/newsfirstlive-kannada/media/post_attachments/wp-content/uploads/2023/11/Vijayendra_BSy.jpg)
ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು 84ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬ ಹಿನ್ನೆಲೆ, ಶಿವಮೊಗ್ಗದ ಶಿಕಾರಿಪುರದಲ್ಲಿ ಇಂದು ಬಿಎಸ್​ವೈ ಬೆಳಗ್ಗೆಯಿಂದ ಸಂಜೆಯವರೆಗೂ ಸಾಲು ಸಾಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಮೊದಲಿಗೆ ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ 3 ದೇವಾಲಯಗಳಿಗೆ ಭೇಟಿ ನೀಡಲಿದ್ದು, ಬಳಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ ಶಿಕಾರಿಪುರದ ಕುಮದ್ವತಿ ಕಾಲೇಜು ಆವರಣದ ವೇದಿಕೆ ಕಾರ್ಯಕ್ರಮದಲ್ಲಿ ಬಿಜೆಪಿಯ ಎಲ್ಲಾ ನಾಯಕರು ಬಿಎಸ್​ವೈಗೆ ಶುಭ ಕೋರಲಿದ್ದಾರೆ.
ಸಂಜೆ ಅದೇ ಕಾಲೇಜು ಆವರಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಖ್ಯಾತ ಗಾಯಕಿ ಮಂಗ್ಲಿ ತಂಡದಿಂದ ಸಂಗೀತ ರಸಸಂಜೆ ನಡೆಯಲಿದೆ.
ಇದನ್ನೂ ಓದಿ:ಜಿಂಬಾಬ್ವೆ ವಿರುದ್ಧ 256 ರನ್ ಭಾರಿಸಿದ ಟೀಮ್ ಇಂಡಿಯಾ: ಪಂದ್ಯ ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಭಾರತ
ಸರಿಸಾಟಿಯಿಲ್ಲದ ಜನನಾಯಕ, ರೈತಬಂಧು, ಕರುನಾಡಿನಲ್ಲಿ ಕಮಲ ಅರಳಿಸಿದ ಕಾಯಕ ನಿಷ್ಠ, ದಣಿವರಿಯದ ಧೀಮಂತ, ಹುಟ್ಟು ಹೋರಾಟಗಾರ, ಪೂಜ್ಯ ತಂದೆಯವರಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಜನ್ಮದಿನದ ಗೌರವಪೂರ್ವಕ ಶುಭಾಶಯಗಳು.
— Vijayendra Yediyurappa (@BYVijayendra) February 27, 2026
ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ನಿಮ್ಮ ಛಲ, ಜನಸಾಮಾನ್ಯರ, ರೈತರ ಪರವಾದ ನಿಮ್ಮ ಹೋರಾಟದ ಹಾದಿ, ಬದ್ಧತೆ ಮತ್ತು ಪರಿಶ್ರಮದ… pic.twitter.com/UC96edTrvC
ಅಭಿವೃದ್ಧಿಯ ಹರಿಕಾರ, ರೈತ ಬಂಧು, ಸಂಘಟನಾ ಚತುರ, ಜನಮೆಚ್ಚಿದ ನಾಯಕ, ನಮ್ಮ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು, ನಮ್ಮೆಲ್ಲರ ಮಾರ್ಗದರ್ಶಕರಾದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
— R. Ashoka (@RAshokaBJP) February 27, 2026
ಇನ್ನೂ ಹೆಚ್ಚಿನ ಜನಸೇವೆ ಮಾಡಲು, ಯುವಕರಿಗೆ ಮಾರ್ಗದರ್ಶನ ನೀಡಲು, ಭಗವಂತ ಆಯುಷ್ಯ, ಉತ್ತಮ ಆರೋಗ್ಯ… pic.twitter.com/cQ9uxVKa1I
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us