ಸಿಂಗಾಪುರದಲ್ಲಿ ಭಾರತದ ಖ್ಯಾತ ಸಿಂಗರ್​ ನಿಧನ.. ಅಸಲಿಗೆ ಅಲ್ಲಿ ಆಗಿದ್ದೇನು..?

ಗಾಯಕ ಜುಬೀನ್​ ಗಾರ್ಗ್ (52) ಇವರು ಈಶಾನ್ಯ ಭಾರತ ಉತ್ಸವಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಜುಬೀ ಗಾರ್ಗ್ ಸ್ಕೂಬಾ ಡೈವಿಂಗ್‌ಗೆಂದು ತೆರಳಿದಾಗ ಅಪಘಾತ ಸಂಭವಿಸಿದೆ. ಸ್ಕೂಬಾ ಡೈವಿಂಗ್‌ ಮಾಡುತ್ತಿರುವಾಗಲೇ ಆಘಾತ ಸಂಭವಿಸಿದೆ.

author-image
Bhimappa
Zubeen_Garg_New
Advertisment

ಬಾಲಿವುಡ್‌ ಹಾಗೂ ಅಸ್ಸಾಮಿಯ ಖ್ಯಾತ ಗಾಯಕ ಜುಬೀನ್​ ಗಾರ್ಗ್ (Singer Zubeen Garg) ಅವರು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ನಿಧನರಾಗಿದ್ದಾರೆ. ಇದೇ 20, 21 ರಂದು ನಾರ್ತ್​ ಈಸ್ಟ್​ ಇಂಡಿಯಾ ಫೆಸ್ಟಿವಲ್​ಗಾಗಿ ಸಿಂಗಾಪುರಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. 

ಗಾಯಕ ಜುಬೀನ್​ ಗಾರ್ಗ್ (52) ಇವರು ಈಶಾನ್ಯ ಭಾರತ ಉತ್ಸವಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಜುಬೀ ಗಾರ್ಗ್ ಸ್ಕೂಬಾ ಡೈವಿಂಗ್‌ಗೆಂದು ತೆರಳಿದಾಗ ಅಪಘಾತ ಸಂಭವಿಸಿದೆ. ಸ್ಕೂಬಾ ಡೈವಿಂಗ್‌ ಮಾಡುತ್ತಿರುವಾಗಲೇ ಆಘಾತ ಸಂಭವಿಸಿದ್ದು ತಕ್ಷಣ ಅವರನ್ನ ಸಮುದ್ರದಿಂದ ರಕ್ಷಣೆ ಮಾಡಲಾಗಿತ್ತು. ಬಳಿಕ ಸಿಂಗಾಪುರದ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಉಸಿರಾಟ ಸಮಸ್ಯೆ ಎದುರಾಗಿದ್ದರಿಂದ ಕೊನೆಯುಸಿರೆಳೆದಿದ್ದಾರೆ.  

ಇದನ್ನೂ ಓದಿ:ಕಾಂತಾರ ಪ್ರೀಕ್ವೆಲ್ ಬಿಗ್​ ಅಪ್​ಡೇಟ್ಸ್​.. ಟ್ರೈಲರ್ ರಿಲೀಸ್ ಮಾಡೋ ದಿನ, ಸಮಯ ಯಾವುದು?

Zubeen_Garg

ಜುಬೀನ್​ ಗಾರ್ಗ್ ನಿಧನ ಹೊಂದಿದ್ದಾರ ಎಂದು ಅಸ್ಸಾಂನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಿಂಘಾಲ್ ಖಚಿತಪಡಿಸಿದ್ದಾರೆ. ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ ಶರ್ಮಾ ಸಂತಾಪ ಸೂಚಿಸಿದ್ದಾರೆ. ಜುಬೀನ್​ ಗಾರ್ಗ್ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಭಾರತದ ಹೈಕಮಿಷನ್ ಆಯೋಜಿಸಿದ್ದ ಈಶಾನ್ಯ ಭಾರತ ಉತ್ಸವಕ್ಕಾಗಿ ಸಾಂಸ್ಕೃತಿಕ ಬ್ರಾಂಡ್ ರಾಯಭಾರಿಯಾಗಿ ಗಾರ್ಗ್‌ ಭಾಗವಹಿಸಬೇಕಿತ್ತು. ಹೀಗಾಗಿ ಅಲ್ಲಿಗೆ ತೆರಳಿದ್ದರು. ಆದರೆ ಈ ವೇಳೆ ಸ್ಕೂಬಾ ಡೈವಿಂಗ್‌ ಮಾಡುವಾಗ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ತಕ್ಷಣ ಆಸ್ಪತ್ರೆ ಕರೆದೊಯ್ದರು ಬದುಕುಳಿಯಲಿಲ್ಲ. ಅಸ್ಸಾಂ ಕೇವಲ ಒಂದು ಧ್ವನಿ ಮಾತ್ರವಲ್ಲ, ಹೃದಯ ಬಡಿತವನ್ನೂ ಕಳೆದುಕೊಂಡಿದೆ ಎಂದು ಸಚಿವ ಅಶೋಕ್ ಸಿಂಘಾಲ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bollywood singer scuba diving
Advertisment