/newsfirstlive-kannada/media/media_files/2026/02/27/rashmika-mandanna-13-2026-02-27-10-45-26.jpg)
ಟಾಲಿವುಡ್‌ನ ಬಹುನಿರೀಕ್ಷಿತ ತಾರಾಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇದೀಗ ಅಧಿಕೃತವಾಗಿ ಸತಿ-ಪತಿಯಾಗಿದ್ದಾರೆ. ನಿನ್ನೆ ರಾಜಸ್ಥಾನದ ಉದಯಪುರದಲ್ಲಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಮದುವೆಯ ಬೆನ್ನಲ್ಲೇ ನವಜೋಡಿ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಮದುವೆಯ ಅಧಿಕೃತ ಫೋಟೋಗಳನ್ನು (Official Wedding Pictures) ಹಂಚಿಕೊಂಡಿದ್ದು, ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿವೆ.
ವಿಜಯ್ ದೇವರಕೊಂಡ ಭಾವುಕ
ವಿಜಯ್ ದೇವರಕೊಂಡ ಅವರು ರಶ್ಮಿಕಾ ಜೊತೆಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಅತ್ಯಂತ ಭಾವುಕವಾಗಿ ಹಾಗೂ ಮುದ್ದಾಗಿ ಬರೆದುಕೊಂಡಿದ್ದಾರೆ. ಒಂದು ದಿನ ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಂಡೆ. ಅವಳು ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು ಎನಿಸಿತು. ಊಟ ಮಾಡುವಾಗ ಅವಳು ನನ್ನ ಎದುರು ಕುಳಿತಿದ್ದರೆ ಆ ಊಟಕ್ಕೆ ಮತ್ತಷ್ಟು ಅರ್ಥವಿರುತ್ತಿತ್ತು. ವರ್ಕೌಟ್ ಮಾಡುವಾಗ ಅವಳಿದ್ದರೆ ಅದು ಶಿಕ್ಷೆಯಂತೆ ಕಾಣದೆ ಮೋಜಿನಿಂದ ಕೂಡಿರುತ್ತಿತ್ತು ಎನಿಸಿತು. ನಾನು ಎಲ್ಲೇ ಇದ್ದರೂ, ನನಗೆ ಮನೆಯೆಂಬ ನೆಮ್ಮದಿ ಮತ್ತು ಶಾಂತಿ ಸಿಗಲು ಅವಳು ಬೇಕೇ ಬೇಕು ಎನಿಸಿತು. ಹಾಗಾಗಿ, ನಾನು ನನ್ನ ಬೆಸ್ಟ್ ಫ್ರೆಂಡ್ ಅನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಂಡೆ... 26.02.2026 ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರ ರಿಂಕು ಸಿಂಗ್‌ಗೆ ಪಿತೃಶೋಕ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆ ನಿಧನ
/filters:format(webp)/newsfirstlive-kannada/media/media_files/2026/02/26/rashmika-and-vijay-devarkonda-wedding-photos-3-2026-02-26-19-05-12.jpg)
ವಿಜಯ್ ಹಂಚಿಕೊಂಡಿರುವ ಫೋಟೋಗಳ ಪೈಕಿ ಮದುವೆ ಮಂಟಪದಲ್ಲಿ ರಶ್ಮಿಕಾ ಮಂದಣ್ಣ ಅವರು ಆನಂದಭಾಷ್ಪ ಸುರಿಸುತ್ತಿರುವ (ಅಳುತ್ತಿರುವ) ಫೋಟೋಗಳು ಕೂಡ ಇದ್ದು, ಈ ಕಣ್ಣೀರಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದು ಇಬ್ಬರ ನಡುವಿನ ನೈಜ ಹಾಗೂ ಬೇಷರತ್ ಪ್ರೀತಿಯನ್ನು (Unconditional Love) ಪ್ರತಿಬಿಂಬಿಸುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ನನ್ನ ಗಂಡನನ್ನು ಪರಿಚಯಿಸುತ್ತಿದ್ದೇನೆ ಎಂದ ರಶ್ಮಿಕಾ..!
ಇನ್ನು ರಶ್ಮಿಕಾ ಮಂದಣ್ಣ ಕೂಡ ತಮ್ಮ ಪತಿಗೆ ವಿಶೇಷವಾಗಿ ಸಾಥ್ ನೀಡಿದ್ದು, ಉದ್ದನೆಯ ಪೋಸ್ಟ್ ಹಾಕಿದ್ದಾರೆ. ‘ಹಾಯ್ ಮೈ ಲವ್ಸ್, ನನ್ನ ಗಂಡ, ಮಿಸ್ಟರ್ ವಿಜಯ್ ದೇವರಕೊಂಡ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇನೆ! ನಿಜವಾದ ಪ್ರೀತಿ ಎಂದರೆ ಏನೆಂದು ನನಗೆ ಕಲಿಸಿದ ವ್ಯಕ್ತಿ ಇವರು. ನೆಮ್ಮದಿಯಿಂದ ಇರುವುದು ಎಂದರೆ ಹೇಗಿರುತ್ತದೆ ಎಂದು ತೋರಿಸಿಕೊಟ್ಟವರು. ದೊಡ್ಡ ಕನಸುಗಳನ್ನು ಕಾಣುವುದು ಖಂಡಿತಾ ಸರಿಯಾದದ್ದು ಎಂದು ಪ್ರತಿದಿನ ಹೇಳುತ್ತಾ, ನನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನದನ್ನು ಸಾಧಿಸಲು ನನ್ನನ್ನು ಪ್ರೇರೇಪಿಸಿದವರು ಇವರೇ! ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ; ಸೆಮಿಫೈನಲ್ ಆಸೆ ಜೀವಂತ!
‘ಯಾರೂ ನೋಡುತ್ತಿಲ್ಲ ಎಂಬಂತೆ ನನ್ನ ಪಾಡಿಗೆ ನಾನು ಡ್ಯಾನ್ಸ್ ಮಾಡುವುದನ್ನು ಅವರು ಎಂದೂ ತಡೆದಿಲ್ಲ. ಸ್ನೇಹಿತರೊಂದಿಗೆ ಪ್ರವಾಸ ಮಾಡುವುದು ಎಷ್ಟು ಸುಂದರ ಎಂಬುದನ್ನು ತೋರಿಸಿಕೊಟ್ಟವರು. ನನ್ನನ್ನು ನಂಬಿ, ಈ ಮನುಷ್ಯನ ಬಗ್ಗೆ ನಾನು ಒಂದು ಪುಸ್ತಕವನ್ನೇ ಬರೆಯಬಲ್ಲೆ! ಎಂದು ರಶ್ಮಿಕಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಎರಡು ಸಂಪ್ರದಾಯದಂತೆ ಮದುವೆ
ಉದಯಪುರದಿಂದ 50 ಕಿ.ಮೀ ದೂರದಲ್ಲಿರುವ ಐಷಾರಾಮಿ ಹೋಟೆಲ್ ‘ಐಟಿಸಿ ಮೆಮೆಂಟೋಸ್'ನಲ್ಲಿ (ITC Mementos) ಈ ಮದುವೆ ನಡೆದಿದೆ. ಬೆಳಗ್ಗೆ 10:10ಕ್ಕೆ ವಿಜಯ್ ಅವರ ತೆಲುಗು ಸಂಪ್ರದಾಯದಂತೆ ಮದುವೆ ನಡೆದರೆ, ಸಂಜೆ ರಶ್ಮಿಕಾ ಅವರ ಮೂಲವಾದ ಕೊಡವ (ಕೂರ್ಗ್) ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ಶಾಸ್ತ್ರಗಳು ನಡೆದಿವೆ. ಮದುವೆಯ ಸಂಭ್ರಮದ ನಡುವೆಯೂ ಈ ಜೋಡಿ, ಹೋಟೆಲ್ ಹೊರಗೆ ಕಾಯುತ್ತಿದ್ದ ಪಾಪರಾಜಿಗಳಿಗೆ (ಫೋಟೋಗ್ರಾಫರ್‌ಗಳಿಗೆ) ಸಿಹಿ ಹಂಚಿ ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ: ಪಾಕ್-ಅಫ್ಘಾನ್ ಗಡಿಯಲ್ಲಿ ಯುದ್ಧ: 55 ಪಾಕಿಸ್ತಾನಿ ಸೈನಿಕರ ಅಂತ್ಯ, ಕಾಬೂಲ್ ಮೇಲೆ ಏರ್​ಸ್ಟ್ರೈಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us