/newsfirstlive-kannada/media/media_files/2025/10/26/rakshita_prem_photo-2025-10-26-10-19-06.jpg)
ಒಂದು ಕಾಲದಲ್ಲಿ ಕನ್ನಡಿಗರ ಮನೆ ಮಾತಾಗಿದ್ದ ಹಿರಿಯ ನಟಿ ರಕ್ಷಿತಾ ಪ್ರೇಮ್ ಅವರು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಜೀ ಕನ್ನಡ ರಿಯಾಲಿಟಿ ಶೋಗಳ ತೀರ್ಪುಗಾರರ ಸ್ಥಾನದಿಂದ ಹೊರ ನಡೆದಿದ್ದಾರೆ. ರಕ್ಷೀತಾ ಪ್ರೇಮ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಕಾಮಿಡಿ ಕಿಲಾಡಿಗಳು' ಮುಂತಾದ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿದ್ದರು.
ಸಂಚಲನ ಮೂಡಿಸಿದ ಇನ್ಸ್​ಟಾಗ್ರಾಮ್ ಪೋಸ್ಟ್​..!
ಈ ಕುರಿತು ತಮ್ಮ ಅಧಿಕೃತ ಇನ್ಸ್​ಟಾಗ್ರಾಮ್ ಅಕೌಂಟ್​ನಲ್ಲಿ ಪೋಸ್ಟ್ ಹಾಕಿರುವ ರಕ್ಷಿತಾ ಅವರು, ನಾನು ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಒಂದು Perticular channel ನ ಒಂದು Perticular showಗೆ ಟ್ಯಾಗ್ ಮಾಡ್ತಿರೋ ಎಲ್ಲಾರಿಗೂ ನಾನು ಕ್ಲಾರಿಟಿ ಕೊಡೋಕೆ ಇಷ್ಟಪಡ್ತೀನಿ. ನನ್ನ ಜೀವನದಲ್ಲಿ ಬದಲಾವಣೆ ಬಯಸಿದ್ದು ಹಾಗೂ ಹೊಸದನ್ನೇನಾರು ಪ್ರಯತ್ನಿಸಲು ನಾನು ಇನ್ನುಮುಂದೆ ಆ ಚಾನೆಲ್​ನ ಭಾಗವಾಗಿರುವುದಿಲ್ಲ ಎಂದು ಭಾವುಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಘನಘೋರ ಘಟನೆ; 4 ಮಕ್ಕಳ ತಾಯಿ ಜೀವ ತೆಗೆದನಾ ಪ್ರಿಯಕರ..?
/filters:format(webp)/newsfirstlive-kannada/media/media_files/2025/10/26/rakshita_prem-2025-10-26-10-19-19.jpg)
ಇಷ್ಟು ವರ್ಷ ಆ ಶೋಗಳಲ್ಲಿ ಸಂತೋಷದಿಂದ ನನ್ನನ್ನು ನೋಡಿ ಬೆಂಬಲಿಸಿದ್ದೀರಿ. ಈ 9 ವರ್ಷ ಜರ್ನಿಯಲ್ಲಿ ಅನೇಕ ಸುಂದರ ದಿನಗಳನ್ನು ನೀಡಿದ ನಿಮಗೂ ಹಾಗು ಆ ದೇವರಿಗೂ ಹೃದಯಪೂರ್ವಕ ಧನ್ಯವಾದಗಳು. ನಾನು ಯಾವುದೇ ಕೆಲಸ/ಸಿನಿಮಾನಲ್ಲಿ ನಿಮ್ಮ ಮುಂದೆ ಬಂದರೂ ಇದೇ ರೀತಿಯ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲಿರುತ್ತದೆ ಅಂತ ಭಾವಿಸಿದ್ದೇನೆ ಎಂದು ತಮ್ಮ ಮನದಾಳದ ಭಾವನೆಗಳನ್ನು ಪೋಸ್ಟ್​ನಲ್ಲಿ ವ್ಯಕ್ತಪಡಿಸಿದ್ದು, ಕೊನೆಯ ಸಾಲಿನಲ್ಲಿ ಅಭಿಮಾನಿಗಳಿಗೆ ‘Love u guys’ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us