/newsfirstlive-kannada/media/media_files/2025/12/05/rishab-shetty-7-2025-12-05-09-41-49.jpg)
ಮಂಗಳೂರು: ಕಾಂತಾರ (Kantara: Chapter 1) ಸಕ್ಸಸ್ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಬಾರೇಬೈಲ್ ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ಕ್ಷೇತ್ರದಲ್ಲಿ ಹರಕೆ ನೇಮೋತ್ಸವ ನೆರವೇರಿಸಿದ್ದರು. ಈ ವೇಳೆ ದೈವ ನರ್ತಕ, ರಿಷಬ್ ಶೆಟ್ಟಿ (Rishab Shetty) ಜೊತೆ ನಡೆದುಕೊಂಡ ರೀತಿ ಸರಿ ಇಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಂದು ಅಪಸ್ವರ ಕೇಳಿಬಂದಿದೆ.
ಮತ್ತೊಂದು ವಿವಾದ ಏನು..?
ಹರಕೆ ಕೋಲ ವಿವಾದ ಬೆನ್ನಲ್ಲೇ ಕ್ಷೇತ್ರದ ಆಡಳಿತ ಮಂಡಳಿ ದೇವರ ಬಳಿ ಪ್ರಾರ್ಥನೆ ಸಲ್ಲಿಸಿತ್ತು. ಆ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ಪ್ರಾರ್ಥನೆ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ದೈವಸ್ಥಾನದ ಆಡಳಿತ ಮಂಡಳಿ ಕನ್ನಡದಲ್ಲಿ ಮಾಡಿದ್ದ ಪ್ರಾರ್ಥನೆ ಬಗ್ಗೆ ದೈವಾರಾಧಕರು ಅಪಸ್ವರ ಎತ್ತಿದ್ದಾರೆ. ದೈವಾರಾಧಾಕ ತಮ್ಮಣ್ಣ ಶೆಟ್ಟಿ ಟೀಕೆ ಮಾಡಿದ್ದು, ಕನ್ನಡದಲ್ಲಿ ಪ್ರಾರ್ಥನೆ ಮಾಡಿದ್ದು ಸರಿ ಅಲ್ಲ. ದೈವಾರಾಧನೆಯನ್ನೂ ಪ್ಯಾನ್ ಇಂಡಿಯಾ ಮಾಡಲು ಹೊರಟಿದ್ದಾರಾ?ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:45 ಸಿನಿಮಾದಲ್ಲಿ ಶಿವಣ್ಣ ಅನಿರೀಕ್ಷಿತ ಪಾತ್ರ.. ಚೆಲುವೆಯಾದ ಶಿವಣ್ಣ..!
/filters:format(webp)/newsfirstlive-kannada/media/media_files/2025/12/16/rishab-shetty-kola-2025-12-16-10-15-56.jpg)
ಇದಕ್ಕೆ ದೈವಗಳು ಬೇಗ ಉತ್ತರ ಕೊಡಲಿ. ತಪ್ಪು ಮಾಡಿದ್ರೆ ಜಾರಂದಾಯ ದೈವ ನನಗೂ ಶಿಕ್ಷೆ ನೀಡಲಿ. ಹರಕೆ ಕೋಲದಲ್ಲಿ ಇಷ್ಟು ದೊಡ್ಡ ಸಂಘರ್ಷ ಆಯಿತು. ಇದರ ಜೊತೆಗೆ ಅವರು ಮಾಡಿದ ಪ್ರಾರ್ಥನೆಯೇ ಸರಿ ಇಲ್ಲ. ಕನ್ನಡದಲ್ಲಿ ಪ್ರಾರ್ಥನೆ ಮಾಡಿದ್ರೆ ದೈವಗಳಿಗೆ ಅರ್ಥವಾಗಬೇಕಲ್ಲ? ದೈವಗಳಿಗೆ ಅರ್ಥವಾಗುವ ಭಾಷೆ ಅದು ಮಾತೃಭಾಷೆ ತುಳು. ಕನ್ನಡದಲ್ಲಿ ಪ್ರಾರ್ಥನೆ ಮಾಡಿದ್ದು ಸರಿಯಾದ ಕ್ರಮವಲ್ಲ. ನನ್ನ ಮೇಲೆ ಮಾಡಿದ ಆರೋಪಗಳು ಸಾಬೀತಾದ್ರೆ ನಾನು ದೈವಾರಾಧನೆ ನಿಲ್ಲಿಸುತ್ತೇನೆ. ಆರೋಪ ಸಾಬೀತುಪಡಿಸದೆ ಹೋದರೆ ಅವರು ತಂತ್ರಿ ಅಲ್ಲ ಕಂತ್ರಿ ಎಂದು ಹೇಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:‘ಈ ಕ್ಷೇತ್ರ ಬೆಳಗಬಾರದು ಅಂತಾ ಇಷ್ಟೆಲ್ಲ ನಡೆದಿದೆ..’ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದಕ್ಕೆ ಟ್ವಿಸ್ಟ್..!
/filters:format(webp)/newsfirstlive-kannada/media/media_files/2025/12/16/rishab-shetty-kola-1-2025-12-16-10-15-39.jpg)
ಪ್ರಾರ್ಥನೆ ಮಾಡಿರುವ ಬಗ್ಗೆ ನನಗೆ ನಂಬಿಕೆ ಇದೆ. ದೈವಾರಾಧನೆಯಲ್ಲಿ ಕನ್ನಡದ ಪ್ರಾರ್ಥನೆ ಇಲ್ಲ. ದೈವ ಅರ್ಥಮಾಡಿಕೊಳ್ಳುವ ತುಳು ಭಾಷೆಯಲ್ಲಿ ಪ್ರಾರ್ಥನೆ ಆಗಬೇಕು. ಅದು ನಿಯಮ, ಸಂಪ್ರದಾಯ. ಇದು ರಿಷಬ್ ಶೆಟ್ಟಿಯನ್ನ ತೃಪ್ತಿಪಡಿಸಲು ಕನ್ನಡದಲ್ಲಿ ಪ್ರಾರ್ಥನೆ ಮಾಡಿದಂತಿದೆ. ಮುಂದೆ ಬೇರೆ ಬೇರೆ ಭಾಷೆಯ ನಟರು ಬಂದಾಗ ಅವರರವರ ಭಾವಕ್ಕೆ ತಕ್ಕ ಹಾಗೆ ಪ್ರಾರ್ಥನೆ ಮಾಡಬಹುದು. ದೈವಾರಾಧನೆಯನ್ನ ಪ್ಯಾನ್ ಇಂಡಿಯಾ ಮಾಡಲು ಹೊರಟಿದ್ದಾರಾ?
ದೈವಾರಾಧಾಕ ತಮ್ಮಣ್ಣ ಶೆಟ್ಟಿ
ರಿಷಬ್ ಶೆಟ್ಟಿ ಹರಕೆ ಕೋಲದ ಬಗ್ಗೆ ದೈವಾರಾಧಕ ತಮ್ಮಣ್ಣ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ದೈವಸ್ಥಾನದ ಆಡಳಿತ ಮಂಡಳಿ ದೈವಗಳ ಮೊರೆ ಹೋಗಿತ್ತು. ಅಪಪ್ರಚಾರ ಮಾಡಿದವರರಿಗೆ ಶಿಕ್ಷೆಯಾಗಲಿ ಎಂದು ಪ್ರಾರ್ಥನೆ ಮಾಡಿತ್ತು.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us