/newsfirstlive-kannada/media/media_files/2025/10/29/rakshita-shetty-4-2025-10-29-22-29-41.jpg)
ಬಿಗ್​ಬಾಸ್​ ಮನೆಯಲ್ಲಿ ರಕ್ಷಿತಾಗೆ ಮನೆ ಕೆಲಸದವರ ರೀತಿ ಟ್ರೀಟ್ ಮಾಡಲಾಗ್ತಿದೆ. ಹೀಗೊಂದು ಚರ್ಚೆಯನ್ನ ಗಿಲ್ಲಿ ಮತ್ತು ಮ್ಯೂಟಂಟ್ ರಘು ಹುಟ್ಟಿಹಾಕಿದ್ದಾರೆ.
ಅಡುಗೆ ವಿಚಾರಕ್ಕೆ ನಿನ್ನೆಯೂ ರಕ್ಷಿತಾ ಶೆಟ್ಟಿ ಮತ್ತು ರಾಶಿ ಶೆಟ್ಟಿ ನಡುವೆ ಗಲಾಟೆ ಆಗಿದೆ. ರಕ್ಷಿತಾ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಾಗಿನಿಂದಲೂ ಅಡುಗೆ ಮನೆಯ ಎಲ್ಲ ಕೆಲಸಗಳಲ್ಲೂ ತೊಡಗಿಕೊಂಡಿದ್ದಾಳೆ. ಯಾರು ಅಡುಗೆ ಮಾಡ್ತಾರೋ ಬಿಡ್ತಾರೋ ರಕ್ಷಿತಾ ಮಾತ್ರ ದಿನಾ ಬೆಳಗ್ಗೆದ್ದು ಅಡುಗೆ ಮನಗೆ ಎಂಟ್ರಿಕೊಡ್ತಾಳೆ. ಇದನ್ನೇ ಮಿಸ್‌ಯೂಸ್ ಮಾಡಿಕೊಳ್ಳೋಕೆ ಮುಂದಾದವರಿಗೆ ರಕ್ಷಿತಾ ಈಗ ಸರಿಯಾದ ಉತ್ತರ ನೀಡಿದ್ದಾಳೆ.
ಇದನ್ನೂ ಓದಿ:ಕಾವ್ಯಾ-ಗಿಲ್ಲಿ ಲವ್ವರ್ಸ್! ಚಂದ್ರಪ್ರಭ-ರಾಶಿ ಅಣ್ಣ -ತಂಗಿ?
/filters:format(webp)/newsfirstlive-kannada/media/media_files/2025/10/29/ashwini-rashika-2025-10-29-22-34-19.jpg)
ಅಡುಗೆ ಮನೆ ಜವಾಬ್ದಾರಿ ರಕ್ಷಿತಾ ಜೊತೆಗೆ ರಾಶಿಕಾಗೂ ನೀಡಲಾಗಿತ್ತು. ಹಾಗಿದ್ರೂ ರಾಶಿಕಾ ಅಡುಗೆ ಮಾಡುವುದಕ್ಕೆ ಬಂದೇ ಇರುವುದಿಲ್ಲ. ಹೀಗಾಗಿ ರಕ್ಷಿತಾ ಅವಳನ್ನು ಅಡುಗೆ ಮಾಡಲು ಕರೆಯೋಕೆ ಹೋಗ್ತಾಳೆ. ಆದ್ರೆ ರಾಶಿಕಾ ಟಾಸ್ಕ್ ಆಡಿ ಕೈ ನೋವಾಗಿರೋದ್ರಿಂದ ಅಡುಗೆ ಮಾಡೋಕೆ ಆಗಲ್ಲ ಅನ್ನೋ ಸಿಲ್ಲಿ ಕಾರಣ ನೀಡುತ್ತಾಳೆ. ಇದರಿಂದ ಸಿಟ್ಟಾಗುವ ರಕ್ಷಿತಾ ರಾಶಿಕಾ ಅಡುಗೆ ಮಾಡೋಕೆ ಬರಲ್ಲ ಅಂತಿದ್ದಾಳೆ ಎಂದು ಮನೆ ಕ್ಯಾಪ್ಟನ್‌ಗೆ ಕಂಪ್ಲೇಂಟ್ ಕೂಡ ಮಾಡ್ತಾಳೆ.
ಇದೇ ವಿಚಾರ ದೊಡ್ಡ ಮೊಟ್ಟದಲ್ಲಿ ಗಲಾಟೆ ಆಗಿದೆ. ರಾಶಿಕಾಗೆ ಬೆಂಬಲ ನೀಡಲು ರಿಷಾ ಗೌಡ ಹಾಗೂ ಅಶ್ವಿನಿ ಗೌಡ ಸೇರಿಕೊಂಡಿದ್ದಾರೆ. ಈ ವೇಳೆ ಅಶ್ವಿನಿ ಗೌಡ ಹುಷಾರ್​ ಎಂದು ರಕ್ಷಿತಾಗೆ ಆವಾಜ್ ಹಾಕಿದ್ದಾರೆ. ಅಲ್ಲದೇ ಮೂವರು ಗುಟ್ಟಾಗಿ ಸೇರಿ ಎತ್ತಿಕಟ್ಟುವ ರೀತಿಯಲ್ಲಿ ಗುಸುಗುಸು ಎಂದಿದ್ದಾರೆ. ಈ ವೇಳೆ ರಿಷಾ ಗೌಡ, ಬೆಂಕಿ ಹಚ್ಚಿಬಿಡಿ ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: ಮಲ್ಲಮ್ಮರ ಇನ್​ಸ್ಟಾದಿಂದ ಅಧಿಕೃತ ಮಾಹಿತಿ.. ಅಸಲಿ ಸತ್ಯ ರಿವೀಲ್​..!
/filters:format(webp)/newsfirstlive-kannada/media/media_files/2025/10/29/ashwini-rashika-1-2025-10-29-22-34-31.jpg)
ನಿನಗಿಂತ ನಮಗೆ ಹೆಚ್ಚು ಗೌರವ ಇದೆ. ಗೌರವ ಕೊಟ್ಟು ಮಾತನ್ನಾಡುವ ಎಂದು ಅಶ್ವಿನಿ ಗದರಿದ್ದಾರೆ. ಈ ಮೂವರ ಜೊತೆ ರಕ್ಷಿತಾ ವಿರುದ್ಧ ರಾಶಿಕಾ ಪರವಾಗಿ ಸೂರಜ್ ಸಿಂಗ್ ಕೂಡ ಮಾತನ್ನಾಡಿದ್ದಾರೆ. ರಕ್ಷಿತಾ ಎಲ್ಲದಕ್ಕೂ ಕೂಗೋದಲ್ಲ. ಹೇಳೋದಕ್ಕೆ, ಕೇಳೋದಕ್ಕೆ ರೀತಿ, ನೀತಿ ಇದೆ. ಅದನ್ನು ತಿಳಿದುಕೊಂಡು ಮಾತ್ನಾಡು ಎಂದು ತಮ್ಮದೇ ಶೈಲಿಯಲ್ಲಿ ಗದರಿದ್ದಾರೆ. ಇತ್ತ ರಿಷಾ ಗೌಡ, ವಯಸ್ಸಿಗಾದರೂ ಮರ್ಯಾದೆ ಕೊಡು. ನೀನು ಅದನ್ನೂ ಯಾರಿಗೂ ಕೊಡ್ತಿಲ್ಲ ಎಂದು ಆವಾಜ್ ಹಾಕಿದ್ದಾರೆ.
ಈ ಗಲಾಟೆ ಮಧ್ಯೆ ಮ್ಯೂಟಂಟ್ ರಘು, ಗಿಲ್ಲಿ ಮತ್ತು ಮಾಳು ರಕ್ಷಿತಾ ಶೆಟ್ಟಿ ಬಗ್ಗೆ ಮಾತನ್ನಾಡಿದ್ದಾರೆ. ರಕ್ಷಿತಾ ಯಾವುದೇ ಕೆಲಸಕ್ಕೆ ಹೊದರೂ ಪೆಂಡಿಂಗ್ ಇರಲ್ಲ. ಆದರೆ ಇವರು ಮಾತ್ರ ಆಕೆಯನ್ನು ಮನೆ ಕೆಲಸದವರ ರೀತಿಯಲ್ಲಿ ಟ್ರೀಟ್ ಮಾಡ್ತಿದ್ದಾರೆ. ಪಾಪ ಆ ಹುಡುಗಿ ಎಲ್ಲಾ ಕೆಲಸವನ್ನೂ ಮಾಡ್ತಾಳೆ. ಅದೇ ಕಾರಣಕ್ಕೆ ಅಡುಗೆ ಕೆಲಸ ಅಂದರೆ ರಕ್ಷಿತಾ ಅಂದುಕೊಂಡು ಬಿಟ್ಟಿದ್ದಾರೆ ಎಂದು ಗಿಲ್ಲಿ ಮತ್ತು ಮ್ಯೂಟಂಟ್ ರಘು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: BBK12: ರಕ್ಷಿತಾ ಅಸಲಿ ಆಟ ಶುರು.. ರಾಶಿಕಾ ಜೊತೆಗಿನ ಕಿತ್ತಾಟ ಅಶ್ವಿನಿಗೂ ಅರಗಿಸಿಕೊಳ್ಳಲು ಆಗಲಿಲ್ಲ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us