/newsfirstlive-kannada/media/media_files/2025/10/03/kantara_yash-2025-10-03-15-37-19.jpg)
ಡಿವೈನ್ ಸ್ಟಾರ್ ರಿಷಭ್​ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಪ್ರೀಕ್ವೆಲ್ ಮೂವಿ ಅದ್ಧೂರಿಯಾದ ಓಪನಿಂಗ್ ಪಡೆದುಕೊಂಡಿದೆ. ಎಲ್ಲೆಡೆ ಕಾಂತಾರ ಹವಾ ಸೃಷ್ಟಿಯಾಗಿದೆ. ಅಭಿಮಾನಿಗಳಂತೂ ರಿಷಭ್​ ಶೆಟ್ಟಿ ಅವರ ಡೈರೆಕ್ಷನ್ ಹಾಗೂ ಆ್ಯಕ್ಟಿಂಗ್​ಗೆ ಕಳೆದು ಹೋಗಿದ್ದಾರೆ. ಇದರ ಬೆನ್ನಲ್ಲೇ ಸ್ಯಾಂಡಲ್​ವುಡ್​ನ ರಾಕಿ ಭಾಯ್ ಯಶ್​ ಅವರು ಕಾಂತಾರ ಪ್ರೀಕ್ವೆಲ್ ಹಾಗೂ ರಿಷಭ್​ ಶೆಟ್ಟಿಯವರನ್ನು ಹಾಡಿ ಹೊಗಳಿದ್ದಾರೆ.
ಯಶ್​ ಅವರು ಸದ್ಯ ಸಿನಿಮಾಗಳ ಶೂಟಿಂಗ್​ನಲ್ಲಿ ಫುಲ್ ಬ್ಯುಸಿ ಇದ್ದಾರೆ. ಇದರ ನಡುವೆಯು ಕಾಂತಾರ ಪ್ರೀಕ್ವೆಲ್ ಸಿನಿಮಾವನ್ನು ಮೆಚ್ಚಿ ರಿಷಭ್ ಶೆಟ್ಟಿ ಅವರ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂಬಂಧ ಎಕ್ಸ್​ ಖಾತೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಚಿಕೊಂಡಿರುವ ಯಶ್ ಅವರು ಕನ್ನಡ ಹಾಗೂ ಭಾರತೀಯ ಸಿನಿ ರಂಗದಲ್ಲಿ ಸ್ಯಾಂಡಲ್​​ವುಡ್​ನ ಮತ್ತೊಂದು ಹೆಜ್ಜೆ ಗುರುತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಈ ಭಾರಿ ಸಪ್ಪೆಯಾಯಿತೇ? ಇನ್ನೂ ಸ್ವಲ್ಪ ಎಂಟರ್‌ಟೈನ್‌ಮೆಂಟ್ ಬೇಕಿತ್ತು ಎಂದ ಪ್ರೇಕ್ಷಕರು
ರಿಷಭ್ ಶೆಟ್ಟಿಯವರ ದೃಢತೆ, ಕೆಲಸದ ಮೇಲಿನ ಶ್ರದ್ಧೆಯು ಸಿನಿಮಾದಲ್ಲಿನ ದೈವತ್ವವನ್ನು ಪ್ರತಿ ಪ್ರೇಮ್​ನಲ್ಲಿಯೂ ಎತ್ತಿ ತೋರಿಸುತ್ತದೆ. ಬರಹಗಾರ, ಡೈರೆಕ್ಟರ್ ಮತ್ತು ನಟನಾಗಿ ನೀವು ಮಾಡಿದ ಅದ್ಭುತವಾದ ಕಾರ್ಯವು ಸಿನಿಮಾ ಪರದೆ ಮೇಲೆ ನೈಜ ಅನುಭವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಕಾಂತಾರ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಹೊಂಬಾಳೆ ಫಿಲಂಗೆ ಅಭಿನಂದನೆಗಳನ್ನು ಸಲ್ಲಿಕೆ ಮಾಡಿದ್ದಾರೆ. ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ನಿರ್ಮಾಪಕರ ದೂರದೃಷ್ಟಿ ಮತ್ತು ಬೆಂಬಲವು ಸಿನಿ ಉದ್ಯಮ ಮಟ್ಟವನ್ನು ನಿರಂತರವಾಗಿ ಅಧಿಕಗೊಳಿಸುತ್ತದೆ ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಮಹಾರಾಣಿಯಾಗಿ ಅಭಿನಯ ಮಾಡಿರುವ ರುಕ್ಮಿಣಿ ವಸಂತ್ ಹಾಗೂ ಗುಲ್ಶನ್ ದೇವಯ್ಯ ಅವರ ಪಾತ್ರ ಸಿನಿಮಾಕ್ಕೆ ಅತಿ ದೊಡ್ಡ ಶಕ್ತಿ ಆಗಿದೆ. ಅಜನಿಶ್ ಲೋಕನಾಥ್ ಅವರ ಮ್ಯೂಸಿಕ್ ಪ್ರತಿ ಪ್ರೇಮ್​ಗೂ ಜೀವ ತುಂಬುತ್ತದೆ. ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ಕೆಲಸ ಮನ ಗೆಲುತ್ತದೆ. ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಹಾಗೂ ಇಡೀ ಚಿತ್ರತಂಡದ ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕೆ ರಾಕೇಶ್ ಪೂಜಾರಿ ನೀಡಿದ ಬೆಳಕಿನ ಕ್ಷಣಗಳು ಈಗ ಅವರ ಪ್ರತಿಭೆಗೆ ಸೂಕ್ತವಾದ ಗೌರವವಾಗಿದೆ. ಎಲ್ಲರೂ ಒಟ್ಟಾಗಿ ಅದ್ಭುತ ಸಿನಿಮಾ ಹೊರ ತಂದಿದ್ದೀರಿ ಎಂದು ರಾಕಿ ಭಾಯ್ ಯಶ್​ ಖುಷಿ ವ್ಯಕ್ತ ಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ