Advertisment

ಟೀಮ್ ಇಂಡಿಯಾ ಆಟಗಾರ ರಿಂಕು ಸಿಂಗ್‌ಗೆ ಪಿತೃಶೋಕ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆ ನಿಧನ

ಅತ್ಯಂತ ಕಡುಬಡತನದಿಂದ ಬಂದು ಅಪ್ಪನಿಗೆ ಆಸರೆಯಾಗಿ, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ರಿಂಕು ಸಿಂಗ್ ಅವರ ಬದುಕಿನಲ್ಲಿ ಇದೀಗ ದೊಡ್ಡ ಆಘಾತ ಎದುರಾಗಿದ್ದು, ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ.

author-image
Ganesh Kerekuli
Rinku singh father
Advertisment
  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕ್ರಿಕೆಟಿಗ ರಿಂಕು ಸಿಂಗ್ ತಂದೆ ಖಾನ್‌ಚಂದ್ ಸಿಂಗ್
  • ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
  • ರಿಂಕು ಕುಟುಂಬಕ್ಕೆ ಸಂತಾಪ ಸೂಚಿಸಿದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್

ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ (Rinku Singh) ಅವರ ಕುಟುಂಬದಲ್ಲಿ ತೀವ್ರ ಶೋಕ ಮಡುಗಟ್ಟಿದೆ. ರಿಂಕು ಅವರ ತಂದೆ ಖಾನ್‌ಚಂದ್ ಸಿಂಗ್ (Khanchand Singh) ಅವರು ಶುಕ್ರವಾರ ಕ್ಯಾನ್ಸರ್‌ನಿಂದಾಗಿ (Stage-four cancer) ಕೊನೆಯುಸಿರೆಳೆದಿದ್ದಾರೆ.

Advertisment

ಖಾನ್‌ಚಂದ್ ಸಿಂಗ್, ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ಮಹಾಮಾರಿಯಿಂದ ಬಳಲುತ್ತಿದ್ದರು. ಅವರಿಗೆ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವಾರದ ಆರಂಭದಲ್ಲಿ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರನ್ನು ವೆಂಟಿಲೇಟರ್ (Ventilator) ಬೆಂಬಲದಲ್ಲಿ ಇರಿಸಲಾಗಿತ್ತು.

ಆಸ್ಪತ್ರೆಗೆ ದೌಡಾಯಿಸಿದ್ದ ರಿಂಕು ಸಿಂಗ್

ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ಟೀಮ್ ಇಂಡಿಯಾ ಜೊತೆಯಲ್ಲಿದ್ದ ರಿಂಕು ಸಿಂಗ್, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ತಮ್ಮ ತಂದೆಯ ಗಂಭೀರ ಆರೋಗ್ಯ ಸ್ಥಿತಿ ತಿಳಿದು ಆಸ್ಪತ್ರೆಗೆ ದೌಡಾಯಿಸಿದ್ದರು. ತಂದೆಯನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದರು. ತಂದೆಯ ಸ್ಥಿತಿ ಚಿಂತಾಜನಕವಾಗಿದ್ದರೂ, ಕರ್ತವ್ಯ ಪ್ರಜ್ಞೆಯಿಂದ ರಿಂಕು ಮತ್ತೆ ತಂಡವನ್ನು ಸೇರಿಕೊಂಡಿದ್ದರು. ಆದರೆ, ಜಿಂಬಾಬ್ವೆ ವಿರುದ್ಧದ ಪಂದ್ಯದ ಆಡುವ ಬಳಗದಲ್ಲಿ (Playing XI) ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಅವರ ಬದಲಿಗೆ ಸಂಜು ಸ್ಯಾಮ್ಸನ್ ಕಣಕ್ಕಿಳಿದಿದ್ದರು. ಇದೀಗ ತಂದೆಯನ್ನು ಕಳೆದುಕೊಂಡಿರುವ ರಿಂಕು ಹಾಗೂ ಅವರ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ.

ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ 256 ರನ್ ಭಾರಿಸಿದ ಟೀಮ್ ಇಂಡಿಯಾ: ಪಂದ್ಯ ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಭಾರತ

Advertisment

rinku singh father (1)

ಸಂತಾಪ ಸೂಚಿಸಿದ ಹರ್ಭಜನ್ ಸಿಂಗ್

ರಿಂಕು ಸಿಂಗ್ ತಂದೆಯ ನಿಧನಕ್ಕೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕಂಬನಿ ಮಿಡಿದಿದ್ದಾರೆ. ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಿಂಕು ಸಿಂಗ್ ಅವರ ತಂದೆ ಶ್ರೀ ಖಾನ್‌ಚಂದ್ ಸಿಂಗ್ ಜಿ ಅವರ ನಿಧನದ ಸುದ್ದಿ ತಿಳಿದು ತೀವ್ರ ನೋವಾಗಿದೆ. ಟಿ20 ವಿಶ್ವಕಪ್ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಈ ಹೊತ್ತಿನಲ್ಲಿ, ರಿಂಕು ಮತ್ತು ಅವರ ಕುಟುಂಬಕ್ಕೆ ಇದು ಅತ್ಯಂತ ಕಠಿಣ ಸಮಯವಾಗಿದೆ. ನನ್ನ ಪ್ರಾರ್ಥನೆಗಳು ಅವರೊಂದಿಗಿವೆ. ಅಗಲಿದ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ದುಃಖತಪ್ತ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ, ಧೈರ್ಯವನ್ನು ನೀಡಲಿ ಎಂದು ಭಜ್ಜಿ ಬರೆದುಕೊಂಡಿದ್ದಾರೆ.

ಅತ್ಯಂತ ಕಡುಬಡತನದಿಂದ ಬಂದು ಅಪ್ಪನಿಗೆ ಆಸರೆಯಾಗಿ, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ರಿಂಕು ಸಿಂಗ್ ಅವರ ಬದುಕಿನಲ್ಲಿ ಇದೀಗ ದೊಡ್ಡ ಆಘಾತ ಎದುರಾಗಿದ್ದು, ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: 84ನೇ ವಸಂತಕ್ಕೆ ಕಾಲಿಟ್ಟ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ; ಗಣ್ಯರಿಂದ ಶುಭಾಶಯ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rinku Singh
Advertisment
Advertisment
Advertisment