/newsfirstlive-kannada/media/media_files/2025/10/29/gilli-and-kavya-1-2025-10-29-17-01-21.jpg)
ಬಿಗ್‌ಬಾಸ್ ಮನೆಯಲ್ಲಿ ಕ್ಲೋಸಾಗಿ ಇದ್ದವರ ರಿಲೇಷನ್‌ಶೀಪ್ ಏನು ಅನ್ನೋ ಪ್ರಶ್ನೆ ಕಾಲೇಜ್ ಕ್ಯಾಂಪಸ್‌ನಲ್ಲಿ ಬಿಸಿಬಿಸಿ ಚರ್ಚೆ. ಅದು ಬೇರೆ ಯಾವುದೇ, ಕಾಲೇಜ್ ಅಲ್ಲ. ಬಿಗ್‌ಬಾಸ್ ಕಾಲೇಜ್ ಕ್ಯಾಂಪಸ್.
ಇದನ್ನೂ ಓದಿ: ಅಶ್ವಿನಿ ಮತ್ತು ಜಾಹ್ನವಿ ಜಗಳ ಆಡಿಲ್ವಾ? ಕರ್ನಾಟಕ ಜನತೆಯನ್ನ ಯಾಮಾರಿಸಬೇಡಿ?
/filters:format(webp)/newsfirstlive-kannada/media/media_files/2025/10/29/gilli-5-2025-10-29-17-02-13.jpg)
ನಿಮಗೆಲ್ಲಾ ಗೊತ್ತೇ ಇದೇ. ಕಾವ್ಯಾ ಮತ್ತು ಗಿಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಅಂತಾ. ಆದ್ರೆ, ಗಿಲ್ಲಿಯದ್ದು ತುಂಟಾಟ ತರ್ಲೆ ಜಾಸ್ತಿ. ಕಾವ್ಯಾಗೆ ಯಾವಾಗ್ಲೂ ಕಾಲ್ ಎಳೆಯೋ ಈ ಅಸಾಮಿ, ಮಾಡೋದು ಒಂದಲ್ಲ ಎರಡರಲ್ಲ. ಇವನ ತುಂಟತನಕ್ಕೆ ಬೇಸತ್ತಿರೋ ಕಾವ್ಯಾ, ಕಾಲೇಜ್ ಕ್ಯಾಂಪಸ್ ಆವರಣದಲ್ಲಿದ್ದ ಬೋರ್ಡ್ ಮೇಲೆ ಕಾವ್ಯಾ-ಗಿಲ್ಲಿ, ಚಂದ್ರಪ್ರಭಾ-ರಿಷಾ ಅಂತಾ ಬರೆದು ಅಣ್ಣ ತಂಗಿ ಅಂತಾ ಟೈಟಲ್ ಬರೆದಿರ್ತಾಳೆ. ಆದ್ರೆ, ಇದನ್ನ ನೋಡಿದ ಗಿಲ್ಲಿ ಓಡಿ ಬಂದು, ಲವರ್ಸ್ ಅಂತಾ ಬರೆದುಬಿಡ್ತಾನೆ. ಬಿಗ್‌ಬಾಸ್ ಮನೆಯಲ್ಲಿ ಕಾವ್ಯಾಗೆ ಗಿಲ್ಲಿ ಅಣ್ಣನಂತೆ ಕಂಡಂರೆ, ಗಿಲ್ಲಿಗೆ ಕಾವ್ಯಾ ಲವರ್ ಥರಾ ಕಾಣುತ್ತಿದ್ದಾಳೆ.
ಇದನ್ನೂ ಓದಿ:BBK12: ರಕ್ಷಿತಾ ಅಸಲಿ ಆಟ ಶುರು.. ರಾಶಿಕಾ ಜೊತೆಗಿನ ಕಿತ್ತಾಟ ಅಶ್ವಿನಿಗೂ ಅರಗಿಸಿಕೊಳ್ಳಲು ಆಗಲಿಲ್ಲ..!
/filters:format(webp)/newsfirstlive-kannada/media/media_files/2025/10/29/gilli-3-2025-10-29-17-02-58.jpg)
ರಿಷಾ ಗೌಡ ಬಂದಾಗ, ಗಿಲ್ಲಿ ಆಕೆಯ ಹಿಂದೆ ಬಿದ್ದಿದ್ದ. ಆಗ ಮನೆಯವರೆಲ್ಲರೂ ಸೇರಿ, ಕಾವ್ಯಾಳಿಂದ ರಾಕಿ ಕಟ್ಟಿಸಿದ್ದರು. ಇನ್ನು, ಚಂದ್ರಪ್ರಭ ಏನೂ ಕಡಿಮೆಯಿಲ್ಲ. ಮದ್ವೆಯಾಗಿದ್ದರೂ, ರಿಷಾ ಗೌಡ ಜೊತೆ ಆಡಿದ ಆಟಗಳು ಒಂದಾ ಎರಡಾ? ವೀಕೆಂಡ್‌ನಲ್ಲಿ ಬಿಗ್‌ಬಾಸ್ ಟೀಮ್, ಚಂದ್ರಪ್ರಭಾ ಪತ್ನಿಯ ವಿಡಿಯೋವನ್ನೇ ಪ್ಲೇ ಮಾಡಿತ್ತು. ಚಂದ್ರಪ್ರಭಾನಿಗೆ ಪತ್ನಿ ಸರಿಯಾಗಿಯೇ ಮಂಗಳಾರತಿ ಮಾಡಿದ್ದರು. ಇಷ್ಟೆಲ್ಲಾ ಸೀನ್ ನಡೀತಿರೋದು ರಿಯಲ್ಲಾಗೋ, ಕಂಟೆಂಟ್‌ಗೋ ಅನ್ನೋದು ವೀಕ್ಷಕರಿಗೆ ಚೆನ್ನಾಗಿ ಗೊತ್ತು ಬಿಡಿ.
ಇದನ್ನೂ ಓದಿ:ಬಿಗ್‌ಬಾಸ್ ಮನೆಯಿಂದ ಮಲ್ಲಮ್ಮ ಹೊರಗೆ ಬಂದಿರೋದು ನಿಜವೇ? ಸತ್ಯಾಂಶ ಏನು ಗೊತ್ತಾ ?
/filters:format(webp)/newsfirstlive-kannada/media/media_files/2025/10/29/gilli-4-2025-10-29-17-03-10.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us