/newsfirstlive-kannada/media/media_files/2025/10/16/kruthika-case-2025-10-16-08-10-17.jpg)
ಇದು ಹೆತ್ತವರನ್ನ ಬೆಚ್ಚಿ ಬೀಳಿಸುವ ಸ್ಟೋರಿ.. ಮಗಳು ಚನ್ನಾಗಿರ್ಲಿ ಅಂತ ಪೋಷಕರು ವೈದ್ಯನಿಗೆ ಕೊಟ್ಟು ಮದುವೆ ಮಾಡಿದ್ರೆ ಆ ಕಟುಕ ತಾಳಿ ಕಟ್ಟಿದ ಪತ್ನಿಯನ್ನೇ ಮುಗಿಸಿದ್ದಾನೆ. ವೈದ್ಯಕೀಯ ವಿದ್ಯೆ ಬಳಸಿ ಪತ್ನಿಯ ಕಥೆಯನ್ನ ಅಂತ್ಯಗೊಳಿಸಿದ್ದಾನೆ. ಈ ಮಧ್ಯೆ ಇವರ ಅದ್ಧೂರಿ ವಿವಾಹ ಎಂತವರ ಕಣ್ಣು ಕುಕ್ಕಿಸುವಂತಿತ್ತು ಅನ್ನೋದೇ ದುರಂತ.
ಪತ್ನಿಗೆ ಇಂಜೆಕ್ಷನ್ ಕೊಟ್ಟು ಕೊಂ* ಡಾಕ್ಟರ್ ಪತಿ.. ಈ ಸುದ್ದಿ ಕೇಳಿ ನಿನ್ನೆ ರಾಜ್ಯವೇ ಬೆಚ್ಚಿಬಿದ್ದಿತ್ತು. ಮನೆಯವರೇ ಒಮ್ಮತದಿಂದ ಧಾರೆ ಎರೆದು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ರು. ಆದ್ರೆ ಜೀವನದಲ್ಲಿ ಜೊತೆಯಾಗಿರ್ತಿನಿ ಅಂತ ಬಂದವಳನ್ನು ಕನಿಷ್ಠ ಪಕ್ಷ ರೋಗಿಯಂತೆಯೂ ಕಾಣದೇ ವೈದ್ಯೋ ನಾರಾಯಣ ಹರಿ ಅನ್ನೋ ಮಾತಿಗೆ ಅಪವಾದವಾಗಿದ್ದ. ಇದು ತೀವ್ರ ಸಂಚಲನ ಸೃಷ್ಟಿಸಿತ್ತು. ಈಗ ಪ್ರಕರಣದ ಮತ್ತಷ್ಟು ಶಾಕಿಂಗ್ ವಿಚಾರ ಹೊರಬರ್ತಿವೆ.
6 ಸ್ಥಳದಲ್ಲಿ ವೆಡ್ಡಿಂಗ್ ಶೂಟ್
ಪತಿ ಮಹೇಂದ್ರ ರೆಡ್ಡಿಯಿಂದ ಕೊಲೆಯಾದ ಪತ್ನಿ ಕೃತಿಕಾ ರೆಡ್ಡಿ ಅದೆಷ್ಟೋ ಕನಸು ಕಟ್ಟಿಕೊಂಡು ಮದುವೆಯಾಗಿದ್ಲು. ತಾನು ವೈದ್ಯೆಯಾಗಿದ್ದು ಜನರ ಜೀವ ಉಳಿಸುವ ದೇವತೆಯಾಗಿದ್ಲು. ಕೃತಿಕಾ-ಮಹೇಂದ್ರರ ಮದುವೆ ಭಾರಿ ಅದ್ಧೂರಿಯಾಗಿ ನಡೆದಿತ್ತು. ಕಾಶ್ಮೀರ ಸೇರಿ ಒಂದಲ್ಲ ಎರಡಲ್ಲ ಬರೋಬ್ಬರಿ 6 ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಲಾಗಿತ್ತು. 2024ರ ಫೆಬ್ರವರಿಯಲ್ಲಿ ಕಾಶ್ಮೀರಕ್ಕೆ ತೆರಳಿದ್ದ ಜೋಡಿ ಮೇ 26ರಂದು ಹೊಸಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಮದುವೆಯಾಗಿ ಕೆಲವೇ ತಿಂಗಳಲ್ಲಿ ವೈದ್ಯ ರಕ್ಕಸನಾಗಿದ್ದ. ಕೃತಿಕಾ ಸಾವಾಗಿ 6 ತಿಂಗಳ ಬಳಿಕ ಅವನೇ ಕೊ* ಮಾಡಿದ್ದು ಬಯಲಾಗಿದೆ.
ಕೃತಿಕಾ ನೆನಪು ಕಾಡ್ತಿದೆ ಅಂತ ಒಡವೆ ಕೊಂಡೊಯ್ದಿದ್ದ..
ಕೃತಿಕಾ ಸಾ*ನ ಬಳಿಕವೂ ಮಾವನ ಮನೆಗೆ ಬಂದಿದ್ದ ಪಾಪಿ ಪತಿ ಮಹೇಂದ್ರ, ಕೃತಿಕಾ ನೆನಪು ಕಾಡ್ತಿದೆ. ಅವಳ ಒಡವೆಗಳು ನನಗೆ ಬೇಕು. ಅದನ್ನ ಮೆಮೊರಿಯಾಗಿ ಇಟ್ಕೊಬೇಕು ಅಂತ ಹೇಳಿ ಎಲ್ಲಾ ಒಡವೆ ತೆಗೆದುಕೊಂಡು ಹೋಗಿದ್ದ. ಒಡವೆ ಹಾಗೂ ಅವಳಿಗೆ ಸೇರಿದ ಎಲ್ಲಾ ವಸ್ತು ತೆಗೆದುಕೊಂಡು ಹೋಗಿದ್ದ ಅಂತ ಕೃತಿಕಾ ಕುಟುಂಬಸ್ಥರು ಹೇಳಿದ್ದಾರೆ.
ಮಗಳಿಗೆ ನೀಡಿದ್ದ ಮನೆ ಇಸ್ಕಾನ್​ಗೆ ದಾನ ನೀಡಿದ ತಂದೆ
ಇನ್ನು ಕೃತಿಕಾ ತಂದೆ, ಅಳಿಯ ಮಹೇಂದ್ರ ರೆಡ್ಡಿಗಾಗಿ ಏನನ್ನೂ ಮಾಡೋದಕ್ಕೂ ರೆಡಿ ಇದ್ರಂತೆ.. ಇತ್ತೀಚಿಗೆ ಅಳಿಯನಿಗಾಗಿ ಕ್ಲಿನಿಕ್ ಓಪನ್ ಮಾಡಿಸೋಕೂ ಫ್ಲ್ಯಾನ್​ ಮಾಡಿದ್ರಂತೆ. ನನ್ನ ಮಗಳಿಗೆ ಅವಳ ಪತಿ ಯಾವುದಕ್ಕೂ ಹಣ ಕೊಡುತ್ತಿರಲಿಲ್ಲ. ಬರ್ತ್ ಡೇಗೆ ಗಿಫ್ಟ್ ಕೊಡಿಸಿದವನಲ್ಲ. ಗ್ಯಾಸ್ಟ್ರಿಕ್ ಪ್ರಾಬ್ಲಮ್ ಇದ್ದಿದ್ದಕ್ಕೆ ಇವನೇ ಔಷಧಿ ಕೊಡ್ತಿನೆಂದು ಹೀಗೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆನೂ ಬೇಡ ಎಂದು ಹಠ ಮಾಡಿದ್ದ. ಮಗಳಿಗೆ ನೀಡಿದ್ದ ಮನೆಯನ್ನ ಮಾರತ್ತಹಳ್ಳಿ ಬಳಿಯ ಇಸ್ಕಾನ್​ಗೆ ದಾನ ನೀಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ - ಅಫ್ಘಾನಿಸ್ತಾನ ಮಧ್ಯೆ ಕದನ ವಿರಾಮ - ಘೋರ ಸಂಘರ್ಷ ಅಂತ್ಯ
ಸದ್ಯ ಮಹೇಂದ್ರನನ್ನ ಉಡುಪಿಯ ಮಣಿಪಾಲ್​ನಲ್ಲಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಒಟ್ಟಾರೆ ಮುದ್ದಾಗಿ ಸಾಕಿ, ಚನ್ನಾಗಿ ಓದಿಸಿ ಮದುವೆ ಮಾಡಿಕೊಟ್ರೆ ತಾಳಿ ಕಟ್ಟಿದ ಗಂಡನೇ ಜೀವ ನಿಲ್ಲಿಸಿದ್ದಾನೆ. ಪೊಲೀಸರ ತನಿಖೆ ಮುಂದುವರೆದಿದ್ದು ಇನ್ನೀತರ ಮಾಹಿತಿ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ