Advertisment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಗಾಯಕಿ ಅನನ್ಯ ಭಟ್

ಕನ್ನಡದ ಜನಪ್ರಿಯ ಗಾಯಕಿ ಅನನ್ಯಾ ಭಟ್ (Ananya Bhat) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ, ಲೂಸಿಯಾ, ಟಗರು ಸಿನಿಮಾ ಹಾಡುಗಳ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.

author-image
Ganesh Kerekuli
Ananya Bhat
Advertisment

ಕನ್ನಡದ ಜನಪ್ರಿಯ ಗಾಯಕಿ ಅನನ್ಯಾ ಭಟ್ (Ananya Bhat) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್, ಕಾಂತಾರ, ಲೂಸಿಯಾ, ಟಗರು ಸಿನಿಮಾ ಹಾಡುಗಳ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.  

Advertisment

ಡ್ರಮ್ಮರ್ ಮಂಜು, ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್ ಡ್ರಮ್ಮರ್ ಮಂಜುನಾಥ್ ಜೊತೆ ಅನನ್ಯಾ ಭಟ್ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರು ಒಂದೇ ಬ್ಯಾಂಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ತುಂಬಾ ವರ್ಷಗಳ ಗೆಳೆಯರಾಗಿದ್ದರು. ನಿನ್ನೆ ತಿರುಪತಿಯಲ್ಲಿ (Tirupati) ಕುಟುಂಬಸ್ಥರು, ಆಪ್ತ ಬಳಗದ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Ananya Bhat (1)

ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕರು ಪಂಡಿತರು ಆದ ಪಂಡಿತ್ ಡಾ.ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ವಿವಾಹವಾಗಿದ್ದಾರೆ. ಅನನ್ಯಾ ಭಟ್ ಅವರು ಸಿನಿಮಾ ಹಾಡು, ಭಕ್ತಿ ಗೀತೆ, ಜಾನಪದ ಗೀತೆಗಳನ್ನ ತಮ್ಮ ಮಧುರ ಕಂಠದಿಂದ ಹಾಡಿ ಖ್ಯಾತಿ ಪಡೆದಿದ್ದಾರೆ. 

ಇದನ್ನೂ ಓದಿ: ಬಾಲಿವುಡ್​ ಸೂಪರ್ ಸ್ಟಾರ್ ಧರ್ಮೇಂದ್ರ ಅವರ ಆರೋಗ್ಯ ಗಂಭೀರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ananya Bhat
Advertisment
Advertisment
Advertisment