/newsfirstlive-kannada/media/media_files/2025/11/08/prithviraj_sukumaran_ssmb29-2025-11-08-09-18-16.jpg)
ಸ್ಟಾರ್ ಡೈರೆಕ್ಟರ್​ ಎಸ್. ಎಸ್ ರಾಜಮೌಳಿ ಸಿನಿಮಾಗಳು ಎಂದರೆ ಸಕ್ಸಸ್ ಪಕ್ಕಾ. ಯಾವುದೇ ಹೀರೋ ಜೊತೆ ಮೂವಿ ಮಾಡಿದರೂ ನಿರ್ದೇಶಕ ರಾಜಮೌಳಿ 100ಕ್ಕೆ ನೂರರಷ್ಟು ಫಲಿತಾಂಶ ಪಡೆಯುತ್ತಾರೆ. ಸಿನಿಮಾದಲ್ಲೂ ಯಶಸ್ಸು, ಭರ್ಜರಿ ಕಲೆಕ್ಷನ್, ಮೂವಿಯಲ್ಲಿ ನಟಿಸಿದ ಎಲ್ಲರಿಗೂ ಒಳ್ಳೆ..ಒಳ್ಳೆ ಅವಕಾಶಗಳು ಸಿಗುತ್ತವೆ. ಸದ್ಯ ರಾಜಮೌಳಿ, ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ SSMB29 ಸಿನಿಮಾ ಮಾಡುತ್ತಿದ್ದು ಈ ಮೂವಿಯಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅವರ ಫಸ್ಟ್ ಲುಕ್ ಫೋಟೋ ರಿಲೀಸ್ ಮಾಡಲಾಗಿದೆ.
ಸಲಾರ್ ಮೂವಿಯಲ್ಲಿ ಪ್ರಭಾಸ್​ ಜೊತೆ ಅಭಿನಯ ಮಾಡಿದ್ದ ಪೃಥ್ವಿರಾಜ್ ಸುಕುಮಾರನ್ ಅವರು ಈಗ ಮಹೇಶ್​ ಬಾಬು ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನ ಮಾಡುತ್ತಿರುವ ಬಿಗ್ ಬಜೆಟ್ ಮೂವಿಯಲ್ಲಿ ಪೃಥ್ವಿರಾಜ್ ಫಸ್ಟ್​ ಲುಕ್ ರಗಡ್​ ಆಗಿದೆ. ಫೋಟೋದಲ್ಲಿ ವಿಶಿಷ್ಟವಾದ ರೋಬೋಟಿಕ್ ಮಾದರಿಯ ವೀಲ್​ಚೇರ್ ಮೇಲೆ ಕಪ್ಪು ಬಣ್ಣದ ಉಡುಪುಗಳನ್ನು ಧರಿಸಿ ಕುಳಿತಿರುವ ಪೃಥ್ವಿರಾಜ್ ಕೋಪದಲ್ಲಿ ಭಯ ಮೂಡುವಂತೆ ನೋಡುತ್ತಿದ್ದಾರೆ. ಫೈಟ್ ಸೀನ್ ಇದಾಗಿದ್ದು ಸಿನಿಮಾದಲ್ಲಿ ಪೃಥ್ವಿರಾಜ್ ವಿಶೇಷ ಚೇತನ ಪಾತ್ರದಲ್ಲಿ ಅಭಿನಯ ಮಾಡುತ್ತಿರುವುದು ಗೊತ್ತಾಗುತ್ತದೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬ್ರಹ್ಮಗಂಟು ಖ್ಯಾತಿಯ ಭರತ್​ ನಾಯಕ್ ದಂಪತಿ..!
/filters:format(webp)/newsfirstlive-kannada/media/media_files/2025/11/08/ss_rajamouli-_ssmb29-2025-11-08-09-18-27.jpg)
ಸ್ವತಹ ರಾಜಮೌಳಿ ಅವರೇ ಈ ಮೊದಲ ಫೋಟೋವನ್ನು ತಮ್ಮ ಅಧಿಕೃತ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಾನು ಮೊದಲ ಶಾಟ್ ತೆಗೆದ ಮೇಲೆ ಪೃಥ್ವಿ ಬಳಿ ಹೋಗಿ ನೀನು ಫೈನಸ್ಟ್ ಆ್ಯಕ್ಟರ್ ಎಂದು ಹೇಳಿದೆ. ರೋಬೋಟಿಕ್ ವೀಲ್​ಚೇರ್ ಮೇಲೆ ಕುಂಭನಾಗಿ ಕುಳಿತಿರುವ ಪೃಥ್ವಿರಾಜ್ ಎಲ್ಲರ ಮುಂದೆ ಬರಲಿದ್ದಾರೆ.
ಕುಂಭ ಪಾತ್ರನಾದ ಪೃಥ್ವಿರಾಜ್ ಸಿನಿಮಾದಲ್ಲಿ ಪವರ್​ಫುಲ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆಗಳನ್ನು ಚಿತ್ರತಂಡ ನೀಡಿಲ್ಲ. ಇನ್ನು ಇದೇ ತಿಂಗಳು 15 ರಂದು ರಾಮೋಜಿ ಫಿಲ್ಮ ಸಿಟಿಯಲ್ಲಿ ದೊಡ್ಡದಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮಹೇಶ್​ ಬಾಬು ಹಾಗೂ ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಅವರ ಫಸ್ಟ್ ಲುಕ್ ಹಾಗೂ ಟೈಟಲ್ ಅನ್ನು ರಿಲೀಸ್ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us