/newsfirstlive-kannada/media/media_files/2025/10/13/shain_shetty_raju_talikote-2025-10-13-22-37-33.jpg)
ಉಡುಪಿ: ಧಾರಾವಾಡ ರಂಗಾಯಣದ ನಿರ್ದೇಶಕರಾಗಿದ್ದ ಹಾಸ್ಯನಟ, ರಂಗಭೂಮಿ ಕಲಾವಿದ, ರಂಗಕರ್ಮಿ ರಾಜು ತಾಳಿಕೋಟಿ (62) ಅವರು ಹೃದಯಾಘಾತದಿಂದ ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.
ಸದ್ಯ ಈ ಸಂಬಂಧ ಮಣಿಪಾಲ ಆಸ್ಪತ್ರೆ ಮುಂದೆ ನಟ ಶೈನ್ ಶೆಟ್ಟಿ ಅವರು ಕಣ್ಣೀರಿಟ್ಟಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶೈನ್ ಶೆಟ್ಟಿ ಅವರು, ರಾಜು ತಾಳಿಕೋಟಿ ಅವರು, ನಾನು ಬಿಗ್ ಬಾಸ್ ಸೀಸನ್ 7ರಲ್ಲಿ ಜೊತೆಗಿದ್ದೇವು. ಇಡೀ ಸೀಸಸ್​ ನಟರ ಜೊತೆ ಅನ್ಯೋನ್ಯವಾಗಿದ್ದರು. ತುಂಬಾ ತಮಾಷೆ, ಬಹಳ ಪ್ರೀತಿಸುವ ವ್ಯಕ್ತಿ. ಸಿನಿಮಾ ನಿರ್ಮಾಣದ ಕಾಲ ಕೂಡಿ ಬಂದಾಗ ರಾಜು ಅವರನ್ನು ಸಂಪರ್ಕ ಮಾಡಿದ್ದೆ. ನಮ್ಮ ಸಿನಿಮಾಕ್ಕೆ ಮೊದಲು ಆಯ್ಕೆ ಮಾಡಿದ್ದು ರಾಜು ತಾಳಿಕೋಟೆ ಅವರನ್ನೇ ಎಂದು ನೆನಪು ಮಾಡಿಕೊಂಡರು.
ಪಾತ್ರ ಮತ್ತು ಡೈಲಾಗ್ ಅವರಿಗಾಗಿಯೇ ಬರೆದಿದ್ದೇವೆ. ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ. ಉಡುಪಿ ಮಂಗಳೂರು ಸುತ್ತಾಡಲು, ಮೀನು ತಿನ್ನಲು ಒಂದು ದಿನ ಮೊದಲೇ ಇಲ್ಲಿಗೆ ಬಂದಿದ್ದರು. ಗೆಳೆಯರ ಜೊತೆ ಬೇರೆ ಬೇರೆ ಸ್ಥಳಗಳಲ್ಲಿ ಸುತ್ತಾಡಿದ್ದಾರೆ. ನೆನ್ನೆ ರಾತ್ರಿ 11 ಗಂಟೆಗೆ ತಂಡದ ಜೊತೆ ಮಾತನಾಡಿದ್ದಾರೆ. 11.59ಕ್ಕೆ ಉಸಿರಾಟ ಸಮಸ್ಯೆ ಅಂತ ಫೋನ್ ಮಾಡಿದ್ದಾರೆ. ಕೂಡಲೇ ಹೆಬ್ರಿ ಹೆಲ್ತ್ ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಹೇಳಿದ್ದಾರೆ.
ಅಲ್ಲಿಂದ ನೇರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದೇವು. ಕಳೆದ ರಾತ್ರಿಯೇ ಕುಟುಂಬಕ್ಕೆ ಅವರ ಅನಾರೋಗ್ಯದ ಕುರಿತು ಮಾಹಿತಿ ನೀಡಲಾಗಿತ್ತು. ಮಕ್ಕಳು, ಕುಟುಂಬಸ್ಥರು ಬಂದಿದ್ದರು ಅವರು ಕೊನೆಯ ಉಸಿರೆಳೆದಿದ್ದಾರೆ. ರಾಜು ತಾಳಿಕೋಟೆಗೆ ಒಟ್ಟು 40 ದಿನದ ಶೆಡ್ಯೂಲ್ ಫಿಕ್ಸ್ ಆಗಿತ್ತು. ರಾಜು ತಾಳಿಕೋಟೆ ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ನೀನಗೋಸ್ಕರ ಈ ಸಿನಿಮಾ ಮಾಡುತ್ತಿದ್ದೇನೆ ಅಂತ ಹೇಳುತ್ತಿದ್ದರು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ