/newsfirstlive-kannada/media/media_files/2025/10/26/mh_father_2-2025-10-26-07-39-03.jpg)
ಈ ಕೃತ್ಯ ಅತ್ಯಂತ ಅಮಾನುಷ, ಘನಘೋರ. ಮಕ್ಕಳಾಗಲಿ ಅಂತ ಕಂಡಕಂಡ ದೇವರಿಗೆ ಕೈ ಮುಗೀತಾರೆ. ಆದ್ರೆ, ಇಲ್ಲೊಬ್ಬ ಕಿರಾತಕ ಅಪ್ಪ, ಹೆಂಡತಿ ಬಿಟ್ಟೋದಳು ಅನ್ನೋ ಕೋಪಕ್ಕೆ ತನ್ನ ಇಬ್ಬರು ಮುದ್ದಾದ ಕಂದಮ್ಮಗಳ ಕತ್ತು ಸೀಳಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಮಕ್ಕಳನ್ನ ದೇವರ ಸಮಾನ ಅಂತಾರೆ. ಮನೆಯಲ್ಲಿ ಮುದ್ದಾದ ಮಕ್ಕಳಿದ್ರೆ ಆ ಮನೆ ನಂದಗೋಕುಲ. ಹೆತ್ತವರಿಗೆ ಮಕ್ಕಳು ಅಂದ್ರೆ ಮುದ್ದು, ಪ್ರೀತಿ, ಅವರೇ ಜಗತ್ತು. ಆದ್ರೆ, ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದರು ಅನ್ನೋ ಹಾಗೆ ಹೆಂಡತಿ ಮೇಲಿನ ಕೋಪಕ್ಕೆ ಗಂಡ ಮಾಡಿರೋ ಕೃತ್ಯ ಘನಘೋರವಾಗಿದೆ.
/filters:format(webp)/newsfirstlive-kannada/media/media_files/2025/10/26/mh_father-2025-10-26-07-39-22.jpg)
ಮಹಾರಾಷ್ಟ್ರದ ಬುಲ್ದಾನಾದಲ್ಲಿ ಬೆಚ್ಚಿ ಬೀಳಿಸುವ ಕೃತ್ಯ
ಮಹಾರಾಷ್ಟ್ರದ ಬುಲ್ದಾನದಲ್ಲಿ ಹೃದಯ ವಿದ್ರಾವಕ ಹಾಗೂ ಬೆಚ್ಚಿ ಬೀಳಿಸುವ ಕೃತ್ಯ ನಡೆದೋಗಿದೆ. ಮುದ್ದಾದ ಅವಳಿ ಹೆಣ್ಣು ಮಕ್ಕಳ ಉಸಿರು ನಿಲ್ಲಿಸಿದ್ದಾನೆ. ಹೊಟ್ಟೆಯಲ್ಲಿ ಹುಟ್ಟಿದ ಸ್ವಂತ ಮಕ್ಕಳನ್ನೇ ಬರ್ಬರವಾಗಿ ಕೊಂದಿರೋ ಕಡುಪಾಪಿ ತಂದೆ. ಇವನ ಹೆಸರು ರಾಹುಲ್ ಚವಾಣ್​ ಅಂತ. ಹೆಂಡತಿ ಮೇಲಿನ ಸಿಟ್ಟಿಗೆ ಮಕ್ಕಳನ್ನು ಬಲಿ ಪಡೆದಿದ್ದಾನೆ.
ಮಕ್ಕಳ ಹತ್ಯೆಯ ಸುತ್ತ!
- ವಾಶಿಮ್ ಜಿಲ್ಲೆ ನಿವಾಸಿ ರಾಹುಲ್ ಚವಾಣ್ ಕೊಲೆ ಆರೋಪಿ
- ಪತ್ನಿ, ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಆರೋಪಿ ಪತಿ
- ಪ್ರಯಾಣದ ನಡುವೆ ಪತ್ನಿ ಜೊತೆ ರಾಹುಲ್ ಚವಾಣ್ ಜಗಳ
- ಜಗಳ ತಾರಕಕ್ಕೇರಿ ಮುನಿಸಿಕೊಂಡು ತವರಿನತ್ತ ಹೊರಟ ಪತ್ನಿ
- ಪತ್ನಿ ಹೊರಟು ಹೋದ್ರೂ ಮಕ್ಕಳ ಜೊತೆ ಚವಾಣ್ ಪ್ರಯಾಣ
- ಬಳಿಕ ಮಕ್ಕಳನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬರ್ಬರ ಹತ್ಯೆ
- ಅರಣ್ಯ ಪ್ರದೇಶದಲ್ಲಿ ಇಬ್ಬರು ಮಕ್ಕಳ ಕತ್ತು ಸೀಳಿ ಭೀಕರ ಹತ್ಯೆ
ಇದನ್ನೂ ಓದಿ:ಸಿಡ್ನಿ ಆಸ್ಪತ್ರೆಗೆ ದಾಖಲಾದ ಶ್ರೇಯಸ್​ ಅಯ್ಯರ್​.. ಉಪನಾಯಕನಿಗೆ ಏನಾಯಿತು?
/filters:format(webp)/newsfirstlive-kannada/media/media_files/2025/10/26/mh_father_1-2025-10-26-07-39-36.jpg)
ಹೆತ್ತ ಮಕ್ಕಳನ್ನು ಕೊಂದು ಪೊಲೀಸರಿಗೆ ಶರಣಾದ ಪಾಪಿ ಅಪ್ಪ
ಅಂಚಾರ್ವಾಡಿ ಅರಣ್ಯದೊಳಕ್ಕೆ ಕರೆದೊಯ್ದು ಹೆತ್ತ ಮಕ್ಕಳನ್ನು ಕೊಲೆ ಮಾಡಿದ ರಾಹುಲ್​ ಬಳಿಕ ನೇರವಾಗಿ ಪೊಲೀಸ್​ ಠಾಣೆಗೆ ಬಂದು ನಾನು ಕೊಲೆ ಮಾಡಿದ್ದೇನೆಂದು ಶರಣಾಗಿದ್ದಾನೆ. ಸದ್ಯ ಆರೋಪಿ ರಾಹುಲ್​, ತಪ್ಪೊಪ್ಪಿಕೊಂಡಿದ್ದು ಅಂಚಾರ್ವಾಡಿ ಅರಣ್ಯದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಭಾಗಶಃ ಸುಟ್ಟ ಸ್ಥಿತಿಯಲ್ಲಿದ್ದ ಮಕ್ಕಳ ಶವಗಳನ್ನ ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿ ಬೆಂಕಿ ಹಚ್ಚುವ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಅನುಮಾನ ವ್ಯಕ್ತವಾಗಿದ್ದು, ಎಫ್​​ಎಸ್​ಎಲ್​ ಮತ್ತು ಮರಣೋತ್ತರ ಪರೀಕ್ಷೆಗೆ ಮೃತದೇವ ರವಾನಿಸಿದ್ದಾರೆ.
ಇತ್ತೀಚೆಗೆ ಇದೊಂಥರ ಟ್ರೆಂಡ್ ಆಗಿಬಿಟ್ಟಿದೆ, ಗಂಡ-ಹೆಂಡತಿ ಜಗಳ ಆಡಿಕೊಂಡು ಬೇರೆ ಬೇರೆಯಾದರೆ ಮಕ್ಕಳನ್ನು ಕೊಂದು ಬಿಡೋದು. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ, ಈ ಸ್ಟೋರಿಯಲ್ಲಿ ಗಂಡ-ಹೆಂಡತಿ ಜಗಳ ಇಬ್ಬರು ಮುದ್ದಾದ ಅವಳಿ ಮಕ್ಕಳನ್ನು ಬಲಿ ಪಡೆದಿದೆ. ತಾನೇ ಜನ್ಮಕೊಟ್ಟಿದ್ದ ಮಕ್ಕಳನ್ನು ಕೊಂದ ಪಾಪಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us