ನೆಟ್ಟಿಗರ ವಿರುದ್ಧ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಗರಂ ಆಗಿದ್ದಾರೆ. ನನ್ನ ಮದುವೆ ಬಗ್ಗೆ ನಾನೇ ನಿಮಗೆ ನೇರವಾಗಿ ತಿಳಿಸ್ತೀನಿ. ಮಹಿಳೆಯರ ವಿಚಾರದಲ್ಲಿ ಹೀಗೆ ಜಡ್ಜ್ ಮಾಡೋದು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮ್ಯಾ ಮದುವೆ, ಲವ್ ಸ್ಟೋರಿ ವಿಚಾರ ಆಗಾಗ ಹರಿದಾಡ್ತಲೇ ಇರುತ್ತೆ. ಇಂಥ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಯಾರ ಜೊತೆಗೆ ಫೋಟೋ ಶೇರ್ ಮಾಡಿದ್ರೂ, ಅವರ ಮಧ್ಯೆ ಏನೋ ಇದೆ ಅನ್ನುವಂತ ಕಾಮೆಂಟ್ಳು ಕೇಳಿ ಬರ್ತಿತ್ತು.
ಇತ್ತೀಚೆಗೆ ವಿನಯ್ ರಾಜ್‍ಕುಮಾರ್ ಜೊತೆಗೂ ಡೇಟಿಂಗ್ ವಿಚಾರ ಸುದ್ದಿಯಾಗಿತ್ತು. ಇದಕ್ಕೆ ರಮ್ಯಾ ಪ್ರತಿಕ್ರಿಯೆ ನೀಡಿದ್ದರು. ಇದೀಗ ಒಂದಷ್ಟು ಜನರ ಮನಸ್ಥಿತಿಯ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ವಿಚಾರದಲ್ಲಿ ಈ ರೀತಿ ಜಡ್ಜ್ ಮಾಡೋದನ್ನು ನಿಲ್ಲಿಸಿ, ನನ್ನ ಮದುವೆ ವಿಚಾರವನ್ನು ನಾನೇ ನಿಮಗೆ ನೇರವಾಗಿ ತಿಳಿಸ್ತೀನಿ. ಮೊದಲು ಅಪಪ್ರಚಾರ ಮಾಡೋದನ್ನ ನಿಲ್ಲಿಸಿ ಅನ್ನೋ ಮೂಲಕ ವಾರ್ನ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ
ಇದನ್ನೂ ಓದಿ:ಅಗಲಿದ ನಿರ್ದೇಶಕ ಎಸ್ ಎಸ್ ಡೇವಿಡ್ ಗೆ ಸ್ನೇಹಿತರಿಂದ ಶ್ರದ್ಧಾಂಜಲಿ ಜೊತೆ ಅನ್ನಸಂತರ್ಪಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ