/newsfirstlive-kannada/media/post_attachments/wp-content/uploads/2025/02/actor-Govinda.jpg)
ಇತ್ತೀಚೆಗೆ ದೊಡ್ಡ ದೊಡ್ಡ ಸೆಲೆಬ್ರೆಟಿಗಳಿಗೆ ಡಿವೋರ್ಸ್ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೂ ನಟ, ನಟಿಯರ ಡಿವೋರ್ಸ್ ಸುದ್ದಿಗಳು ಒಂದಲ್ಲಾ ಒಂದು ಇದ್ದೇ ಇರುತ್ತದೆ. ಅದೇ ಸಾಲಿನಲ್ಲಿ ಬಾಲಿವುಡ್ ಸ್ಟಾರ್ ನಟ ಗೋವಿಂದ ಇದ್ದಾರೆ. ಸ್ಟಾರ್ ನಟ ಗೋವಿಂದ ಪತ್ನಿ ಸುನೀತಾ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸುಜಾತ ಭಟ್ ಬಗ್ಗೆ ಸೋದರನ ಶಾಕಿಂಗ್ ಹೇಳಿಕೆ, ಮಗಳು ಇರಲು ಸಾಧ್ಯವೇ ಇಲ್ಲ!
ಗೋವಿಂದ ಅವರ ವಿರುದ್ಧ ‘ಪ್ರೀತಿ-ವಿವಾಹದಲ್ಲಿ ಮೋಸ, ನೋವುಂಟುಮಾಡುವುದು ಮತ್ತು ಪ್ರತ್ಯೇಕವಾಗಿ ವಾಸಿಸುವುದು’ ಎಂಬ ಕಾರಣಕ್ಕಾಗಿ ಅವರು ವಿಚ್ಛೇದನವನ್ನು ಕೋರಿದ್ದಾರೆ. ಸುನೀತಾ ಅಹುಜಾ ಹಿಂದೂ ವಿವಾಹ ಕಾಯ್ದೆ 1955 (Hindu Marriage Act)ರ ಸೆಕ್ಷನ್ 13 (1) (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದ ಗೋವಿಂದ ಮತ್ತು ಸುನೀತಾ 37 ವರ್ಷದ ತುಂಬು ದಾಂಪತ್ಯ ಜೀವನ ಒಟ್ಟಿಗೆ ನಡೆಸಿದ್ದಾರೆ. ಇವರಿಗೆ ಟಿನಾ ಅಜುಜಾ ಮತ್ತು ಯಶವರ್ಧನ್ ಅಹುಜಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. 37 ವರ್ಷ ಸುನೀತಾ ಅಹುಜಾ ಜೊತೆ ಸಂಸಾರ ಮಾಡಿರುವ ಬಾಲಿವುಡ್ ನಟ ಗೋವಿಂದ ಇದೀಗ ಇಬ್ಬರು ಕೆಲವು ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿತ್ತು. ಇದೀಗ ನಟ ಗೋವಿಂದ ಪತ್ನಿ ಸುನೀತಾ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಕೆಲ ತಿಂಗಳ ಹಿಂದೆ ಸುನೀತಾ ಅಹುಜಾ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು. ನಾನು ಮತ್ತು ನನ್ನ ಮಕ್ಕಳು ಫ್ಲಾಟ್‌ನಲ್ಲಿ ವಾಸ ಮಾಡುತ್ತಿದ್ದೇವೆ. ಪತಿ ಗೋವಿಂದ ಬೇರೆಯಾಗಿ ಒಬ್ಬರೇ ನಮ್ಮದೇ ಇನ್ನೊಂದು ಬಂಗಲೆಯಲ್ಲಿ ವಾಸವಿದ್ದಾರೆ ಎಂದು ತಾವು ದೂರ ದೂರ ಇರುವುದಾಗಿ ಹೇಳಿಕೊಂಡಿದ್ದರು. ಇದರಿಂದ ಗೋವಿಂದ ಮತ್ತು ಸುನೀತಾ ಅಹುಜಾ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಆದ್ರೆ, ಮೂಲಗಳ ಪ್ರಕಾರ, ಇವರಿಬ್ಬರ ದಾಂಪತ್ಯದಲ್ಲಿ ಹುಳಿ ಹಿಂಡಿರುವುದು ಮರಾಠಿ ಚಿತ್ರರಂಗದ 30ರ ಹರೆಯದ ನಟಿ ಎಂದು ಹೇಳಲಾಗುತ್ತಿದೆ. ಅಲ್ಲದೇ ಗೋವಿಂದ ಅವರ ಮರಾಠಿ ನಟಿಯೊಂದಿಗಿನ ಸಂಬಂಧ ವಿಚ್ಛೇದನ ಕಾರಣವಾಗಿದೆ ಎಂದು ವರದಿಯಾಗಿದೆ. ಆದರೆ ಆ ನಟಿ ಯಾರು ಎಂಬುದು ಇನ್ನೂ ಮಾಹಿತಿ ಸಿಕ್ಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ