BREAKING: ಸುಪ್ರೀಂ ಕೋರ್ಟ್​ ತೀರ್ಪು ಬೆನ್ನಲ್ಲೇ ಎ1 ಆರೋಪಿ ಪವಿತ್ರಾ ಗೌಡ ಅರೆಸ್ಟ್

ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್​ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಪೊಲೀಸರು ಪವಿತ್ರಾ ಗೌಡರನ್ನು ಬಂಧಿಸಿದ್ದಾರೆ.

author-image
Bhimappa
ಮೃತದೇಹ ವಿಲೇವಾರಿಗೆ ₹30 ಲಕ್ಷಕ್ಕೆ ಡೀಲ್​ ಒಪ್ಪಿಸಿದ್ದ ದರ್ಶನ್​.. ಆದ್ರೆ ಪ್ಲಾನ್ ಫೇಲ್ ಆಗಿದ್ದು ಎಲ್ಲಿ ಗೊತ್ತಾ?
Advertisment

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್​ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಪೊಲೀಸರು ಪವಿತ್ರಾ ಗೌಡರನ್ನು ಬಂಧಿಸಿದ್ದಾರೆ.

ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರು ಬೆಳಗ್ಗೆ ಇಂದ ಬೆಂಗಳೂರಿನ ಆರ್​.ಆರ್ ನಗರದ ನಿವಾಸದಲ್ಲೇ ಇದ್ದರು. ಸುಪ್ರೀಂ ಕೋರ್ಟ್​ ತೀರ್ಪು ಹಿನ್ನೆಲೆಯಲ್ಲಿ ರಾಜಾರಾಜೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಕೆ ಮಾಡಿ ವಾಪಸ್ ಮನೆಗೆ ಬಂದಿದ್ದರು.ನ್ಯಾಯಾಲಯ ತಕ್ಷಣವೇ ಬಂಧಿಸುವಂತೆ ತೀರ್ಪು ನೀಡಿದ್ದರಿಂದ ಇದೀಗ ಪೊಲೀಸರು ಪವಿತ್ರಾ ಗೌಡರನ್ನು ಅರೆಸ್ಟ್ ಮಾಡಿದ್ದಾರೆ. 

ಇದನ್ನೂ ಓದಿ:ದರ್ಶನ್​, ಪವಿತ್ರಾ ಗೌಡ ಸೇರಿ ಮತ್ತೆ ಜೈಲು ಪಾಲಾಗುವ 7 ಆರೋಪಿಗಳು ಇವರೇ..

PAVITRA_GOWDA

ಆರ್​.ಆರ್​ ನಗರದ ಪೊಲೀಸರು ಕೋರ್ಟ್​ನಿಂದ ಆದೇಶ ಬರುತ್ತಿದ್ದಂತೆ ಆರೋಪಿಗಳ ಮೇಲೆ ನಿಗಾ ವಹಿಸಿತ್ತು. ಅದರಂತೆ ಸದ್ಯ ಇದೀಗ ಪವಿತ್ರಾ ಗೌಡರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ 14ನೇ ಆರೋಪಿ ಆಗಿರುವ ಪ್ರದೂಶ್​ನನ್ನು ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ಒಬ್ಬೊಬ್ಬ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ. ದರ್ಶನ್ ಅವರು ಬಂದು ಶರಣಾಗುತ್ತಾರಾ ಇಲ್ವಾ, ಅರೆಸ್ಟ್ ಆಗುತ್ತಾರಾ ಎಂದು ಕಾದು ನೋಡಬೇಕಿದೆ. 

ಈಗ ಪವಿತ್ರಾ ಗೌಡ, ಪ್ರದೂಶ್ ಅರೆಸ್ಟ್ ಆಗಿದ್ದು ದರ್ಶನ್ ಸೇರಿ ​ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಅವರನ್ನು ಬಂಧಿಸಬೇಕಾಗಿದೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Pavitra Gowda
Advertisment