Advertisment

ಕುವೆಂಪು ಆಶಯದಂತೆ ಸುಹಾನ ಸೈಯದ್-ನಿತಿನ್ ಮದುವೆ.. ಪ್ರೇಮಿಗಳ ಹೆಜ್ಜೆ ವಿಶ್ವಪಥದತ್ತ..!

ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನ ಸೈಯದ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಾಳೆ ಮದುವೆ ಆಗುತ್ತಿದ್ದು, ಮದುವೆ ಆಹ್ವಾನ ಪತ್ರದಲ್ಲಿ ಏನು ಬರೆದಿದ್ದಾರೆ ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
Singer Suhana
Advertisment

ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನ ಸೈಯದ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Advertisment

ನಿತಿನ್ ಎಂಬ ರಂಗಭೂಮಿ ಕಲಾವಿದನ ಸುಹಾನ ಪ್ರೀತಿಸುತ್ತಿದ್ದು, ಈಗ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ. ವಿಶೇಷವೆಂದರೆ ಕುವೆಂಪು ಮಂತ್ರ ಮಾಂಗಲ್ಯದ ಆಶಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆ ಕನಕಪುರದ ಖಾಸಗೀ ರೆಸಾರ್ಟ್​ನಲ್ಲಿ ಮದುವೆ ಆಗುತ್ತಿದ್ದಾರೆ..
ಮದುವೆಗೆ ಸಂಬಂಧಿಸಿದ ಆಮಂತ್ರಣ ಕರೆಯೋಲೆಯಲ್ಲಿ ಹೀಗೆ ಬರೆಯಲಾಗಿದೆ..

ಪ್ರೀತಿ ವಿಶ್ವದ ಭಾಷೆ

ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ
ದೇವರ ವಿರಚಿತ

ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ 
ಆಶಯದಂತೆ ಜೊತೆಯಾಗಲಿರುವ 

ಸುಹಾನ ಮತ್ತು ನಿತಿನ್

ನಮ್ಮ ನಡೆ ವಿಶ್ವಮಾನವತ್ವದೆಡೆ

ಸಹೃದಯಿಗಳೇ,
ಬನ್ನಿ, ಹರಸಿ, ಆಶೀರ್ವದಿಸಿ..

ಸರಿಗಮಪ ಸೀಸನ್ 13 ರ ಸ್ಪರ್ಧೆಯಾಗಿದ್ದ ಸುಹಾನಾ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ರು. ಶೋ ನಲ್ಲಿ ಹಾಡಿದ ಹಲವು ಗೀತೆಗಳ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸರಾಗಿದ್ರು. ತಮ್ಮ ಬೋಲ್ಡ್ ಲುಕ್ಸ್ ಹಾಗೂ ಡೊಂಟ್ ಕೇರ್ ಸ್ವಭಾವದ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ ಸುಹಾನ.

ಇದನ್ನೂ ಓದಿ: ಆಕೆಯ ನೆನಪು ಕಾಡ್ತಿದೆ ಅಂತ ಅತ್ತೆ ಮನೆಯಿಂದ ಒಡವೆ ಕೊಂಡೊಯ್ದಿದ್ದ ಪಾಪಿ..

Advertisment

suhana

ಸದ್ಯ ಮದುವೆಗೆ ಸಜ್ಜಗಿರೋ ಸುಹಾನಾ ತಮ್ಮ ಪ್ರೀತಿಯ ಗುಟ್ಟು ಬಿಚ್ಚಿಟ್ಟಿದ್ದಾರೆ. ಬಹುಕಾಲದ ಗೆಳೆಯ ನಿತಿನ್ ಎಂಬುವವರನ್ನ ವರಿಸಲಿದ್ದಾರೆ ಸುಹಾನಾ. ಸುಹಾನಾ ಮದುವೆ ಆಗ್ತಿರೋ ಹುಡುಗ ನಿತಿನ್ ಶಿವಾಂಶ್. ರಂಗಭೂಮಿ ಕಲಾವಿದರು. ಪ್ರಸಿದ್ಧ ರಂಗ ತರಬೇತಿ ಕೇಂದ್ರ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇವರದ್ದು ಪ್ರೇಮ ವಿವಾಹ. 16  ವರ್ಷಗಳ ಸುದೀರ್ಘ ಸ್ನೇಹ ಪ್ರೀತಿ ಕಾರಣ ವಾಗಿದೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರೀತಿಯ ವಿಷಯವನ್ನು ಸುಹಾನ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

sarigamapa zee kannada suhaana syed Love story nithin
Advertisment
Advertisment
Advertisment