/newsfirstlive-kannada/media/media_files/2025/10/26/bng_women-2025-10-26-07-54-35.jpg)
ಇದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿರೋ ಮತ್ತೊಂದು ಕ್ರೈಂಸ್ಟೋರಿ. ರಸ್ತೆ ಬದಿ ನಿಲ್ಲಿಸಿದ್ದ ಆಟೋದಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದ ಹಿಂದೆ ಪ್ರೇಮ ಸಂಬಂಧ ಲಿಂಕ್ ಪಡೆದಿದೆ. ಸದ್ಯ ಪ್ರಿಯಕರನೇ ಜೀವ ತೆಗೆದಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಆಟೋದೊಳಗೆ ಪತ್ತೆಯಾಗಿರುವ ಮಹಿಳೆಯ ಶವ. ಸುತ್ತಲೂ ಬ್ಯಾರಿಕೇಡ್ ಹಾಕಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು. ಈ ಎಲ್ಲ ಮಾಹಿತಿ ಸಂಪೂರ್ಣವಾಗಿ ಗಮನಿಸಿದರೆ ಒಂದು ಕ್ಲಾರಿಟಿ ಸಿಗುತ್ತೆ. ಸಿಲಿಕಾನ್ ಸಿಟಿಯಲ್ಲಿ ಆಟೋದಲ್ಲಿ ನಿಗೂಢವಾಗಿ ಪತ್ತೆಯಾಗಿದ್ದ ಮಹಿಳೆ ಶವ ಹಿಂದೆ ಪ್ರೇಮ ಸಂಬಂಧ ಬೆಸೆದಿದೆ.
/filters:format(webp)/newsfirstlive-kannada/media/media_files/2025/10/26/bng_women_1-2025-10-26-07-54-47.jpg)
ನಾಲ್ಕು ಮಕ್ಕಳ ತಾಯಿಯನ್ನು ಕೊಂದ ಪ್ರಿಯಕರ!
ಬೆಂಗಳೂರಿನ ತಿಲಕ್​​​ನಗರದಲ್ಲಿ ನಡೆದಿರೋ ಪ್ರಕರಣವಿದು. ರಸ್ತೆ ಬದಿ ಬೆಡ್​ಶೀಟ್​ನಿಂದ ಕವರ್​ ಆಗಿದ್ದ ನಿಂತಿದ್ದ ಆಟೋ. ಜನರನ್ನು ಬೆಚ್ಚಿ ಬೀಳಿಸಿತ್ತು, ಫೋಟೋದಲ್ಲಿ ಕಾಣ್ತಿರುವ ಈಕೆಯ ಹೆಸರು ಸಲ್ಮಾ. 35 ವರ್ಷ ವಯಸ್ಸಿನ ಈಕೆ 4 ಮಕ್ಕಳ ತಾಯಿ. ಪ್ರೇಮಸಂಬಂಧ ಈಕೆಯ ಬದುಕಿಗೆ ಕೊಳ್ಳಿ ಇಟ್ಟಿದೆ.
ಸಲ್ಮಾ ಸುತ್ತ!
- ನಾಲ್ಕು ಮಕ್ಕಳ ತಾಯಿಯಾಗಿದ್ದ ಕೊಲೆಯಾದ ಸಲ್ಮಾ
- ಗಂಡ ಮೃತಪಟ್ಟ ಬಳಿಕ ಸುಬ್ರಮಣಿ ಜೊತೆ ಸಲುಗೆ
- ತಿಲಕ್​ ನಗರ ವ್ಯಾಪ್ತಿಯಲ್ಲಿ ವಾಸವಿರುವ ಆರೋಪಿ
- ನಿನ್ನೆ ರಾತ್ರಿ ಸುಬ್ರಮಣಿ ಹಾಗೂ ಸಲ್ಮಾ ಮಧ್ಯೆ ಗಲಾಟೆ
- ಸಲ್ಮಾ ತಲೆಗೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆ
- ಬಳಿಕ ಆಟೋದಲ್ಲಿ ಶವವನ್ನ ಇಟ್ಟು ಸುಬ್ರಮಣಿ ಪರಾರಿ
- ಆಟೋದಲ್ಲಿ ದುರ್ವಾಸನೆ, ಬಳಿಕ ಪೊಲೀಸರಿಗೆ ಮಾಹಿತಿ
- ಶವವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ ಪೊಲೀಸರು
ಇದನ್ನೂ ಓದಿ: ಹೆಂಡತಿ ಜೊತೆ ಗಲಾಟೆ, ಬಿಟ್ಟು ಹೋಗಿದ್ದಕ್ಕೆ ಕೃತ್ಯ.. ಮುದ್ದಾದ ಅವಳಿ ಮಕ್ಕಳ ಉಸಿರು ನಿಲ್ಲಿಸಿದ ಕ್ರೂರಿ ಅಪ್ಪ!
/filters:format(webp)/newsfirstlive-kannada/media/media_files/2025/10/26/bng_women_2-2025-10-26-07-54-58.jpg)
ಸದ್ಯ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 302ರ ಪ್ರಕಾರ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸುಬ್ರಮಣಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ..
ಅದೇನೇ ಇರಲಿ, ಸಲ್ಮಾಳನ್ನು ಆತ ಕೊಲೆ ಮಾಡಿದ್ಯಾಕೆ ಅನ್ನೋದು ಪ್ರಿಯಕರನ ಬಂಧನದ ಬಳಿಕ ರಿವೀಲ್ ಆಗಬೇಕಿದೆ. ಇತ್ತೀಚಿಗಂತು ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಿದ್ದು, ಜನರನ್ನು ಬೆಚ್ಚಿಬೀಸ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us