮದುವೆಯ ಅಧಿಕೃತ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಶೃತಿ ಸಾವು : ಆಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ, ಈ ಸಾವು ನ್ಯಾಯವೇ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashmika Mandanna, vijay devarakonda rashmika mandanna
Advertisment