ಕಾಂತಾರ ಚಾಪ್ಟರ್ 1 ಸಕ್ಸಸ್ ಬಳಿಕ ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ​ ಕಷ್ಟದ ದಿನ ಸ್ಮರಿಸಿದ್ದಾರೆ. ಅವತ್ತು ಒಂದೇ ಒಂದು ಶೋಗಾಗಿ ಕೈ-ಕಾಲು ಹಿಡಿದಿದ್ದೆ ಅಂತ ಹೇಳಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ಮೊಟ್ಟ ಮೊದಲ ಚಿತ್ರ ರಿಕ್ಕಿ 2016ರ ಫೆಬ್ರವರಿ ತಿಂಗಳಲ್ಲಿ ರಿಲೀಸ್ ಆಗಿತ್ತು.
ಆದರೆ ಅವತ್ತು ರಿಕ್ಕಿ ಚಿತ್ರಕ್ಕೆ ಕರಾವಳಿಯಲ್ಲಿ ಥಿಯೇಟರ್ ಸಿಕ್ಕಿಲ್ಲ. ಅದರಲ್ಲೂ ಮಂಗಳೂರಲ್ಲಿ ಒಂದೇ ಒಂದು ಶೋ ಸಿಕ್ಕಿರಲಿಲ್ಲ. ಕೊನೆಗೆ ಕೆಲವರ ಕೈ-ಕಾಲು ಹಿಡಿದು ಒಂದೇ ಒಂದು ಶೋ ಗಿಟ್ಟಿಸಿಕೊಂಡದ್ದೆ. ಆದ್ರೆ ಇವತ್ತು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ 1, ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಾಣ್ತಿದೆ.
ಎಲ್ಲಾ ಕಡೆಯೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ ಅಂತಾ ಅವಮಾನದಿಂದ ಸನ್ಮಾನದವರೆಗಿನ ಜರ್ನಿ ನೆನಪಿಸಿಕೊಂಡಿದ್ದಾರೆ. ಈ ಬೆಳವಣಿಗೆ ಹಾಗೂ ಈ ಯಶಸ್ಸಿಗೆ ನೀವು ಕಾರಣ ಅಂತಾ ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬ..! ಕಾಂತಾರ ಹೊಸ ದಾಖಲೆ.. ಒಂದೇ ದಿನ ಸೇಲ್ ಆದ ಟಿಕೆಟ್ ಎಷ್ಟು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ