Advertisment

ಡ್ಯಾನ್ಸ್ ಮಾಡೋದನ್ನ ಅವರು ಎಂದೂ ತಡೆದಿಲ್ಲ, ಗಂಡನ ಬಗ್ಗೆ ಪುಸ್ತಕವನ್ನೇ ಬರೆಯಬಲ್ಲೇ -ರಶ್ಮಿಕಾ ಭಾವುಕ

ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾದ ಈ 'ವಿರೋಶ್' ಜೋಡಿ, ಇದೀಗ ತಮ್ಮ ಮದುವೆಯ ಅಧಿಕೃತ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

author-image
Ganesh Kerekuli
rashmika mandanna (14)
Advertisment

ಟಾಲಿವುಡ್‌ನ ಮೋಸ್ಟ್ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾದ ಈ 'ವಿರೋಶ್' ಜೋಡಿ, ಇದೀಗ ತಮ್ಮ ಮದುವೆಯ ಅಧಿಕೃತ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಫೋಟೋಗಳ ಜೊತೆಗೆ ಇಬ್ಬರೂ ಬರೆದುಕೊಂಡಿರುವ ಭಾವುಕ ಹಾಗೂ ಪ್ರೀತಿಯ ಸಾಲುಗಳು ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ.

Advertisment

‘ನನ್ನ ಗಂಡನನ್ನು ಪರಿಚಯಿಸುತ್ತಿದ್ದೇನೆ’ ಎಂದ ರಶ್ಮಿಕಾ!

ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಪತಿಯ ಮೇಲಿನ ಅಗಾಧ ಪ್ರೀತಿಯನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

‘ಹಾಯ್ ಮೈ ಲವ್ಸ್, ನನ್ನ ಗಂಡ, ಮಿಸ್ಟರ್ ವಿಜಯ್ ದೇವರಕೊಂಡ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇನೆ! ನಿಜವಾದ ಪ್ರೀತಿ ಎಂದರೆ ಏನೆಂದು ನನಗೆ ಕಲಿಸಿದ ವ್ಯಕ್ತಿ ಇವರು. ನೆಮ್ಮದಿಯಿಂದ ಇರುವುದು ಎಂದರೆ ಹೇಗಿರುತ್ತದೆ ಎಂದು ತೋರಿಸಿಕೊಟ್ಟವರು. ದೊಡ್ಡ ಕನಸುಗಳನ್ನು ಕಾಣುವುದು ಖಂಡಿತಾ ಸರಿಯಾದದ್ದು ಎಂದು ಪ್ರತಿದಿನ ಹೇಳುತ್ತಾ, ನನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನದನ್ನು ಸಾಧಿಸಲು ನನ್ನನ್ನು ಪ್ರೇರೇಪಿಸಿದವರು ಇವರೇ! ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 625 ಕೋಟಿ ರೂ. ದುರ್ಬಳಕೆ ಆರೋಪ.. ಸಚಿವ ಜಮೀರ್‌ಗೆ ‘ಲೋಕಾ’ ಸಂಕಷ್ಟ..!

ಮುಂದುವರಿದು, ‘ಯಾರೂ ನೋಡುತ್ತಿಲ್ಲ ಎಂಬಂತೆ ನನ್ನ ಪಾಡಿಗೆ ಡ್ಯಾನ್ಸ್ ಮಾಡುವುದನ್ನು ಅವರು ಎಂದೂ ತಡೆದಿಲ್ಲ. ಸ್ನೇಹಿತರೊಂದಿಗೆ ಪ್ರವಾಸ ಮಾಡುವುದು ಎಷ್ಟು ಸುಂದರ ಎಂಬುದನ್ನು ತೋರಿಸಿಕೊಟ್ಟವರು. ನನ್ನನ್ನು ನಂಬಿ, ಈ ಮನುಷ್ಯನ ಬಗ್ಗೆ ನಾನು ಒಂದು ಪುಸ್ತಕವನ್ನೇ ಬರೆಯಬಲ್ಲೆ! ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

Advertisment

ಬೆಸ್ಟ್ ಫ್ರೆಂಡ್ ಅನ್ನೇ ಹೆಂಡತಿಯಾಗಿಸಿಕೊಂಡೆ

ಮತ್ತೊಂದೆಡೆ ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಎಂದರೆ ತಮಗಿರುವ ಪ್ರೀತಿ ಎಂಥದ್ದು ಎಂಬುದನ್ನು ಅತ್ಯಂತ ಮುದ್ದಾಗಿ ವಿವರಿಸಿದ್ದಾರೆ.

ಒಂದು ದಿನ ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಂಡೆ. ಅವಳು ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎನಿಸಿತು. ಊಟ ಮಾಡುವಾಗ ಅವಳು ನನ್ನ ಎದುರು ಕುಳಿತಿದ್ದರೆ ಆ ಊಟಕ್ಕೆ ಮತ್ತಷ್ಟು ಅರ್ಥವಿರುತ್ತಿತ್ತು. ವರ್ಕೌಟ್ ಮಾಡುವಾಗ ಅವಳಿದ್ದರೆ ಅದು ಶಿಕ್ಷೆಯಂತೆ ಕಾಣದೆ ಮೋಜಿನಿಂದ ಕೂಡಿರುತ್ತಿತ್ತು ಎನಿಸಿತು.

ನಾನು ಎಲ್ಲೇ ಇದ್ದರೂ, ನನಗೆ ಮನೆಯೆಂಬ ನೆಮ್ಮದಿ ಮತ್ತು ಶಾಂತಿ ಸಿಗಲು ಅವಳು ಬೇಕೇ ಬೇಕು ಎನಿಸಿತು. ಹಾಗಾಗಿ, ನಾನು ನನ್ನ ಬೆಸ್ಟ್ ಫ್ರೆಂಡ್ ಅನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ... 26.02.2026 ಎಂದು ವಿಜಯ್ ದೇವರಕೊಂಡ ಪ್ರೀತಿಯಿಂದ ಬರೆದುಕೊಂಡಿದ್ದಾರೆ.

Advertisment

ಈ ಕ್ಯೂಟ್ ಜೋಡಿಯ ಪರಸ್ಪರ ಪ್ರೀತಿಯ ಬರಹಗಳು ಹಾಗೂ ಮದುವೆಯ ಸುಂದರ ಫೋಟೋಗಳು ಇದೀಗ ಇಂಟರ್ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ನವದಂಪತಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ಇದನ್ನೂ ಓದಿ: ‘ನನ್ನ ಬೆಸ್ಟ್ ಫ್ರೆಂಡ್ ಈಗ ಹೆಂಡತಿ..’ ರಶ್ಮಿಕಾರ ಕಂಗಳು ತುಂಬಿದ ಫೋಟೋ ವೈರಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

vijay deverakonda rashmika mandanna
Advertisment
Advertisment
Advertisment