/newsfirstlive-kannada/media/media_files/2025/10/15/aus_john_levin_1-2025-10-15-22-49-29.jpg)
37 ವರ್ಷದ ಮಹಿಳೆ ಹಾಗೂ 93ನೇ ವರ್ಷದ ವೃದ್ಧ, ಗಂಡು ಮಗುವಿಗೆ ತಂದೆಯಾಗಿರುವಂತಹ ಸುದ್ದಿ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ. ಮಗು ಕಳೆದ ವರ್ಷವೇ ಜನಿಸಿದ್ದು ಈಗ ಒಂದೂವರೆ ವರ್ಷ ಆಗಿದೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯಾದ ಮೆಲ್ಬರ್ನ್​ನ ಡಾಕ್ಟರ್ ಆದಂತಹ 93 ವರ್ಷದ ಜಾನ್ ಲೆವಿನ್​ ಹಾಗೂ 37 ವರ್ಷದ ಡಾ ಯಾಂಗ್ಯಿಂಗ್ ಲು ಇಬ್ಬರು ಮದುವೆಯಾಗಿದ್ದರು. ಈ ಇಬ್ಬರಿಗೂ 56 ವರ್ಷಗಳ ಅಂತರ ಇದೆ. ಆದರೂ ಅವರ ವೈವಾಹಿಕ ಬದುಕಿನಲ್ಲಿ ಇಬ್ಬರೂ ಸಂತೋಷವಾಗಿದ್ದು ಕಳೆದ ವರ್ಷವೇ ಈ ದಂಪತಿಗೆ in-vitro fertilisation (ಐವಿಎಫ್​) ಮೂಲಕ ಗಂಡು ಮಗುವನ್ನು ಪಡೆದಿದ್ದರು.
ಆ ಗಂಡು ಮಗುವಿಗೆ ಗ್ಯಾಬಿ ಎಂದು ಹೆಸರಿಡಲಾಗಿದೆ. ಗ್ಯಾಬಿಗೆ ಒಂದೂವರೆ ವರ್ಷ ತುಂಬಿದ್ದು ಆರೋಗ್ಯವಾಗಿದೆ. ಇದರ ಬೆನ್ನಲ್ಲೇ ಐವಿಎಫ್​ ಮೂಲಕ ಮತ್ತೊಂದು ಮಗುವನ್ನ ಪಡೆಯಲು ನಾವು ಉತ್ಸುಕವಾಗಿದ್ದೇವೆ ಎಂದು ಜಾನ್ ಲೆವಿನ್ ಹೇಳಿದ್ದಾರೆ. ನನ್ನದೇ ಆದ ಕೆಲ ನಿಯಮಗಳನ್ನು ಶಿಸ್ತಿನಿಂದ ಪಾಲನೆ ಮಾಡುತ್ತಿರುವುದರಿಂದ ದೀರ್ಘಾಯುಷ್ಯ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಕೇಸ್​; ಇಸ್ಕಾನ್​ಗೆ ಮನೆ ದಾನ ಮಾಡಿದ ಮೃತ ಡಾ ಕೃತಿಕಾ ತಂದೆ
ಕಟ್ಟುನಿಟ್ಟಾದ ಆರೋಗ್ಯ ಕಟ್ಟುಪಾಡುಗಳನ್ನು ನಿರ್ವಹಿಸುತ್ತ ಬರುತ್ತಿದ್ದೇನೆ. ಕಳೆದ ಮೂರು ದಶಕಗಳಿಂದ, ಮನುಷ್ಯನ ಬೆಳವಣಿಗೆಯ ಹಾರ್ಮೋನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದೇನೆ. ಹೀಗಾಗಿ ಪ್ರತಿದಿನ ವ್ಯಾಯಾಮ, ವಾಕಿಂಗ್ ಮಾಡುತ್ತಿದ್ದೇನೆ. ಮದ್ಯಪಾನ, ತಂಬಾಕು ಇತ್ಯಾದಿ ದುಶ್ಚಟಗಳಿಂದ ಸಂಪೂರ್ಣವಾಗಿ ದೂರ ಇದ್ದೇನೆ. ದೀರ್ಘ ಮತ್ತು ಸಕ್ರಿಯ ಜೀವನದ ರಹಸ್ಯವೇ ಶಿಸ್ತು ಮತ್ತು ಸಮತೋಲನ ಎಂದು ಅವರು ಹೇಳಿದ್ದಾರೆ.
ನನ್ನ ಮಗನ 21ನೇ ಹುಟ್ಟುಹಬ್ಬವನ್ನು ನೋಡುವುದೇ ಜಾನ್ ಲೆವಿನ್ ದೊಡ್ಡ ಆಸೆಯಾಗಿದೆ ಅಂತ. ಮಗನಿಗೆ 21 ವರ್ಷ ತುಂಬಿದ ಸಮಯಕ್ಕೆ ಜಾನ್ ಲೆವಿನ್​ಗೆ 116 ವರ್ಷಗಳು ಆಗಿರುತ್ತವೆ. ಡಾ. ಜಾನ್ ಲೆವಿನ್​ಗೆ ಈಗಾಗಲೇ ಆಶ್ಲೇ (62), ಸಮಾಂತಾ (60) ಹಾಗೂ ಜಾರ್ಜ್ ಎನ್ನುವ ಮೂವರು ಮಕ್ಕಳು ಇದ್ದಾರೆ. ಇದರಲ್ಲಿ ಜಾರ್ಜ್​ 2024ರಲ್ಲಿ ಕೊನೆಯುಸಿರೆಳೆದಿದ್ದಾರೆ. ಜಾನ್ ಲೆವಿನ್ ಮಾತ್ರ 93 ವರ್ಷಗಳು ಆದರೂ ಆರೋಗ್ಯವಾಗಿದ್ದು ತಂದೆಯಾದ ಮೇಲೆ ಅಜ್ಜ, ಮುತ್ತಜ್ಜ ಸ್ಥಾನಗಳನ್ನು ತುಂಬಿದ್ದಾರೆ. ಆದರೆ ಈಗ ಮತ್ತೆ ತಂದೆ ಆಗಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ ಎಂದು ಹೇಳಲಾಗಿದೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ