/newsfirstlive-kannada/media/media_files/2025/10/12/pakistan_afghanistan-2025-10-12-22-25-09.jpg)
ಒಂದು ಕಾಲದಲ್ಲಿ ಕುಚಿಕು ಕುಚಿಕು ಅಂತಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ನಡುವೆ ಈಗ ಭೀಕರ ಸಂಘರ್ಷ ಶುರುವಾಗಿತ್ತು. ನೂರಾರು ಸೈನಿಕರು ಮತ್ತು ನಾಗರಿಕರು ಸಾವಿಗೀಡಾಗಿದ್ದಾರೆ. ಸಾವು-ನೋವುಗಳ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.
ಅಫ್ಘಾನಿಸ್ತಾನದಲ್ಲಿ ಸಂಭ್ರಮದ ವಾತಾವರಣವಿದ್ದು, ಪಾಕಿಸ್ತಾನದ ಪಾತಕಿಗಳ ಹುಟ್ಟಡಗಿಸಿದವರಿಗೆ ಸಮ್ಮಾನ ಅಂತ ಘೋಷಿಸಲಾಗಿದೆ. ಈಗಾಗ್ಲೆ ಆಫ್ಘಾನ್ ಪಡೆಗಳು 25ಕ್ಕೂ ಹೆಚ್ಚು ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳನ್ನ ಆಕ್ರಮಿಸಿಕೊಂಡು, 58 ಪಾಕಿಸ್ತಾನಿ ಸೈನಿಕರನ್ನ ಕೊಂದಿದೆ. ಪಾಕಿಸ್ತಾನವು ಭಾರಿ ಸೋಲಿನ ಸುಳಿಯಲ್ಲಿ ಸಿಲುಕಿದ್ದು, ಸೇನೆಯು ಅಡಗಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಸದ್ಯ ಭಾರೀ ರಕ್ತಪಾತದ ಬಳಿಕ ಪಾಕಿಸ್ತಾನ ಮತ್ತು ಆಫ್ಘಾನ್ ತಾಲಿಬಾನ್ 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆಪರೇಷನ್​ ಸಿಂಧೂರದಿಂದ ಬುದ್ಧಿ ಕಲಿಯದ ಪಾಕಿಸ್ತಾನ,​ ಮಿತ್ರ ರಾಷ್ಟ್ರದ ದಾಳಿಯಿಂದಾದ್ರೂ ಬುದ್ಧಿ ಕಲಿಯುತ್ತಾ ಅನ್ನೋದನ್ನ ಕಾದು ನೋಡಬೇಕು.
ಇದನ್ನೂ ಓದಿ: ಜಾತಿಗಣತಿಗೆ ನಾರಾಯಣಮೂರ್ತಿ, ಸುಧಾಮೂರ್ತಿ ವಿರೋಧ -ಮಾಹಿತಿ ನೀಡಲು ನಕಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ