/newsfirstlive-kannada/media/media_files/2025/10/15/peanut_jaggery_health-2025-10-15-18-17-15.jpg)
ಉತ್ತರ ಕರ್ನಾಟಕ ಕಡೆ ಶೇಂಗಾ ಎಂದು ಕರೆದರೆ, ಇತ್ತ ಬೆಂಗಳೂರು ಕಡೆ ಕಡ್ಲೆ ಬೀಜ, ಕಡಲೆಕಾಯಿ ಬೀಜ ಎಂದು ಕರೆಯುತ್ತಾರೆ. ಶೇಂಗಾವನ್ನು ಯಾವ ಹೆಸರಿನಿಂದ ಕರೆದರೂ ಟೇಸ್ಟ್​ ಮಾತ್ರ ಎಲ್ಲ ಕಡೆ ಒಂದೇ. ಈಗ ಶೇಂಗಾ ಬಗ್ಗೆ ಯಾಕಪ್ಪ ಎಂದರೆ, ಇವುಗಳಿಂದ ಹಲವಾರು ಆರೋಗ್ಯಕರ ಉಪಯೋಗಗಳು ಇವೆ. ಬೆಲ್ಲದ ಜೊತೆ ನೆನಸಿದ ಶೇಂಗಾ ತಿಂದರೆ ಅದರ ಬೆನಿಫಿಟ್ಸ್​ಗಳೇ ಬೇರೆ..
ನಾವು ನಿತ್ಯ ಊಟ ಮಾಡುವುದು ಸಾಮಾನ್ಯ. ಇದರಿಂದಲೂ ಪೌಷ್ಟಿಕತೆಯನ್ನು ನಮ್ಮ ದೇಹಕ್ಕೆ ಪಡೆಯುತ್ತವೆ. ಹಾಗೆಯೇ ಆಹಾರದಲ್ಲಿ ಭಿನ್ನ ಸಂಯೋಜನೆಗಳನ್ನು ಮಾಡಿಕೊಳ್ಳುವ ಮೂಲಕ ಶರೀರಕ್ಕೆ ಬೇಕಾದಂತಹ ಪೋಷಕಾಂಶಗಳನ್ನು ಒದಗಿಸಬಹುದು. ಸದ್ಯ ಈಗ ನಾವು ಶೇಂಗಾ ಹಾಗೂ ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಪ್ರಯೋಜನಾ ಎಂದರೆ.
ಶೇಂಗಾದಲ್ಲಿ ಬಾದಾಮಿಯಲ್ಲಿ ಇರುವಂತೇ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. ಪ್ರೋಟೀನ್, ಕೊಬ್ಬು ಹಾಗೂ ಇತರೆ ಖನಿಜಗಳಿಂದ ಶೇಂಗಾ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯ, ಸ್ನಾಯುಗಳ ಬೆಳವವಣಿಗೆ, ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಶೇಂಗಾದಲ್ಲಿರುವಂತಹ ಉತ್ಕರ್ಷಣ ನಿರೋಧಕಗಳು ಹಾಗೂ ಆರೋಗ್ಯಕರ ಕೊಬ್ಬುಗಳು ನಮ್ಮ ಹೃದಯರಕ್ತನಾಳಗಳ ಆರೋಗ್ಯ ಸುಧಾರಿಸುತ್ತವೆ. ಇದರಿಂದ ಹೃದಯಾಘಾತದ ಅಪಾಯ ದೂರವಾಗುತ್ತದೆ. ಬೆಲ್ಲದಿಂದ ನಮಗೆ ಕಬ್ಬಿಣಾಂಶ ಸಿಗುತ್ತದೆ.
ತೂಕ ಇಳಿಕೆ ಮಾಡಲು ಶೇಂಗಾ ಮತ್ತು ಬೆಲ್ಲ ಸಹಾಯ ಮಾಡುತ್ತವೆ. ದೇಹಕ್ಕೆ ಬೇಡವಾದ ಕೊಬ್ಬು ಶೇಖರಣೆ ಆಗದಂತೆ ಇವು ತಡೆಯುತ್ತವೆ. ಈ ಎರಡರಲ್ಲೂ ಸ್ನಾಯುವಿನ ಬೆಳವಣಿಗೆಗೆ ಅಗತ್ಯವಾದ ಉತ್ತಮ ಪ್ರಮಾಣದ ಪ್ರೋಟಿನ್ ಇದೆ. ಇದರಿಂದ ಹಸಿವು ನಿಯಂತ್ರಣದಲ್ಲಿ ಇರುತ್ತದೆ. ಇದರಿಂದ ಸಾಮಾನ್ಯವಾಗಿ ದೇಹದ ಭಾರ ಕಡಿಮೆ ಆಗುತ್ತದೆ.
ಶೇಂಗಾದಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಧಿಕವಾಗಿವೆ. ಪ್ರೋಟೀನ್ ಭ್ರೂಣದ ಬೆಳವಣಿಗೆಗೆ ಅಗತ್ಯವಾಗಿದೆ. ಹೀಗಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರು ತಿನ್ನಬಹುದು. ಆರೋಗ್ಯಕರ ಭ್ರೂಣದ ಬೆಳವಣಿಗೆಗೆ, ರಕ್ತ ಪರಿಚಲನೆಯನ್ನು ಹೆಚ್ಚಿಸಲು ಶೇಂಗಾ, ಬೆಲ್ಲ ಮುಖ್ಯ ಪಾತ್ರ ವಹಿಸುತ್ತವೆ.
ನಮಗೆ ವಯಸ್ಸು ಆದಂತೆ ಕ್ಯಾಲ್ಸಿಯಂ ಪ್ರಮಾಣಗಳು ಕಡಿಮೆಯಾಗಿ ಮೂಳೆಗಳ ಸಮಸ್ಯೆ ಎದುರಾಗುತ್ತವೆ. ಇದು ಆಗಬಾರದು ಎಂದರೆ ಶೇಂಗಾ, ಬೆಲ್ಲವನ್ನು ತಿನ್ನುವುದು ರೂಢಿಸಿಕೊಳ್ಳಿ. ಈಗಿನ ಮಕ್ಕಳಿಗೆ ಕ್ಯಾಲ್ಸಿಯಂ ಬೇಕಾಗುತ್ತದೆ. ಇದರಿಂದ ಮಕ್ಕಳಿಗೂ ಇವುಗಳ ಅವಶ್ಯಕತೆ ಇರುತ್ತದೆ. ಈಗಿನ ನ್ಯೂ ಜನರೇಶನ್​ನಲ್ಲಿ ಶೇಂಗಾ, ಬೆಲ್ಲ ಮಾತ್ರ ಸೂಪರ್ ಫುಟ್​, ನೈಸರ್ಗಿಕ ತಿನಿಸು ಎಂದು ಹೇಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ