RCB ವಿಜಯೋತ್ಸವದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್​ ಟೂರ್ನಿ.. ಫ್ಯಾನ್ಸ್​ಗೆ ಚಾನ್ಸ್​?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿಜಯೋತ್ಸವದ ಬಳಿಕ ಸಿಲಿಕಾನ್ ಸಿಟಿಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುತ್ತವೋ, ಇಲ್ಲವೋ ಎನ್ನುವ ಅನುಮಾನ ಇದ್ದವು. ಆದರೆ ಈಗ ಈ ಟ್ರೋಫಿಯ ಪಂದ್ಯಗಳು ನಡೆಯಲಿವೆ.

author-image
Bhimappa
CHINNASWAMI_STUDIUM_NEW
Advertisment

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿಜಯೋತ್ಸವದ ಬಳಿಕ ಸಿಲಿಕಾನ್ ಸಿಟಿಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುತ್ತವೋ, ಇಲ್ಲವೋ ಎನ್ನುವ ಅನುಮಾನ ಇದ್ದವು. ಜೂನ್ 4 ರಂದು ಆರ್​ಸಿಬಿ ವಿಜಯೋತ್ಸವದ ಸಮಾರಂಭದಲ್ಲಿ ಕಾಲ್ತುಳಿತ ಸಂಭವಿಸಿ 11 ಜನ ಉಸಿರು ಚೆಲ್ಲಿದ್ದರು. ಇದಾದ ಮೇಲೆ ಚಿನ್ನಸ್ವಾಮಿಯಲ್ಲಿ ಪಂದ್ಯಗಳು ನಡೆಯಲ್ಲ ಎನ್ನಲಾಗಿತ್ತು. ಆದರೆ ಇದೀಗ ಕೆಎಸ್​ಸಿಎ ಈ ಟ್ರೋಫಿಯ ಪಂದ್ಯಗಳು ನಡೆಯಲಿವೆ ಎಂದು ಹೇಳಲಾಗಿದೆ.

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೆಎಸ್​ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್) ಕೆ ತಿಮ್ಮಪ್ಪಯ್ಯ ಮೆಮೊರಿಯಲ್ ಟ್ರೋಫಿಯನ್ನು ಆಯೋಜನೆ ಮಾಡಿದೆ. ಇದು ರೆಡ್​ ಬಾಲ್ ಪ್ರಿ-ಸೀಸನ್​ ಟೂರ್ನ್​ಮೆಂಟ್​ ಆಗಿದ್ದು ಒಟ್ಟು 16 ಟೀಮ್​ಗಳು ಇದರಲ್ಲಿ ಭಾಗವಹಿಸಲಿವೆ. ಪಂದ್ಯ ನಡೆಯುವ ವೇಳೆ ಸುರಕ್ಷತೆ ಕಾರಣದಿಂದ ಅಭಿಮಾನಿಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಚಿನ್ನಾಭರಣ ಖರೀದಿ ಮಾಡೋರಿಗೆ ಬಿಗ್ ಶಾಕ್.. ಬಂಗಾರದ ಬೆಲೆಯಲ್ಲಿ ಭಾರೀ ಹೆಚ್ಚಳ

ಕಾಲ್ತುಳಿತಕ್ಕೆ ಸಾಕ್ಷಿಯಾದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಶಿಫ್ಟ್‌ ಆಗುತ್ತಾ? ಹೊಸ ಜಾಗ ಯಾವುದು?

ಸೆಪ್ಟೆಂಬರ್​ 26 ರಿಂದ ಒಟ್ಟು 6 ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ಇದರಲ್ಲಿ ಸೆಮಿ ಫೈನಲ್​ ಹಾಗೂ ಫೈನಲ್​ ಮ್ಯಾಚ್​ಗಳು ಕೂಡ ಸೇರಿವೆ. ಮುಂಬೈ, ವಿದರ್ಭ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಛತ್ತೀಸ್​ಘಡ ತಂಡಗಳು ಭಾಗಿಯಾಗಲಿವೆ. ಈ ತಂಡಗಳಲ್ಲಿ ಭಾರತದ ಖ್ಯಾತ ಕ್ರಿಕೆಟರ್​ಗಳಾದ ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ವೆಂಕಟೇಶ್ ಅಯ್ಯರ್, ವಿಜಯ್ ಶಂಕರ್ ಹಾಗೂ ಶಶಾಂಕ್ ಸಿಂಗ್ ಸೇರಿದಂತೆ ಇನ್ನಿತರರು ಆಡಲಿದ್ದಾರೆ. 

ಮೊನ್ನೆ ಮೊನ್ನೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದರಿಂದ ಟಿ20 ಮಹಾರಾಜ ಟ್ರೋಫಿಯನ್ನು ಮೈಸೂರಿನಲ್ಲಿ ಆಯೋಜನೆ ಮಾಡಲಾಗಿತ್ತು. ದೊಡ್ಡ ದೊಡ್ಡ ಸಮಾರಂಭಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಸುರಕ್ಷತವಾಗಿಲ್ಲ ಎಂದು ಇತ್ತೀಚೆಗೆ ಕರ್ನಾಟಕ ಸರ್ಕಾರ ಹೊಸ ಕ್ರಿಕೆಟ್​ ಸ್ಟೇಡಿಯಂ ಅನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಇದು 75 ಎಕೆರೆಯಲ್ಲಿ ನಿರ್ಮಾಣವಾಗಲಿದ್ದು 60 ಸಾವಿರ ಆಸನಗಳನ್ನು ಒಳಗೊಂಡಿರಲಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

cricket players RCB CARES Bangalore Chinnaswamy Stadium
Advertisment