Advertisment

ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮೇಲೆ ಕೋಟಿ ಕೋಟಿ ಹಣ ವಂಚನೆ ಕೇಸ್​.. ಅಸಲಿಗೆ ಆಗಿದ್ದೇನು?

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಹಾಗೂ ಇನ್ನೊಬ್ಬರ ವಿರುದ್ಧ ಹಣ ವಂಚನೆ ಆರೋಪ ಕೇಳಿ ಬಂದಿದೆ. ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಉದ್ಯಮಿಯೊಬ್ಬರು ದೂರು ದಾಖಲು ಮಾಡಿದ್ದಾರೆ

author-image
Bhimappa
Shilpa_Shetty
Advertisment

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ, ಇನ್ನೊಬ್ಬ ವಿರುದ್ಧ 60.4 ಕೋಟಿ ರೂಪಾಯಿಗಳ ವಂಚನೆ ಆರೋಪ ಕೇಳಿ ಬಂದಿದೆ. ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಉದ್ಯಮಿಯೊಬ್ಬರು ದೂರು ದಾಖಲು ಮಾಡಿದ್ದಾರೆ ಎಂದು ಹೇಳಲಾಗಿದೆ. 

Advertisment

ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಕೋಟಿ ಕೋಟಿ ಹಣ ವಂಚನೆ ಮಾಡಿದ್ದಾರೆ ಎಂದು ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲು) ದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಜುಹು ನಗರದ ನಿವಾಸಿ ಹಾಗೂ ಲೋಟಸ್ ಕ್ಯಾಪಿಟಲ್ ಫೈನಾನ್ಸ್​ ಸರ್ವೀಸ್​ ಪ್ರವೇಟ್​ ಲಿಮಿಟೆಡ್ ಕಂಪನಿಯ ನಿರ್ದೇಶಕ ದೀಪಕ್ ಕೊಠಾರಿ (60) ಅವರು ದೂರು ಪ್ರಕರಣ ದಾಖಲು ಮಾಡಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ಧರ್ಮಸ್ಥಳದ 13ನೇ ಪಾಯಿಂಟ್​ನಲ್ಲಿ ಸಿಕ್ಕಿದ್ದು ಏನು.. 15 ಅಡಿ ಅಗೆದರೂ ಎಸ್​​ಐಟಿ ನಿರಾಸೆ ಅನುಭವಿಸಿತಾ?

Shilpa_Shetty_Raj_Kundra

ದೀಪಕ್ ಕೊಠಾರಿ ನೀಡಿದ ದೂರನ್ನು ಪೊಲೀಸರು ಮೊದಲು ತೆಗೆದುಕೊಳ್ಳಲಿಲ್ಲ. ಬಳಿಕ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಕೆಲವು ಅಂಶಗಳು ಕಂಡು ಬಂದಿದ್ದರಿಂದ ಪ್ರಕರಣ ದಾಖಲಿಸಿ, ಇಒಡಬ್ಲುಗೆ ಒಪ್ಪಿಸಲಾಗಿದೆ. ಬೆಸ್ಟ್​ ಡೀಲ್ ಟಿವಿ ಪ್ರವೇಟ್​ ಲಿಮಿಟೆಡ್​ಗೆ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ಹಾಗೂ ಇನ್ನೊಬ್ಬ ವ್ಯಕ್ತಿ ಸೇರಿ 60.4 ಕೋಟಿ ರೂಪಾಯಿಗಳ ವಂಚಿಸಿದ್ದಾರೆ ಎಂದು ಹೇಳಲಾಗಿದೆ. 

Advertisment

ಕಂಪನಿಯಿಂದ ಮೊದಲು ಶೇ.12 ರಷ್ಟು ಬಡ್ಡಿಯಂತೆ 75 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದರು. ಬಳಿಕ ಅಸಲು ಮತ್ತು ಬಡ್ಡಿ ಪಾವತಿ ಮಾಡವ ಭರವಸೆ ನೀಡಿ, ಕಂಪನಿಯಲ್ಲಿ ಅದೇ ಹಣವನ್ನು ಹೂಡಿಕೆ ಎಂದು ನಮ್ಮನ್ನು ಮನವೋಲಿಸಿದರು. ಸರ್ಕಾರಕ್ಕೆ ತೆರಿಗೆ ತಪ್ಪಿಸುವುದಕ್ಕಾಗಿ ಸಾಲವನ್ನು ಹೂಡಿಕೆ ಎಂದು ರೂಟ್ ಬದಲಾಯಿಸಿದರು. ಹೀಗಾಗಿ ಕೊಠಾರಿ ಅವರು 2015ರ ಏಪ್ರಿಲ್​ನಲ್ಲಿ 31.9 ಕೋಟಿ ರೂಪಾಯಿ ವರ್ಗಾಯಿಸಿದ್ದರು. ಇದಾದ ಮೇಲೆ 2015ರ ಸೆಪ್ಟೆಂಬರ್​ನಲ್ಲಿ 28.53 ಕೋಟಿ ರೂಪಾಯಿ ವರ್ಗಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shilpa Shetty
Advertisment
Advertisment
Advertisment