/newsfirstlive-kannada/media/media_files/2025/10/13/rishab-shetty-tweet-1-2025-10-13-15-31-27.jpg)
ಕಾಂತಾರ
ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಅವರ ಕಾಂತಾರ ಕ್ಲೈಮ್ಯಾಕ್ಸ್ ಶೂಟಿಂಗ್ ಫೋಟೊವನ್ನ ಹಂಚಿಕೊಂಡಿದ್ದಾರೆ. ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ ಎಂದು ಬರೆದು ಫೋಟೊವನ್ನ ಟ್ವೀಟ್​ ಮೂಲಕ ಶೇರ್​ ಮಾಡಿದ್ದಾರೆ.
ಕಾಂತಾರ-1 ಕ್ಲೈಮ್ಯಾಕ್ಸ್​ಗೆ ಜನರು ಮೆಚ್ಚುಗೆ ವ್ಯಕ್ಯಪಡಿಸುತ್ತಿದ್ದಾರೆ. ಕಾಂತಾರ-1 ಕ್ಲೈಮ್ಯಾಕ್ಸ್​ ಮೈ ನವಿರೇಳಿಸುವ ದೃಶ್ಯಗಳಿವೆ. ರಿಷಬ್​ ಶೆಟ್ಟಿ ಕ್ಲೈಮ್ಯಾಕ್ಸ್ ಶೂಟಿಂಗ್​ ಮಾಡಿ ಕಾಲುಗಳೂ ಊದಿಕೊಂಡಿದೆ. ದೇಹ ಬ್ಯಾಲೆನ್ಸ್ ಸಿಗದೆ ನಿತ್ರಾಣವಾಗಿದೆ. ಇವತ್ತು ಸಿನಿಮಾವನ್ನ ನೋಡಿ ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ.
ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದು ರಿಷಬ್​ ಶೆಟ್ಟಿ ಕಾಂತಾರ ಕ್ಲೈಮ್ಯಾಕ್ಸ್ ಶೂಟಿಂಗ್​ ಘಟನೆಯನ್ನ ಮೆಲುಕು ಹಾಕಿದ್ದಾರೆ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
https://x.com/shetty_rishab/status/1977578854702256563
Climax shooting ನ ಸಮಯ … ಊದಿಕೊಂಡಿದ್ದ ಕಾಲು , ನಿತ್ರಾಣವಾಗಿದ್ದ ದೇಹ.. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ.. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ..
— Rishab Shetty (@shetty_rishab) October 13, 2025
ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು..
This was during the climax shoot , a swollen leg, an… pic.twitter.com/JJadywiaXN
ಇದನ್ನೂ ಓದಿ:11 ದಿನದಲ್ಲಿ 655 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ..!
ವಿಶೇಷ ಸೂಚನೆ:ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ