ಅಶ್ವಿನಿ ಗೌಡಗೆ ಹಿಗ್ಗಾಮುಗ್ಗಾ ಜಾಡಿಸಿದ ಕಾವ್ಯ ಶೈವ.. VIDEO

ಬಿಗ್​ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳ ನಡುವಿನ ಮನಸ್ತಾಪಗಳು ತಾರಕಕ್ಕೆ ಇರುತ್ತಿದೆ. ಇದೀಗ ಅಶ್ವಿನಿ ಗೌಡ (Ashwini Gowda) ಅನ್ನೋದು ವ್ಯಕ್ತಿಯ ಹೆಸರಾ? ಅಥವಾ ಪವರ್ ಕಾರ್ಡಾ? ಎಂಬ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಅಶ್ವಿನಿ ಗೌಡ ಮತ್ತು ಕಾವ್ಯ ಶೈವ (Kavya Shaiva) ನಡುವಿನ ಕಿತ್ತಾಟ..

author-image
Ganesh Kerekuli
Ashwini Gowda and Kavya Shiava
Advertisment

ಬಿಗ್​ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳ ನಡುವಿನ ಮನಸ್ತಾಪಗಳು ತಾರಕಕ್ಕೆ ಇರುತ್ತಿದೆ. ಇದೀಗ ಅಶ್ವಿನಿ ಗೌಡ (Ashwini Gowda) ಅನ್ನೋದು ವ್ಯಕ್ತಿಯ ಹೆಸರಾ? ಅಥವಾ ಪವರ್ ಕಾರ್ಡಾ? ಎಂಬ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಅಶ್ವಿನಿ ಗೌಡ ಮತ್ತು ಕಾವ್ಯ ಶೈವ (Kavya Shaiva) ನಡುವಿನ ಕಿತ್ತಾಟ..

ಇದನ್ನೂ ಓದಿ:ಮಲ್ಲಮ್ಮರ ಇನ್​ಸ್ಟಾದಿಂದ ಅಧಿಕೃತ ಮಾಹಿತಿ.. ಅಸಲಿ ಸತ್ಯ ರಿವೀಲ್​..! 

ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಅದರಲ್ಲಿ ಚಟುವಟಿಕೆ ಒಂದರ ವಿಚಾರಕ್ಕೆ ಅಶ್ವಿನಿ ಗೌಡ ಹಾಗೂ ಕಾವ್ಯ ನಡುವೆ ವಾಗ್ವಾದ ನಡೆದಿದೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆಯಾಗಿದೆ. ಕಾವ್ಯ ಶೈವ, ಅಶ್ವಿನಿಗೆ ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ. ಇಬ್ಬರ ನಡುವಿನ ವಾಗ್ಯುದ್ಧ ಹೀಗಿದೆ.. 

  • ಅಶ್ವಿನಿ ಗೌಡ:  ಚರ್ಚೆಯಲ್ಲಿ ನೀನು ಸರಿ, ನಾನು ತಪ್ಪು ಅಂತಲ್ಲ. ಕೊನೆ ಪಕ್ಷ ಮಾತನ್ನಾಡಿಕೊಳ್ಳಲು ನಮಗೆ ಒಂದು ವೇದಿಕೆ ಸಿಕ್ಕಿತ್ತು. ಅದು ಆಗಿಲ್ಲ ಇವತ್ತು.. 
  • ಕಾವ್ಯ ಶೈವ: ನಿಮ್ಮ ಮತ ನನಗೆ ಅವಶ್ಯಕತೆ ಇರಲಿಲ್ಲ.. 
  • ಅಶ್ವಿನಿ ಗೌಡ: ಅಲ್ಲ, ಅಲ್ಲ.. ನನಗೂ ಅವಶ್ಯಕತೆ ಇರಲಿಲ್ಲ. ಅದು ನಿಮ್ಮ ವ್ಯಕ್ತಿತ್ವ
  • ಕಾವ್ಯ ಶೈವ: ನಿಮ್ಗೂ ಇಗೋ ಇತ್ತು. ಬಂದು ಮಾತನ್ನಾಡಲಿಲ್ಲ.
  • ಅಶ್ವಿನಿ ಗೌಡ: ಬರೀ ಅಶ್ವಿನಿ ಗೌಡ ಹೆಸರು ಹೇಳಿಕೊಂಡು ಪವರ್ ಕಾರ್ಡ್ ಯೂಸ್ ಮಾಡ್ತಿದ್ದೀಯಾ ಅಷ್ಟೇ.. 
  • ಕಾವ್ಯ ಶೈವ: ನಿನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನು..? 
  • ಅಶ್ವಿನಿ ಗೌಡ: ನಿನ್ನ ಅನ್ನಬೇಡ..
  • ಕಾವ್ಯ ಶೈವ: ಏನು..? ನೀನು ರೆಸ್ಪೆಕ್ಟ್ ಕೊಟ್ಟರೆ ನಾನೂ ಕೊಡ್ತೀನಿ. 
  • ಅಶ್ವಿನಿ ಗೌಡ: ಏನು (ಕೈ ತೊರಿಸುತ್ತ)
  • ಕಾವ್ಯ ಶೈವ: ಗೆಟ್​ಲಾಸ್ಟ್​
  • ಅಶ್ವಿನಿ ಗೌಡ: ಅಖಾಡಕ್ಕೆ ಇಳಿ ನೋಡೋಣ. ಯೋಗ್ಯತೆ ಇಲ್ಲ, ಮಾತಾಡಬೇಡ. 
  • ಕಾವ್ಯ ಶೈವ: ನಾನು ಹಿಂಗೇ ಮಾತನ್ನಾಡೋದು. 
  • ಅಶ್ವಿನಿ ಗೌಡ: ನೀನ್ಯಾವಳೇ ಮಾತನ್ನಾಡೋಕೆ.. 

ಇದನ್ನೂ ಓದಿ: ರಕ್ಷಿತಾಗೆ ಮನೆ ಕೆಲಸದಳ ರೀತಿ ಟ್ರೀಟ್​.. ಅಶ್ವಿನಿ, ರಿಷಾ, ರಾಶಿ ಕೊಡ್ತಿರೋ ಕಾಟ ಅಷ್ಟಿಷ್ಟಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Ashwini Gowda Bigg Boss Bigg boss bigg boss kavya Ashwini Gowda
Advertisment