ಆರ್ಥಿಕ ಸಮಸ್ಯೆ, ನೆಮ್ಮದಿ ಇರೋದಿಲ್ಲ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ರೋಹಿಣಿ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ಇಂದು ಮೆಹಂದಿ ಶಾಸ್ತ್ರ, ನಾಳೆ ಹಳದಿ ಶಾಸ್ತ್ರ, ನಾಡಿದ್ದು ಮದುವೆ : ನಟಿ ರಶ್ಮಿಕಾ- ವಿಜಯ ದೇವರಕೊಂಡ ವಿವಾಹಕ್ಕೆ ಒಂದೇ ದಿನ ಬಾಕಿ

ಮೇಷ 

  • ಅನುಭವಿಗಳ ಜೊತೆಯಲ್ಲಿ ಕೆಲವು ವಿಚಾರ ಚರ್ಚಿಸಬಹುದು
  • ಅಣ್ಣ ತಮ್ಮಂದಿರು-ಬಂಧುಗಳು ಸೌಹಾರ್ದಯುತರಾಗಿರುತ್ತಾರೆ
  • ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ಮಾಡಬಹುದು
  • ಪ್ರತಿಭೆ ಇರುವವರಿಗೆ ಅವಕಾಶಗಳು ಹೆಚ್ಚಾಗಿ ಸಿಗಲಿದೆ
  • ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ
  • ಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಅವಕಾಶಗಳು ಸಿಗಲಿದೆ
  • ಮನೆದೇವರನ್ನು ಆರಾಧಿಸಿ

ವೃಷಭ

  • ಆತ್ಮಾವಲೋಕನದ ದಿನ, ತಪ್ಪಿಗೆ ಪ್ರಾಯಶ್ಚಿತ್ತದ ಚಿಂತನೆ
  • ಆರೋಗ್ಯದ ಕಡೆ ಸ್ವಲ್ಪ ಹೆಚ್ಚಾಗಿ ಗಮನ ಹರಿಸಿ
  • ಮನೆಯವರ ಸಲಹೆ ಮುಖ್ಯವಾಗಿರುತ್ತದೆ
  • ಜಮೀನಿಗೆ ಸಂಬಂಧಿಸಿದ ಚರ್ಚೆಯಾಗಬಹುದು
  • ಶಾಂತಿ, ತಾಳ್ಮೆಯು ನಿಮಗೆ ಸಹಕರಿಸುತ್ತದೆ
  • ರಹಸ್ಯ ಶತ್ರುಗಳು ನಿಮ್ಮ ವಿರುದ್ಧವಾಗುತ್ತಾರೆ ಎಚ್ಚರ
  • ನರಸಿಂಹ ಕರಾವಲಂಬನ ಸ್ತೋತ್ರ ಪಠಿಸಿ

ಮಿಥುನ 

  • ಯಾವುದೇ ಬಾಕಿ ಕೆಲಸಗಳನ್ನು ಇಂದು ಪೂರ್ಣಮಾಡಿ
  • ಸ್ವಚ್ಫತೆಗೆ  ತುಂಬಾನೆ ಆದ್ಯತೆ ನೀಡಿ
  • ಯಾರ ಜೊತೆಗೂ ಜಗಳ - ಮನಸ್ತಾಪ ಬೇಡ
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಅಸ್ವಸ್ಥತೆ ಆಗಬಹುದು
  • ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದುಕೊಳ್ಳಬೇಡಿ
  • ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ
  • ದುರ್ಗಾರಾಧನೆ ಮಾಡಿ

ಕಟಕ 

  • ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭಗಳಿಸುವ ಸಾಧ್ಯತೆ
  • ಮಾತಿನಿಂದ ಬೇರೆಯವರನ್ನು ಕಟ್ಟಿ ಹಾಕಬೇಡಿ
  • ಮನೆಯಲ್ಲಿ ಶುಭ ಕಾರ್ಯಕ್ರಮಗಳ ಬಗ್ಗೆ ಚರ್ಚೆ
  • ದೈನಂದಿನ ಕಾರ್ಯಗಳಿಗೆ ಮಹತ್ವ ನೀಡುವಿರಿ
  • ಧಾರ್ಮಿಕ ಚಿಂತೆಗಳಿಂದ ನಿಮ್ಮ ತಪ್ಪಿನ ಅರಿವಾಗಬಹುದು
  • ವಿಶ್ರಾಂತಿಯಿಲ್ಲದೆಯೇ ದುಡಿಮೆಯ ಚಿಂತನೆ
  • ವೃದ್ಧರಿಗೆ ವಸ್ತ್ರ, ಧನ, ಭೋಜನ ಸಹಾಯಮಾಡಿ

ಸಿಂಹ

  • ವೃತ್ತಿ , ನೌಕರಿಯಲ್ಲಿ  ನಿಮ್ಮ ಪ್ರಭಾವ ಹೆಚ್ಚು ಬೀರಲಿದೆ
  • ವ್ಯಾವಹಾರಿಕವಾಗಿ ಹಣ ಸಂಪಾದನೆ ಮಾಡುವಿರಿ
  • ಹಿರಿಯರ ಹೆಸರು ಹೇಳಿ ಗೌರವ ಸಂಪಾದಿಸುತ್ತೀರಿ
  • ಎಲ್ಲೋ ಕೇಳಿದ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ
  • ಮನೆಯಲ್ಲಿ ಸಂತೋಷ ನೆಲೆಸಿರಲಿದೆ
  • ಸಾಲದ ಹಣ ಪಡೆದು ಹೊಸ ಯೋಜನೆ ಮಾಡಿ ಶುಭವಿದೆ
  • ಸುಬ್ರಹ್ಮಣ್ಯನನ್ನು ಆರಾಧಿಸಿ

ಕನ್ಯಾ 

  • ಹೊಸ ವ್ಯವಹಾರ ಮಾಡುವುದನ್ನು ತಪ್ಪಿಸಿ
  • ಇದು ತುಂಬಾ ದೇಹ ಶ್ರಮದ ದಿನವಾಗಲಿದೆ 
  • ಮಕ್ಕಳಿಂದ ನಿಮ್ಮ ಆರೈಕೆ, ಸಂತೋಷ ಸಿಗಲಿದೆ
  • ಸಾಲದ ವಿಚಾರಕ್ಕೆ ಹೋಗಬೇಡಿ
  • ಸರ್ಕಾರಿ ಸಮಸ್ಯೆಗಳು ಎದುರಾಗಬಹುದು
  • ವೈವಾಹಿಕ ಜೀವನದಲ್ಲಿ ಅತೃಪ್ತಿ ಹೊಂದಬಹುದು
  • ಲಕ್ಷ್ಮೀನಾರಾಯಣ ಸ್ವಾಮಿ ಪಾರಾಯಣ ಮಾಡಿ

ತುಲಾ

  • ನಿಮ್ಮ ಚಟುವಟಿಕೆಯ ಸಲುವಾಗಿ ಅಪಾಯವಿದೆ
  • ಕುಟುಂಬ ಸದಸ್ಯರ ಜೊತೆಗೆ ವೈಮನಸ್ಸು ಬೇಡ
  • ವ್ಯಾಪಾರ, ವ್ಯವಹಾರ ಸಮಸ್ಯೆ ಬೇರೆಯವರಿಗೆ ಹೇಳಬೇಡಿ
  • ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ, ಹೆಚ್ಚಿನ ದುಃಖವಾಗಲಿದೆ
  • ಏಕಾಂಗಿತನ ಹೆಚ್ಚಾಗಿ ಕಾಡಬಹುದು
  • ಪ್ರತ್ಯಂಗಿರಾ ದೇವಿ ಪೂಜಿಸಿ

ವೃಶ್ಚಿಕ 

  • ತಾಳ್ಮೆಯಿಂದ ಕೆಲಸ ಮಾಡಿದರೆ ಜನರ ಮೆಚ್ಚುಗೆ ಸಿಗಲಿದೆ
  • ಹಣದ ಲಾಭ ಹೆಸರು  ಎಲ್ಲವೂ ನಿಮ್ಮದಾಗುತ್ತದೆ
  • ಕುಟುಂಬದವರ ಸಹಕಾರ ಕೆಲಸ ಮಾಡುತ್ತದೆ
  • ರಾಜಕಾರಣಿಗಳಿಂದ ಅನುಕೂಲವಾಗುವ ಸಾಧ್ಯತೆ
  • ಜವಾಬ್ದಾರಿ ಹೊತ್ತ ಕೆಲಸಗಳಲ್ಲಿ ಯಶಸ್ಸು, ಪ್ರಯಾಸವಾಗಲಿದೆ
  • ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
  • ಗಣಪತಿಗೆ ಗರಿಕೆ ಅರ್ಪಿಸಿ

ಧನುಸ್ಸು​ 

  • ಹಣ ಹೂಡಿಕೆಗೆ ಬೇರೆಯವರು ಹೇಳಿದರೂ ಹಿಂಜರಿಯುವಿರಿ
  • ಮನೆಯವರಿಗೆ ಸಂತೋಷ, ತೃಪ್ತಿ ಸಿಗುತ್ತದೆ
  • ಒತ್ತಡ ದೂರ ಮಾಡಿಕೊಳ್ಳಿ ವಿಶ್ರಾಂತಿಯ ಅಗತ್ಯ
  • ಮಕ್ಕಳಿಗೆ ಹಣ ವ್ಯಯವಾಗಲಿದೆ ಸಂತೋಷ ಸಿಗಲಿದೆ
  • ತುಂಬಾ ಕೆಲಸದ ಒತ್ತಡ  ಸ್ವಲ್ಪ ಆದಾಯ ಸಿಗಲಿದೆ
  • ಕಮೀಷನ್​ ಏಜೆಂಟ್​​ಗಳಿಗೆ ಲಾಭವಿದೆ
  • ಶಿವಾರಾಧನೆ ಮಾಡಿ

ಮಕರ

  • ಹಣದ ವಿಚಾರಕ್ಕೆ ಜಗಳ ಸಾಧ್ಯತೆ
  • ಸಾಲ ಬಡ್ಡಿ ವ್ಯವಹಾರ ಬೇಡ
  • ಉದ್ಯೋಗದಲ್ಲಿ ಹಣ ಕಡಿಮೆಯಾಗಬಹುದು
  • ಬೇರೆಯವರ ಕೆಲಸದ ಜವಾಬ್ದಾರಿ ಹೊತ್ತುಕೊಳ್ಳಬೇಡಿ
  • ನಕಲಿ ಖರೀದಿಯಿಂದ ಮೋಸ ಹೋಗುವ ಸಾಧ್ಯತೆ
  • ಉಚಿತ ಸಮಯವನ್ನು ಅಧ್ಯಯನದ ಕಡೆ ಗಮನಕೊಡಿ
  • ಅನಾವಶ್ಯಕ ಪ್ರಯಾಣ ಮಾಡಬಾರದು 
  • ಗಣಪತಿ  ಅಷ್ಟೋತ್ತರ ಶತನಾಮ ಪಠಿಸಿ

ಕುಂಭ 

  • ಕೆಲಸ ಹುಡುಕುತ್ತಿರುವವರಿಗೆ ಸಿಹಿಸುದ್ದಿ ದೊರೆಯಲಿದೆ
  • ಸರ್ಕಾರಿ ಕೆಲಸಗಳ ತೊಂದರೆ ನಿವಾರಣೆಯಾಗಲಿದೆ 
  • ವ್ಯಾಪಾರಿಗಳಿಗೆ ಅಲ್ಪ ಲಾಭ - ನಷ್ಟದ ಭಯ ದೂರ
  • ಅಧಿಕಾರಿ ವರ್ಗದಿಂದ ಮೆಚ್ಚುಗೆಗಳಿಸುವ ಸಾಧ್ಯತೆ 
  • ನಿಮ್ಮ ಕೆಲಸಕ್ಕೆ ಸ್ನೇಹಿತರ ಸಹಾಯ ದೊರಕಲಿದೆ
  • ಪತಿ-ಪತ್ನಿಯರ ನಡುವೆ ಜಗಳ ಸಂಭವಿಸಬಹುದು
  • ವಿಷ್ಣು ಸಹಸ್ರನಾಮ ಪಠಿಸಿ

ಮೀನ

  • ಯಾರದೇ ಜೊತೆ ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಲಿ
  • ಮಕ್ಕಳ ಜೊತೆಯಲ್ಲಿ ಸಂತೋಷವಾಗಿರುತ್ತೀರಿ
  • ಉನ್ನತ ಶಿಕ್ಷಣ ಗಂಭೀರ ವಿಚಾರವಾಗಬಹುದು
  • ಪ್ರವಾಸದ ಬಗ್ಗೆ ಮಾತುಕತೆ ನಡೆಯಬಹುದು
  • ಆತುರದ ನಿರ್ಧಾರದಿಂದ ಕೆಲಸದಲ್ಲಿ ವ್ಯತ್ಯಯ ಆಗಬಹುದು
  • ಮನೆಯವರಿಗೆ ಅಚ್ಚರಿ ನೀಡುವ ವಿಷಯ ಬರಬಹುದು 
  • ಶಾರದಾ ಪರಮೇಶ್ವರಿಯನ್ನು ಆರಾಧಿಸಿ

ಇದನ್ನೂ ಓದಿ: ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಶೃತಿ ಸಾವು : ಆಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ, ಈ ಸಾವು ನ್ಯಾಯವೇ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment