/newsfirstlive-kannada/media/media_files/2025/09/22/rishabh_shetty-2-2025-09-22-20-40-49.jpg)
ಡಿವೈನ್ ಸ್ಟಾರ್ ರಿಷಭ್ ಶೆಟ್ಟಿಯವರು ನಿರ್ದೇಶಿಸಿ, ನಟನೆ ಮಾಡಿರುವ ಕಾಂತಾರ ಪ್ರೀಕ್ವೆಲ್ ಸಿನಿಮಾದ ಟ್ರೈಲರ್​ ಅನ್ನು ಇಂದು ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಟ್ರೈಲರ್ ಅದ್ಧೂರಿಯಾಗಿದ್ದು ರಿಷಭ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರು ಕಣ್ಣಿಗೆ ಕುಕ್ಕುವಂತೆ ಅಭಿನಯ ಮಾಡಿದ್ದಾರೆ. ಸದ್ಯ ಈ ಎಲ್ಲದರ ಮಧ್ಯೆ ಕಾಂತಾರ ಚಿತ್ರತಂಡ ಪ್ರೀಕ್ವೆಲ್ ಸಿನಿಮಾದ ಬಳಿಕ ಇದೇ ಮೊಲದ ಸಲ ಮಾಧ್ಯಮಗೋಷ್ಠಿ ನಡೆಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು, ಸಿನಿಮಾದ ಎಲ್ಲ ಹಾಡುಗಳನ್ನು ರಿಲೀಸ್ ಮಾಡುತ್ತೇವೆ. ಸ್ವಲ್ಪ ತಡ ಆಗುತ್ತದೆ. ಪ್ಯಾನ್ ಇಂಡಿಯಾ ಮೂವಿ ಆಗಿದ್ದರಿಂದ ಕೆಲಸ ತುಂಬಾ ಇದೆ. ಮೂಸಿಕ್ ಡೈರೆಕ್ಟರ್ ಕೆಲಸ ಇನ್ನು ಇದೆ. ಹೀಗಾಗಿ ಇಲ್ಲಿಗೆ ಅವರು ಬಂದಿಲ್ಲ. ಈಗಾಗಲೇ ನನ್ನ ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳು ಆಗಿವೆ. ಊರಲ್ಲಿ ಇದ್ದು ಸಿನಿಮಾ ಮಾಡಿ ಮುಗಿಸಿದ್ದೇವೆ. ಇದೀಗ ಫಸ್ಟ್ ಟೈಮ್ ಬೆಂಗಳೂರಿಗೆ ಈ ಕಾಂತಾರ ಬಂದಿದೆ ಎಂದು ಹೇಳಿದ್ದಾರೆ.
ಮಾತನಾಡುವಾಗ ಭಾವುಕರಾದ ರಿಷಭ್ ಶೆಟ್ಟಿ ಅವರು, ಮೂರು- ನಾಲ್ಕು ಬಾರಿ ನಾನು ಸತ್ತೆ ಹೋಗಬೇಕಿತ್ತು. ಆ ಮಟ್ಟಿಗೆ ತೊಂದರೆ ಆಗಿದೆ. ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆನೇ ಮಾಡಿಲ್ಲ. ಎಲ್ಲರೂ ನಮ್ಮ ಸಿನಿಮಾ ಅಂತಾ ಕೆಲಸ ಮಾಡಿದರು. ಈ ವೇಳೆ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ. ಈ ಸಿನಿಮಾನ ಈ ಹಂತಕ್ಕೆ ತಂದಿದ್ದೇ ಕನ್ನಡಿಗರು. ಕನ್ನಡಿಗರಿಂದ ಈ ಮೂವಿ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಬಹುತೇಕ ಕನ್ನಡ ಕಲಾವಿದರೇ ಸಿನಿಮಾದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಮುಳುಗೋಗಿದ್ದರಿಂದ ಹೊರಗಡೆ ಏನು ಆಗುತ್ತಿದೆ ಎನ್ನುವುದು ನನ್ನ ಗಮನಕ್ಕೆ ಇಲ್ಲ. ಸಿನಿಮಾದ ಕಥೆ ಚೆನ್ನಾಗಿದ್ದರೇ ಇಂಡಸ್ಟ್ರಿ ಚೆನ್ನಾಗಿರುತ್ತದೆ. ಅಭಿಮಾನಿಗಳಲ್ಲಿ ಸಿನಿಮಾದ ಅಭಿರುಚಿಗಳು ಬದಲಾವಣೆ ಆದಾಗ ಸಿನಿಮಾದವರು ಅವುಗಳನ್ನು ನೀಗಿಸಬೇಕು. ಆಗ ಸಕ್ಸಸ್ ಸಿಗುತ್ತದೆ. ಅಮೆರಿಕದಲ್ಲಿ ಕಾಂತಾರ ಕನ್ನಡದಲ್ಲಿ ರಿಲೀಸ್ ಆಗುತ್ತದೆ. ಜೊತೆಗೆ ಎಲ್ಲ ಭಾಷೆಗಳಲ್ಲೂ ಇರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಕ್​ ವಿರುದ್ಧ ಗೆದ್ದ ಟೀಮ್ ಇಂಡಿಯಾದ ಮುಂದಿನ ಪಂದ್ಯ ಯಾರ ಜೊತೆ, ಎಲ್ಲಿ, ಯಾವಾಗ?
ಕಾಂತಾರ ಪ್ರೀಕ್ವೆಲ್ ಮಾಡಬೇಕಾದರೆ ಸಾಕಷ್ಟು ಕಷ್ಟಗಳನ್ನು ದಾಟಿ ಸಿನಿಮಾ ಮುಗಿಸಿದ್ದೇವೆ. ಇದರ ಮಧ್ಯೆ ಪ್ರಗತಿ ಅವರು ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತಿದ್ದರು. ಎಲ್ಲರೂ ಹೇಳುತ್ತಿದ್ದರು. ನನ್ನಿಂದ ಅಂತಾ. ಅದು ನನ್ನಿಂದ ಆಗಿದ್ದಲ್ಲ, ನನ್ನ ಹೆಂಡತಿ, ನನ್ನ ರೈಟರ್ ಟೀಂ ಮನೆ ಬಿಟ್ಟು ನನ್ನ ಜೊತೆಗೆ ಶ್ರಮ, ಶ್ರದ್ಧೆ ಹಾಕಿದ್ದರಿಂದ ದೊಡ್ಡ ಪ್ರಾಜೆಕ್ಟ್​ ಮಾಡಿ ಮುಗಿಸುವಲ್ಲಿ ಯಶಸ್ವಿಯಾದೇವು ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ