‘ಈ ಕ್ಷೇತ್ರ ಬೆಳಗಬಾರದು ಅಂತಾ ಇಷ್ಟೆಲ್ಲ ನಡೆದಿದೆ..’ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದಕ್ಕೆ ಟ್ವಿಸ್ಟ್..!

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದಕ್ಕೆ ಸಂಬಂಧಿಸಿ, ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ಕ್ಷೇತ್ರದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದೆ. ದೈವ ಸನ್ನಿಧಿಯ ಆಡಳಿತ ಮಂಡಳಿ ಏನು ಹೇಳಿದೆ ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
Rishab Shetty (7)
Advertisment

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದಕ್ಕೆ ಸಂಬಂಧಿಸಿ, ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ಕ್ಷೇತ್ರದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದೆ. 

ಇತ್ತೀಚೆಗೆ ಕಾಂತಾರ ಚಿತ್ರತಂಡ ಬಾರೆಬೈಲ್​ನಲ್ಲಿರುವ ದೈವಸ್ಥಾನದಲ್ಲಿ ಹರಕೆಯ ನೇಮ ನೀಡಿತ್ತು. ತುಳುನಾಡಿನ ದೈವರಾಧಾನೆಯ ಭಾಗವಾಗಿ ನಡೆದ ಹರಕೆಯ ವಾರಾಹಿ ಪಂಜುರ್ಲಿ ದೈವದ ಕೋಲದಲ್ಲಿ, ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ  ದೈವ ನರ್ತಕ ನಡೆದುಕೊಂಡಿದ್ದ ರೀತಿ, ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ತುಳುನಾಡಿನ ದೈವಾರಾಧಕರು, ಸಂಪೂರ್ಣವಾಗಿ ಕೋಲ ನಡೆದ ಪ್ರಕ್ರಿಯೆಯೇ ಸರಿಯಿರಲಿಲ್ಲ ಎನ್ನುವ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:‘ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನು ಇದ್ದೇನೆ’ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಅಭಯ..!Panjurli trust

ಇದೇ ವಿಚಾರಕ್ಕೆ ಸಂಬಂಧಿಸಿ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿರುವ ಪಂಜುರ್ಲಿ ಕ್ಷೇತ್ರದ ಆಡಳಿತ ಮಂಡಳಿ.. ಕಳೆದ ವರ್ಷವೂ ರಿಷಬ್ ಶೆಟ್ಟಿ ಕುಟುಂಬ ನೇಮೋತ್ಸವ ಸೇವೆ ಕೊಟ್ಟಿತ್ತು. ಮಗನ ಹುಟ್ಟು ಹಬ್ಬದ ಹಿನ್ನೆಲೆ ಸೇವೆಯನ್ನು ಕೊಟ್ಟಿದ್ದರು. ಎಲ್ಲಿಯೂ ನಡೆಯದ ಚಮತ್ಕಾರ ಈ ಕ್ಷೇತ್ರದಲ್ಲಿ ಆಗಿದೆ ಎಂದು ರಿಷಬ್ ಹೇಳಿಕೊಂಡಿದ್ದರು. 

ದೀಪಾವಳಿ ಸಂದರ್ಭದಲ್ಲಿ ದೈವದ ಅನುಮತಿ ಕೇಳಿ ಹರಕೆ ನೇಮಕ್ಕೆ ಒಪ್ಪಿಗೆ ಪಡೆಯಲಾಯಿತು. ಪಂಜುರ್ಲಿ ನೇಮ, ಜಾರಾಂದಾಯಗೆ ತುಡರ ಬಲಿ ನೀಡಲು ದೈವ ಒಪ್ಪಿಗೆ ನೀಡಿತು. ಸೇವೆಯನ್ನು ದೈವಗಳು ಒಳ್ಳೆಯ ರೀತಿ ಸ್ವೀಕಾರ ಮಾಡಿದೆ. ಈ ಕ್ಷೇತ್ರ ಬೆಳಗಬಾರದು ಎಂದು ವಿವಾದ ಹುಟ್ಟುಹಾಕಿದ್ದಾರೆ ಎಂದು ಕಿಡಿಕಾರಿದೆ. 

ಇದನ್ನೂ ಓದಿ: ಇಂಗ್ಲೆಂಡ್ ನ ಮ್ಯೂಸಿಯಂನಲ್ಲಿ ಭಾರತೀಯ ಕಲಾಕೃತಿ ಸೇರಿ 600 ಕಲಾಕೃತಿಗಳ ಕಳವು: ಕಳ್ಳರ ಪತ್ತೆಗೆ ನೆರವು ಕೋರಿದ ಬ್ರಿಟನ್ ಪೊಲೀಸ್‌

Rishab Shetty (1)

ನಮಗೆ ದೈವ ನರ್ತಕರ ಮೇಲೆ ಯಾವುದೇ ಸಂಶಯ ಇಲ್ಲ. ಭಾವನೆಗಳ ಮೇಲೆ ಆರಾಧನೆಯನ್ನು ಮಾಡುತ್ತಿದ್ದೇವೆ. ದೈವಸ್ಥಾನದ ಕಟ್ಟುಕಟ್ಟಳೆ ಪ್ರಕಾರ ನಾವು ನಡೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಚರ್ಚೆಗಳು ನಡೆಯುತ್ತಿವೆ. ಎಣ್ಣೆಬೂಳ್ಯ ಸಂದರ್ಭದಲ್ಲಿ ದೈವವೇ ನರ್ತನ ಮಾಡುತ್ತದೆ ಎಂಬ ನಂಬಿಕೆ ಇದೆ. ನಮ್ಮ ದೈವ ಅಪವಾದದಿಂದ ಮುಕ್ತ ಇದೆ ಎಂದು ಸ್ಪಷ್ಟೀಕರಣ ನೀಡಿದೆ. ದೈವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ರವಿಪ್ರಸನ್ನ ಮಾಧ್ಯಮಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rishab Shetty Kantara Movie Kantara Chapter1
Advertisment