ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್​..! ಯಾಕೆ ಏನಾಯ್ತು..?

ಸ್ಯಾಂಡಲ್​ವುಡ್​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ನಗರ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಟಾರ್ ನಟನ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ದೂರು ನೀಡಲಾಗಿದೆ. ಅಷ್ಟಕ್ಕೂ ಏನು ಆಗಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
ಶಿವಣ್ಣ ಮನೆಯಲ್ಲಿ ಒಂದೂವರೆ ಗಂಟೆ ಸಿಕ್ರೇಟ್ ಮೀಟಿಂಗ್.. ಕನ್ನಡ ಸ್ಟಾರ್​ ನಟರಿಗೆ ಒಂದು ಸಂದೇಶ..!
Advertisment

ಬೆಂಗಳೂರು: ಸ್ಯಾಂಡಲ್​ವುಡ್​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ನಗರ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯಾಕೆ ದೂರು..?  

ಧ್ರುವ ಸರ್ಜಾ ನಿವಾಸದ ಬಳಿ ವಾಸವಾಗಿರುವ ಮನೋಜ್ ಅನ್ನೋರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಧ್ರುವ ಹಾಗೂ ಮನೋಜ್ ಮನೆ ಒಂದೇ ಕಡೆ ಇದೆ. ನೆಚ್ಚಿನ ನಟನ ನೋಡಲು ನಿತ್ಯ ನೂರಾರು ಅಭಿಮಾನಿಗಳು ಬರುತ್ತಾರೆ. ಅಲ್ಲಿಗೆ ಬಂದ ಧ್ರುವ ಅಭಿಮಾನಿಗಳು ಮನೋಜ್ ಮನೆಯ ಎದುರಿಗೆ ವಾಹನಗಳನ್ನು ಪಾರ್ಕ್​ ಮಾಡ್ತಿರೋದು ದೂರಿಗೆ ಕಾರಣವಾಗಿದೆ. 

ಇದನ್ನೂ ಓದಿ: ಅಶ್ವಿನಿ ಗೌಡಗೆ ಹಿಗ್ಗಾಮುಗ್ಗಾ ಜಾಡಿಸಿದ ಕಾವ್ಯ ಶೈವ.. VIDEO

ಲಿಟ್ಲ್​ ಆ್ಯಕ್ಷನ್​ ಪ್ರಿನ್ಸ್​ ಬರ್ತ್​ಡೇ.. ಧ್ರುವ ಸರ್ಜಾ-ಪ್ರೇರಣಾ ಮಗನಿಗೆ ಮೊದಲ ವರ್ಷದ ಹುಟ್ಟುಹಬ್ಬ

ಆರೋಪ ಏನು?

ಮನೆ ಮುಂದೆ ದಿನ ನಿತ್ಯವು ಧ್ರುವ ಸರ್ಜಾ ಅಭಿಮಾನಿಗಳು ಬರುತ್ತಾರೆ. ಬಂದವರು ಮನೆಯ ಎದುರಿಗೆ ಬೈಕ್​ಗಳನ್ನು ಪಾರ್ಕ್​ ಮಾಡುತ್ತಾರೆ. ಅಷ್ಟೇ ಅಲ್ಲದೇ ಅಲ್ಲೇ ಧೂಮಪಾನ ಮಾಡುತ್ತಾರೆ. ಜೊತೆಗೆ ಮನೆಯ ಗೋಡೆಯ ಮೇಲೆ ಉಗಿಯುವುದನ್ನ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಕಿರಿ-ಕಿರಿ ಉಂಟಾಗುತ್ತಿದೆ ಎಂದು ಮನೋಜ್ ಆರೋಪಿಸಿದ್ದಾರೆ. 

ಧ್ರುವ ಸರ್ಜಾ ಹಾಗೂ ಅವರ ಫ್ಯಾನ್ಸ್ ವಿರುದ್ಧ ಮಾತ್ರ ದೂರು ನೀಡಿಲ್ಲ. ಬದಲಾಗಿ, ಧ್ರುವ ಸರ್ಜಾರ ಮ್ಯಾನೇಜರ್ ವಿರುದ್ಧವೂ ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದಾರೆ. ಸದ್ಯ ಬನಶಂಕರಿ ಪೊಲೀಸರು ಎನ್​ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದಾರೆ. 

ಇದನ್ನೂ ಓದಿ:ಆರೋಗ್ಯ ಚೇತರಿಕೆ ಬಗ್ಗೆ ಮೊದಲ ಬಾರಿಗೆ ಅಪ್​​ಡೇಟ್ಸ್ ಕೊಟ್ಟ ಅಯ್ಯರ್.. ಭಾವುಕ ಪೋಸ್ಟ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Dhruva Sarja
Advertisment