ಮಲ್ಲಮ್ಮರ ಇನ್​ಸ್ಟಾದಿಂದ ಅಧಿಕೃತ ಮಾಹಿತಿ.. ಅಸಲಿ ಸತ್ಯ ರಿವೀಲ್​..!

ಬಿಗ್​ಬಾಸ್ ಮನೆಯಿಂದ ಮಲ್ಲಮ್ಮ (Bigg Boss Mallamma) ಅವರು ವಯಕ್ತಿಕ ಕಾರಣಗಳಿಂದ ಔಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಮಲ್ಲಮ್ಮ ಅವರ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಿಂದ ನಿಖರ ಮಾಹಿತಿ ನೀಡಲಾಗಿದೆ.

author-image
Ganesh Kerekuli
mallamma (4)
Advertisment

ಬಿಗ್​ಬಾಸ್ ಮನೆಯಿಂದ ಮಲ್ಲಮ್ಮ (Bigg Boss Mallamma) ಅವರು ವಯಕ್ತಿಕ ಕಾರಣಗಳಿಂದ ಔಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಮಲ್ಲಮ್ಮ ಅವರ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಿಂದ ನಿಖರ ಮಾಹಿತಿ ನೀಡಲಾಗಿದೆ.  

ನಿಜಕ್ಕೂ ಔಟ್ ಆಗಿದ್ದಾರಾ..?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ‘ಮಲ್ಲಮ್ಮ ಟಾಕ್ಸ್’ (Mallamm_talks)​​ ಇನ್​ಸ್ಟಾ ಖಾತೆಯಲ್ಲಿ ಅಧಿಕೃತವಾಗಿ ಸ್ಪಷ್ಟಪಡಿಸಲಾಗಿದೆ. ಮಲ್ಲಮ್ಮ ಅವರು ಬಿಗ್​ಬಾಸ್​ನಿಂದ ಎಲಿಮಿನೇಟ್ ಆಗಿಲ್ಲ. ಅವರನ್ನು ವೋಟ್ ಮಾಡಿ ಮತ್ತೊಮ್ಮೆ ಉಳಿಸಿಕೊಳ್ಳಿ. ಮಲ್ಲಮ್ಮ ಅವರು ಬಿಗ್​ಬಾಸ್​ನಿಂದ ವೈಯಕ್ತಿಕ ಕಾರಣಗಳಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಶುದ್ಧ ಸುಳ್ಳು ಎಂದು ಇನ್​ಸ್ಟಾ ಸ್ಟೋರಿಸ್​​ನಲ್ಲಿ ಅಪ್​ಲೋಡ್ ಮಾಡಲಾಗಿದೆ.

ಇದನ್ನೂ ಓದಿ: BBK12: ರಕ್ಷಿತಾ ಅಸಲಿ ಆಟ ಶುರು.. ರಾಶಿಕಾ ಜೊತೆಗಿನ ಕಿತ್ತಾಟ ಅಶ್ವಿನಿಗೂ ಅರಗಿಸಿಕೊಳ್ಳಲು ಆಗಲಿಲ್ಲ..!

MALLAMMA_BBK

ಎಲಿಮಿನೇಟ್ ಆಗಿರುವ ಮಲ್ಲಮ್ಮ..!

ಈ ವಾರ ಬಿಗ್​ಬಾಸ್ ಮನೆಯಿಂದ ಹೊರ ಹೋಗಲು ಒಟ್ಟು 8 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಅವರಲ್ಲಿ ಮಲ್ಲಮ್ಮ ಕೂಡ ಒಬ್ಬರು. ಬಿಗ್​ಬಾಸ್ ಮನೆಯಲ್ಲಿ ಚರ್ಚಾ ಸ್ಪರ್ಧೆಯ ಮೂಲಕ ಎಲಿಮಿನೇಷನ್ ಪ್ರಕ್ರಿಯೆ ನಡೆದಿತ್ತು. ಮಲ್ಲಮ್ಮ vs ಸ್ಪಂದನಾ ನಡುವೆ ನಡೆದ ಸ್ಪರ್ಧೆಯಲ್ಲಿ ಸ್ಪಂದನಾ ಗೆಲುವು ಸಾಧಿಸಿದ್ದರು. ಸೋತ ಸ್ಪರ್ಧಿ ಮಲ್ಲಮ್ಮ ನಾಮಿನೇಟ್ ಆಗಿದ್ದಾರೆ. ಮಲ್ಲಮ್ಮ ನಾಮಿನೇಟ್ ಆಗ್ತಿದ್ದಂತೆಯೇ, ಅವರು ಬಿಗ್​ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಡಿಸಲಾಗಿದೆ. 

ಇದನ್ನೂ ಓದಿ: ಅಶ್ವಿನಿ ಮತ್ತು ಜಾಹ್ನವಿ ಜಗಳ ಆಡಿಲ್ವಾ? ಕರ್ನಾಟಕ ಜನತೆಯನ್ನ ಯಾಮಾರಿಸಬೇಡಿ?

BIG BOSS MALLAMMA

ಕಲರ್ಸ್ ಕನ್ನಡ ಏನು ಹೇಳಿತು..?

ಇನ್ನು, ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ ಬಿಗ್ ಬಾಸ್ ನಿಂದ ಹೊರಗೆ ಬಂದಿರುವುದನ್ನು ಕಲರ್ಸ್ ಕನ್ನಡ ವಾಹಿನಿ ಖಚಿತಪಡಿಸಿಲ್ಲ. ಮಲ್ಲಮ್ಮ ಬಿಗ್ ಬಾಸ್​ನಿಂದ ತುರ್ತು ಕಾರಣಕ್ಕಾಗಿ ಹೊರಗೆ ಹೋಗಿದ್ದಾರೆ ಎಂಬ ಸುದ್ದಿಯನ್ನು ಕಲರ್ಸ್ ಕನ್ನಡ ಅಲ್ಲಗೆಳೆದಿದೆ. ಇದು ಸುಳ್ಳು ಸುದ್ದಿ ಎಂದು ಕಲರ್ಸ್ ಕನ್ನಡ ಹೇಳಿದೆ. 

ಇದನ್ನೂ ಓದಿ: ಕಾವ್ಯಾ-ಗಿಲ್ಲಿ ಲವ್ವರ್ಸ್! ಚಂದ್ರಪ್ರಭ-ರಾಶಿ ಅಣ್ಣ -ತಂಗಿ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg boss mallamma BBK12 Bigg boss big boss mallamma
Advertisment