/newsfirstlive-kannada/media/post_attachments/wp-content/uploads/2023/10/Sudha-Murthy-Narayan-Murthy.jpg)
- ನಮ್ಮ ಕುಟುಂಬ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಲ್ಲ-ಸುಧಾ ಮೂರ್ತಿ
- ಯಾರಿಗೂ ಬಲವಂತ ಮಾಡಲ್ಲ, ಅವರ ಇಚ್ಛೆ ಎಂದ ಡಿಕೆಶಿ
- ಸಮೀಕ್ಷೆಯಲ್ಲಿ ಭಾಗವಹಿಸೋದು ಸ್ವಯಂಪ್ರೇರಿತವೆಂದು ಆಯೋಗ
ಜಾತಿ ಸಮೀಕ್ಷೆ ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದೆ. ಜನಸಾಮಾನ್ಯರ ಜೊತೆ ರಾಜಕೀಯ ನಾಯಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸುವುದು ಸಂಪೂರ್ಣ ಸ್ವಯಂಪ್ರೇರಿತವೆಂದು ಆಯೋಗ ಸ್ಪಷ್ಟನೆ ನೀಡಿರೋದ್ರಿಂದ ಕೆಲವರು ವಿರೋಧಿಸಿದ್ರೆ ಇನ್ನೂ ಕೆಲವರು ಪ್ರಶ್ನೆಗಳನ್ನ ನೋಡಿಯೇ ದೂರ ಹೋಗಿದ್ದಾರೆ. ಈ ನಡುವೆ ಇನ್ಫೋಸಿಸ್​​ ಮುಖ್ಯಸ್ಥರಾದ ಮೂರ್ತಿ ದಂಪತಿ ಸಮೀಕ್ಷೆಗೆ ವಿರೋಧಿಸಿದ್ದಾರೆ.
ಇದನ್ನೂ ಓದಿ:ಶಾಲಾ ಮಕ್ಕಳಿಂದ ವೃದ್ಧರವರೆಗೂ ಶೇಂಗಾ, ಬೆಲ್ಲ ತಿನ್ನಲ್ಲೇಬೇಕು.. ಯಾಕ್ ಅಂದ್ರೆ..!
ಜಾತಿ ಸಮೀಕ್ಷೆ ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದೆ. ಈ ನಡುವೆ ಇನ್ಫೋಸಿಸ್​​ ಮುಖ್ಯಸ್ಥರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ಸಮೀಕ್ಷೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಈ ಕುರಿತಾಗಿ ದಂಪತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ವಯಂ ದೃಢೀಕರಣ ಪತ್ರ ಬರೆದಿದೆ.
‘ನಾವು ಸಮೀಕ್ಷೆಯಲ್ಲಿ ಭಾಗವಹಿಸಲ್ಲ’
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತಿದ್ದೇವೆ. ನಾವು ಹಿಂದುಳಿದ ಯಾವುದೇ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಹಾಗಾಗಿ ನಮ್ಮ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುದಿಲ್ಲ ಮತ್ತು ಮಾಹಿತಿಯನ್ನು ನೀಡಲು ನಿರಾಕರಿಸಿದ್ದೇವೆ.
ಸುಧಾ, ನಾರಾಯಣ ಮೂರ್ತಿ, ಇನ್ಫೋಸಿಸ್ ಮುಖ್ಯಸ್ಥರು
‘ಯಾರಿಗೂ ಬಲವಂತ ಮಾಡಲ್ಲ’ ಎಂದ ಡಿಕೆಶಿ
ಇನ್ನು ಮೂರ್ತಿ ದಂಪತಿ ಜಾತಿಗಣತಿಯಲ್ಲಿ ಭಾಗಿಯಾಗಲ್ಲ ಎಂದಿದ್ದಕ್ಕೆ ಉಪಮುಖ್ಯಮಂತ್ರಿ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ. ನಾನು ಈ ಮೊದಲೇ ಹೇಳಿದ್ದೇನೆ. ಯಾರಿಗೂ ಬಲವಂತ ಮಾಡಲ್ಲ ಎಂದಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಇನ್ನೇನು ಜಾತಿಗಣತಿ ಸಮೀಕ್ಷೆ ಮುಕ್ತಾಯ ಹಂತಕ್ಕೆ ಬಂದಿದೆ. ಇದ್ದ ಕಡಿಮೆ ಸಮಯದಲ್ಲಿ ಸಮೀಕ್ಷೆ ಹೇಗಾಗಿದೆ. ಅದರ ವರದಿ ಹೇಗೆ ಬರಲಿದೆ ಅನ್ನೋದೇ ಕುತೂಹಲವಾಗಿದೆ. ಈ ನಡುವೆ ನಾವು ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಅಂತ ಮೂರ್ತಿ ದಂಪತಿ ಪತ್ರ ಬರೆದಿದ್ದು ಮಹತ್ವ ಪಡೆದಿದೆ.
ಇದನ್ನೂ ಓದಿ: 93ನೇ ವರ್ಷದಲ್ಲಿ ತಂದೆಯಾದ ಡಾಕ್ಟರ್.. 37 ವರ್ಷದ ಹೆಂಡತಿ, ಇನ್ನೊಂದು ಮಗುವಿಗಾಗಿ ಪ್ಲಾನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ