Advertisment

ಪಾಕ್-ಅಫ್ಘಾನ್ ಗಡಿಯಲ್ಲಿ ಯುದ್ಧ: 55 ಪಾಕಿಸ್ತಾನಿ ಸೈನಿಕರ ಅಂತ್ಯ, ಕಾಬೂಲ್ ಮೇಲೆ ಏರ್​ಸ್ಟ್ರೈಕ್..!

ಪಾಕಿಸ್ತಾನ - ಅಫ್ಘಾನಿಸ್ತಾನದ ನಡುವಿನ ‘ಡ್ಯುರಾಂಡ್ ಲೈನ್’ ಗಡಿ ವಿವಾದ ಇದೀಗ ಭೀಕರ ಯುದ್ಧದ ಸ್ವರೂಪ ಪಡೆದುಕೊಂಡಿದೆ. ಎರಡು ರಾಷ್ಟ್ರಗಳ ನಡುವೆ ಭಾರೀ ಗುಂಡಿನ ಚಕಮಕಿ, ವೈಮಾನಿಕ ದಾಳಿಗಳು ನಡೆಯುತ್ತಿದ್ದು, ತಾಲಿಬಾನ್ ಪಡೆಗಳು ಬರೋಬ್ಬರಿ 55 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಘೋಷಿಸಿಕೊಂಡಿವೆ.

author-image
Ganesh Kerekuli
pakistan vs afghanistan
Advertisment
  • ಪಾಕಿಸ್ತಾನ ಮತ್ತು ತಾಲಿಬಾನ್ ನಡುವೆ ಗಡಿ ಸಂಘರ್ಷ
  • ಕಾಬೂಲ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ಏರ್‌ಸ್ಟ್ರೈಕ್
  • ಪಾಕ್​ನ 2 ಮಿಲಿಟರಿ ಬೇಸ್, 19 ಪೋಸ್ಟ್‌ಗಳು ತಾಲಿಬಾನ್ ವಶ

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ‘ಡ್ಯುರಾಂಡ್ ಲೈನ್’ (Durand Line) ಗಡಿ ವಿವಾದ ಇದೀಗ ಭೀಕರ ಯುದ್ಧದ ಸ್ವರೂಪ ಪಡೆದುಕೊಂಡಿದೆ. ಎರಡು ರಾಷ್ಟ್ರಗಳ ನಡುವೆ ಭಾರೀ ಗುಂಡಿನ ಚಕಮಕಿ, ವೈಮಾನಿಕ ದಾಳಿಗಳು ನಡೆಯುತ್ತಿದ್ದು, ತಾಲಿಬಾನ್ ಪಡೆಗಳು ಬರೋಬ್ಬರಿ 55 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಘೋಷಿಸಿಕೊಂಡಿವೆ.

Advertisment

ಶುಕ್ರವಾರ ಮುಂಜಾನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಕಂದಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ಸೇನೆ ವೈಮಾನಿಕ ದಾಳಿ (Airstrikes) ನಡೆಸಿದೆ. ಇದಕ್ಕೆ ಪ್ರತಿಯಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನದ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಹೇಡಿ ಸೇನೆ ವೈಮಾನಿಕ ದಾಳಿ ನಡೆಸಿದೆ, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾಲಿಬಾನ್ ಹೇಳಿದ್ದೇನು?

ಅಫ್ಘಾನಿಸ್ತಾನದ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಗುರುವಾರ ರಾತ್ರಿ 8 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿರುವುದಾಗಿ ತಿಳಿಸಿದೆ. ಪಾಕಿಸ್ತಾನದ ಮಿಲಿಟರಿ ನಮ್ಮ ಗಡಿಯನ್ನು ಉಲ್ಲಂಘಿಸಿ ಮಹಿಳೆಯರು ಮತ್ತು ಮಕ್ಕಳನ್ನು ಕೊಂದಿದೆ. ಇದಕ್ಕೆ ಪ್ರತಿಯಾಗಿ ಪಕ್ಟಿಕಾ, ಖೋಸ್ಟ್, ನಂಗರ್‌ಹಾರ್, ಕುನಾರ್ ಪ್ರಾಂತ್ಯಗಳ ಗಡಿಯುದ್ದಕ್ಕೂ ನಾವು ಪ್ರತಿದಾಳಿ ನಡೆಸಿದ್ದೇವೆ. 4 ಗಂಟೆಗಳ ಕಾಲ ನಡೆದ ಈ ಭೀಕರ ಕಾಳಗದಲ್ಲಿ 55 ಪಾಕಿಸ್ತಾನಿ ಸೈನಿಕರನ್ನು ಕೊಲ್ಲಲಾಗಿದೆ. ಪಾಕಿಸ್ತಾನದ 2 ಪ್ರಮುಖ ಮಿಲಿಟರಿ ಬೇಸ್‌ಗಳು ಮತ್ತು 19 ಪೋಸ್ಟ್‌ಗಳನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್ ಹೇಳಿಕೊಂಡಿದೆ.

ಇದನ್ನೂ ಓದಿ: 84ನೇ ವಸಂತಕ್ಕೆ ಕಾಲಿಟ್ಟ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ; ಗಣ್ಯರಿಂದ ಶುಭಾಶಯ

Advertisment

ಕೆಲವು ಪಾಕ್ ಸೈನಿಕರನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು, ಪಾಕಿಸ್ತಾನದ ಟ್ಯಾಂಕರ್ ಒಂದನ್ನು ಧ್ವಂಸಗೊಳಿಸಲಾಗಿದೆ ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಫ್ಘಾನ್ ಪಡೆಗಳು ತಿಳಿಸಿವೆ. ಇದೆ ವೇಳೆ ತಮ್ಮ ಕಡೆಯೂ ಸಾವು-ನೋವು ಸಂಭವಿಸಿದ್ದು 8 ತಾಲಿಬಾನ್ ಹೋರಾಟಗಾರರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅದು ಒಪ್ಪಿಕೊಂಡಿದೆ.

ಪಾಕಿಸ್ತಾನ ಏನು ಹೇಳ್ತು..?

ತಾಲಿಬಾನ್‌ನ ಈ ಅಂಕಿ-ಅಂಶಗಳನ್ನು ಪಾಕಿಸ್ತಾನ ಕಟುವಾಗಿ ತಿರಸ್ಕರಿಸಿದೆ. ಪಾಕ್ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಮಾತನಾಡಿ, ‘ಕೇವಲ ಇಬ್ಬರು ಸೈನಿಕರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಆದರೆ ನಮ್ಮ ಪ್ರತಿದಾಳಿಗೆ ಬರೋಬ್ಬರಿ 36 ಅಫ್ಘಾನ್ (ತಾಲಿಬಾನ್) ಹೋರಾಟಗಾರರು ಹತರಾಗಿದ್ದಾರೆ. ನಾವು ಯಾವುದೇ ಪ್ರಚೋದನೆ ಇಲ್ಲದೆ ದಾಳಿ ಮಾಡಿಲ್ಲ. ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ತಕ್ಕ ತಿರುಗೇಟು ನೀಡುತ್ತಿದ್ದೇವೆ ಎಂದಿದ್ದಾರೆ. ಪಾಕ್ ಪ್ರಧಾನಿಯ ವಕ್ತಾರರು, ಯಾವುದೇ ಪಾಕ್ ಸೈನಿಕರನ್ನು ತಾಲಿಬಾನ್ ಸೆರೆಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರ ರಿಂಕು ಸಿಂಗ್‌ಗೆ ಪಿತೃಶೋಕ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆ ನಿಧನ

Advertisment

ಖೈಬರ್ ಪಖ್ತುಂಖ್ವಾ (KP) ಪ್ರಾಂತ್ಯದ ಗಡಿಯುದ್ದಕ್ಕೂ ಅಫ್ಘಾನ್ ತಾಲಿಬಾನ್ ಪಡೆಗಳೇ ಮೊದಲು ವಿನಾಕಾರಣ ಗುಂಡಿನ ದಾಳಿ ಆರಂಭಿಸಿದವು. ಹೀಗಾಗಿ ಚಿತ್ರಾಲ್, ಖೈಬರ್, ಕುರ್ರಂ ಸೆಕ್ಟರ್‌ಗಳಲ್ಲಿ ತಾಲಿಬಾನ್‌ಗೆ ತಕ್ಕ ಶಿಕ್ಷೆ ನೀಡಲಾಗುತ್ತಿದೆ ಎಂದು ಪಾಕ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಸಂಘರ್ಷದ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ‘ಪಾಕಿಸ್ತಾನವು ಶಾಂತಿ ಮತ್ತು ಪ್ರಾದೇಶಿಕ ಸಮಗ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ಶಾಂತಿಯನ್ನು ದೌರ್ಬಲ್ಯ ಎಂದು ಭಾವಿಸುವವರು ಬಲವಾದ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ. ಯಾರೊಬ್ಬರೂ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ತೊರ್ಖಾಮ್ ಗಡಿಯಲ್ಲಿ ಬಿಗುವಿನ ವಾತಾವರಣ

ಎರಡೂ ದೇಶಗಳ ನಡುವಿನ ಪ್ರಮುಖ ಕ್ರಾಸಿಂಗ್ ಪಾಯಿಂಟ್ ಆದ 'ತೊರ್ಖಾಮ್' ಗಡಿ ಪ್ರದೇಶದಲ್ಲೂ ಭಾರಿ ಕಾಳಗ ಶುರುವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಫ್ಘಾನ್ ಅಧಿಕಾರಿಗಳು ಗಡಿಯ ಬಳಿಯಿರುವ ನಿರಾಶ್ರಿತರ ಶಿಬಿರಗಳನ್ನು ತೆರವುಗೊಳಿಸುತ್ತಿದ್ದಾರೆ. ಇತ್ತ ಪಾಕಿಸ್ತಾನದ ಕಡೆಯೂ ಗಡಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

Advertisment

ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ; ಸೆಮಿಫೈನಲ್ ಆಸೆ ಜೀವಂತ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pakistan Afghanistan Border Clash
Advertisment
Advertisment
Advertisment