ಜೀವಾವಧಿ ಶಿಕ್ಷೆ; ಹೈಕೋರ್ಟ್​ ಮೆಟ್ಟಿಲೇರಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ​ ಪರ ವಕೀಲರು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ.

author-image
Bhimappa
ಪ್ರಜ್ವಲ್ ರೇವಣ್ಣಗೆ ಮಣ್ಣು ಮುಕ್ಕಿಸಿದ ಹಾಸನದ ಜನ; ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮೊದಲ ಗೆಲುವು
Advertisment

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯ  ರೇಪ್ ಕೇಸ್ ನಲ್ಲಿ  ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ನ್ಯಾಯಾಲಯ ನೀಡಿರುವ ತೀರ್ಪು ಅನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ​ ಪರ ವಕೀಲರು, ಇದೇ ವಾರದಲ್ಲಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಕೆ ಮಾಡಲಿದ್ದಾರೆ. 

ನಗರದ ಜನಪ್ರತಿನಿಧಿಗಳ ಕೋರ್ಟ್​ ಪ್ರಜ್ವಲ್​ ರೇವಣ್ಣಗೆ ಜೀವಾವಧಿ ಶಿಕ್ಷೆ ಜೊತೆಗೆ 11.50 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ. ಈ ಸಂಬಂಧ ಈ ತೀರ್ಪು ಪ್ರಶ್ನಿಸಿ ಪ್ರಜ್ವಲ್ ಪರ ವಕೀಲರು ಹೈಕೋರ್ಟ್​ಗೆ ಮನವಿ ಸಲ್ಲಿಕೆ  ಮಾಡಲಿದ್ದಾರೆ. ಈ ಬಗ್ಗೆ ಸಿದ್ಧತೆ ನಡೆದಿದ್ದು ಪ್ರಜ್ವಲ್​ ರೇವಣ್ಣ ಜೊತೆ ಅವರ ವಕೀಲರು ಮಾತನಾಡಿದ್ದಾರೆ. ಇನ್ನು ತೀರ್ಪು ನೀಡಿದ 90 ದಿನಗಳು  ಅಂದರೆ 3 ತಿಂಗಳ ಒಳಗಾಗಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ. 

ಇದನ್ನೂ ಓದಿ:ಹೆಂಡತಿಗೆ ನಿತ್ಯ ಹೊಡೆಯುತ್ತಿದ್ದ ಶಿಕ್ಷಕ.. ತನ್ನ ಕಾಲೇಜಿನ ವಿದ್ಯಾರ್ಥಿನಿ ಜೊತೆಗೆ ಎಸ್ಕೇಪ್​

prajwal revanna jail (1)

ತಡವಾಗಿ ಮೇಲ್ಮನವಿ ಸಲ್ಲಿಕೆ ಮಾಡುವುದಕ್ಕಿಂತ ಶೀಘ್ರವೇ ಸಲ್ಲಿಕೆ ಮಾಡುವುದು ಉತ್ತಮವೆಂದು ಕಾನೂನು ತಜ್ಞರ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಆದೇಶದ ಪ್ರತಿ ಅಂಶಗಳನ್ನ ಲೀಗಲ್ ಟೀಂ ಪರಿಶೀಲನೆ ಮಾಡಿದೆ. ಖ್ಯಾತ ಹಿರಿಯ ವಕೀಲರ ಮೂಲಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. 

ಇನ್ನು ಪ್ರಜ್ವಲ್  ಅವರು ತಾಯಿ ಭವಾನಿ, ತಂದೆ ರೇವಣ್ಣ ಜೊತೆ ಫೋನ್ ಮೂಲಕ ಮಾತನಾಡಿದ್ದಾರೆ. ಜೈಲು ಅಧಿಕಾರಿಗಳು, ಸಜಾ ಬಂಧಿಯಾಗಿ ವಾರದ ಮೇಲಾದರೂ ಪ್ರಜ್ವಲ್​ರನ್ನ ಕೆಲಸಕ್ಕೆ ನಿಯೋಜಿಸಿಲ್ಲ. ಈ ವಾರದಲ್ಲಿ ಕೆಲಸ ಆಯ್ಕೆ ಬಗ್ಗೆ ಪ್ರಜ್ವಲ್​ಗೆ ತಿಳಿಸಲಿದ್ದಾರೆ. ವಾರದಲ್ಲಿ 3 ಬಾರಿ 10 ನಿಮಿಷ ಮಾತಾಡಲು ಜೈಲಿನ ಮ್ಯಾನ್ಯುಯಲ್ ನಲ್ಲಿ ಅವಕಾಶ  ಇದೆ. ಈ ನಡುವೆ ಹೈಕೋರ್ಟ್ ವಿಚಾರದ ಬಗ್ಗೆ ವಕೀಲರ ಜೊತೆ ಚರ್ಚೆ ಮಾಡಿದ್ದಾರೆ. ಇನ್ನು ಕೆ.ಆರ್ ನಗರದ ಸಂತ್ರಸ್ಥೆ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Prajwal Revanna
Advertisment