ಕಾಂತಾರ ಪ್ರೀಕ್ವೆಲ್​ ರಿಲೀಸ್​ಗೆ ಕೇವಲ 27 ದಿನಗಳು ಬಾಕಿ.. ಹೊಂಬಾಳೆ ಹೊಸ ಅಪ್​ಡೇಟ್​?

ರಿಷಭ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಕಾಂತಾರ ಪ್ರೀಕ್ವೆಲ್ ಈಗಾಗಲೇ ಎಲ್ಲ ರೆಡಿಯಾಗಿದೆ. ಈ ಮಹತ್ವಾಕಾಂಕ್ಷೆ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ಕೆಲವು ದಿನಗಳು ಉಳಿದಿವೆ. ಅಂದರೆ 27 ದಿನಗಳು ಮಾತ್ರ ಉಳಿದಿದ್ದು ಹೊಸ ಅಪ್​ಡೇಟ್​ ಸದ್ಯದಲ್ಲೇ..

author-image
Bhimappa
RISHABH_SHETTY
Advertisment

ಸ್ಯಾಂಡಲ್​ವುಡ್​ನ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಕಾಂತಾರ ಪ್ರೀಕ್ವೆಲ್ ಈಗಾಗಲೇ ಎಲ್ಲ ರೆಡಿಯಾಗಿದೆ. ಈ ಮಹತ್ವಾಕಾಂಕ್ಷೆ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ಕೆಲವು ದಿನಗಳು ಉಳಿದಿವೆ. ಅಂದರೆ 27 ದಿನಗಳು ಮಾತ್ರ ಉಳಿದಿದ್ದು ಹೊಸ ಅಪ್​ಡೇಟ್​ ಸದ್ಯದಲ್ಲೇ ಕೊಡಲಾಗುವುದು ಎಂದು ಹೊಂಬಾಳೆ ಫಿಲಂನವರು ಹೇಳಿದ್ದಾರೆ. 

ರಿಷಭ್ ಶೆಟ್ಟಿ ಅವರು ನಿರ್ದೇಶನ ಮಾಡಿ, ನಟಿಸಿರು ಸಿನಿಮಾ ಕಾಂತಾರ. ಈಗಾಗಲೇ ಈ ಸಿನಿಮಾದ ಭಾಗ- 2 ಅಬ್ಬರಿಸಿ ಬೊಬ್ಬಿರಿದಿದೆ. ಅಭಿಮಾನಿಗಳ ಮನ ಕೂಡ ಗೆದ್ದಿದೆ. ಹೀಗಾಗಿ ಕಾಂತಾರ ಪ್ರೀಕ್ವೆಲ್ ಯಾವಾಗ ಬರುತ್ತೆ ಎಂದು ಫ್ಯಾನ್ಸ್​ ಕಾತುರದಿಂದ ಇದ್ದಾರೆ. ಮಾಹಿತಿ ಪ್ರಕಾರ ಸಿನಿಮಾದ ಎಲ್ಲ ಕೆಲಸಗಳು ಮುಗಿದಿದ್ದು ಬಿಡುಗಡೆ ಮಾತ್ರ ಬಾಕಿ ಇದೆ. ನಟಿ ರುಕ್ಮಿಣಿ ವಸಂತ್‌ ಕನಕವತಿ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  

ಇದನ್ನೂ ಓದಿ:RCB ವಿಜಯೋತ್ಸವದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್​ ಟೂರ್ನಿ.. ಫ್ಯಾನ್ಸ್​ಗೆ ಚಾನ್ಸ್​?

ಕಾಂತಾರ- 1 ಶೂಟಿಂಗ್ ಮಾಡುವಾಗ ಅಸಲಿಗೆ ಏನಾಯಿತು.. ಸ್ಪಷ್ಟನೆ ಕೊಟ್ಟ ಚಿತ್ರತಂಡ, ಹೇಳಿದ್ದೇನು?

ಅಕ್ಟೋಬರ್ 2 ಗಾಂಧೀ ಜಯಂತಿಯಂದು ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದ್ದು ಚಿತ್ರತಂಡ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಗಾಂಧಿ ಜಯಂತಿಯಂದು ಸರ್ಕಾರಿ ರಜೆ ಇರುವುದರಿಂದ ಕಾಂತಾರ ಸಿನಿಮಾಕ್ಕೆ ಬಿಗ್ ಅಡ್ವಂಟೇಜ್ ಆಗುವ ಸಾಧ್ಯತೆ ಇದೆ. ಅಕ್ಟೋಬರ್ 2 ಗುರುವಾರದ ಆದರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಥಿಯೇಟರ್​ಗಳು ಸಮಾನ್ಯವಾಗಿ ಹೌಸ್​ ಫುಲ್ ಆಗೋದು ಪಕ್ಕಾ. ಹೀಗಾಗಿ ಹೊಂಬಾಳೆ ಫಿಲಂ ದೊಡ್ಡ ಲಾಭದ ನಿರೀಕ್ಷೆಯಲ್ಲಿದೆ. 

ಈಗಾಗಲೇ ಕಾಂತಾರ ಭಾಗ-2 ಸೂಪರ್ ಹಿಟ್ ಆಗಿದ್ದು ದೇಶದ್ಯಾಂತ ಹೆಚ್ಚು ವೀಕ್ಷಣೆ ಕಂಡಿತ್ತು. ಈ ಸಿನಿಮಾವನ್ನು ರಿಷಭ್ ಶೆಟ್ಟಿಯವರೇ ನಿರ್ದೇಶನ ಮಾಡಿ ಅಭಿನಯಿಸಿದ್ದಾರೆ. ರುಕ್ಮಿಣಿ ವಸಂತ್‌ ಕನಕವತಿ ಪಾತ್ರದಲ್ಲಿ ಮಿಂಚಿದ್ದಾರೆ. ಹೊಂಬಾಳೆ ಫಿಲಂ ಈ ಪ್ಯಾನ್​ ಇಂಡಿಯಾ ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಒಟ್ಟು 7 ಭಾಷೆಗಳಲ್ಲಿ ಕಾಂತಾರ ಪ್ರೀಕ್ವೆಲ್​ ರಿಲೀಸ್​ ಆಗಲಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲಂ ಸದ್ಯದಲ್ಲೇ ಬಿಗ್ ಅಪ್​ಡೇಟ್ ಕೊಡುವ ಸಾಧ್ಯತೆ ಇದೆ.   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Divine Star Rishab Shetty Kantara Movie Kantara buffalo
Advertisment