ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು.. ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ​ ಜಾಮೀನು ರದ್ದು

ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಹೋಗಿದ್ದು ಅಲ್ಲಿ ವಿಚಾರಣೆ ನಡೆದಿತ್ತು. ಸದ್ಯ ಇದೀಗ ಸುಪ್ರೀಂ ಕೋರ್ಟ್​ ತೀರ್ಪು ನೀಡಿದ್ದು ನಟ ದರ್ಶನ್​ಗೆ ಜಾಮೀನು ರದ್ದು ಮಾಡಿದೆ.

author-image
Bhimappa
Darshan pavitra gowda

ದರ್ಶನ್, ಪವಿತ್ರ ಗೌಡ

Advertisment

ನವದೆಹಲಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರೆ 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ನೀಡಿತ್ತು. ಸದ್ಯ ಇದನ್ನು ಪ್ರಶ್ನಿಸಿ ಸರ್ಕಾರ, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಸದ್ಯ ಇದೀಗ ಸುಪ್ರೀಂ ಕೋರ್ಟ್​ ತೀರ್ಪು ನೀಡಿದ್ದು ನಟ ದರ್ಶನ್​, ಪವಿತ್ರಾ ಗೌಡ ಹಾಗೂ 7 ಆರೋಪಿಗಳ ಜಾಮೀನು ಅನ್ನು ರದ್ದು ಮಾಡಿದೆ.    

ಇವತ್ತು ಸುಪ್ರೀಂ ಕೋರ್ಟ್​​ನಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್, ಪವಿತ್ರಾಗೌಡ ಹಾಗೂ 7 ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರದ ಅರ್ಜಿಯ ಆದೇಶ ಹೊರ ಬಿದ್ದಿದೆ. ಹೈಕೋರ್ಟ್​ ತೀರ್ಪಿನಲ್ಲಿ ದೋಷವಿದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಹಾಗೂ ನ್ಯಾಯಾಮೂರ್ತಿ ಮಹಾದೇವನ್ ಪೀಠ ತೀರ್ಪು ನೀಡಿದೆ. 

ಇದನ್ನೂ ಓದಿ:ಜೀವಾವಧಿ ಶಿಕ್ಷೆ; ಹೈಕೋರ್ಟ್​ ಮೆಟ್ಟಿಲೇರಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ

darshan(1)

ಜೈಲಿನಲ್ಲಿ ದರ್ಶನ್, ಪವಿತ್ರಾ ಗೌಡ ಇತರೆ ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್​ಮೆಂಟ್ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್​ಗೆ ತಿಳಿಸಲಾಗಿತ್ತು. ಇದಕ್ಕೆ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಯಾರು ಕೂಡ ಕಾನೂನಿನ ಮುಂದೆ ದೊಡ್ಡವರಲ್ಲ, ಚಿಕ್ಕವರಲ್ಲ. ಈ ರೀತಿ ಇನ್ಮುಂದೆ ಕಂಡು ಬಂದರೆ ಜೈಲು ಅಧಿಕಾರಿಗಳು ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಜೈಲಿನ ಒಳಗಿದ್ದವರು ಸಿಗರೇಟ್ ಸೇವನೆ ಮಾಡಿದ್ದರು. ಇಂತಹ ಫೋಟೋಗಳು ಮತ್ತೆ ಕಂಡು ಬಂದರೆ ಸಸ್ಪೆಂಡ್ ಮಾಡಲಾಗುತ್ತದೆ ಎಂದು ಖಾರವಾಗಿಯೇ ಸುಪ್ರೀಂ ಕೋರ್ಟ್ ಹೇಳಿದೆ. 

ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಕೋರ್ಟ್​ ಆದೇಶದಂತೆ ಈ ಕೂಡಲೇ ಜೈಲಿಗೆ ಹೋಗಬೇಕಿದೆ. ಜೈಲಿನ ಒಳಗಿರುವ ಫೋಟೋ ವಿಡಿಯೋಗಳು ಕಂಡು ಬಂದರೆ ಗೃಹ ಇಲಾಖೆನ ಕರೆಸಲಾಗುತ್ತದೆ. ಜೈಲು ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಆರೋಪಿಗಳಿಗೆ ಈ ರೀತಿಯಾದ ಫೈವ್​ ಸ್ಟಾರ್​ ಟ್ರೀಟ್​ಮೆಂಟ್ ಕೊಡಬಾರದು ಎಂದು ಕೋರ್ಟ್​ ಹೇಳಿದೆ. ಇದೊಂದು ಲ್ಯಾಂಡ್ ಮಾರ್ಕ್​ ಜರ್ಜ್​ಮೆಂಟ್ ಆಗಿದೆ. ಈ ಪ್ರಕರಣದ ಆದೇಶ ಪ್ರತಿಯನ್ನು ಎಲ್ಲ ಹೈಕೋರ್ಟ್​ಗಳಿಗೆ ರವಾನೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.    

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Pavitra Gowda Pavitra Gowda tattoo
Advertisment