/newsfirstlive-kannada/media/media_files/2025/08/14/cbl_teacher_1-2025-08-14-09-11-51.jpg)
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ, ವಿದ್ಯಾರ್ಥಿನಿಗೆ ಪ್ರೀತಿಯ ಪಾಠ ಮಾಡಿ ಆಕೆಯ ಜೊತೆ ಸಲುಗೆ ಬೆಳೆಸಿ ಕರೆದುಕೊಂಡು ಪರಾರಿ ಆಗಿದ್ದಾನೆ. ಕಹಾನಿ ಮೇ ಟ್ವಿಸ್ಟ್ ಏನಂದ್ರೆ ಆ ಶಿಕ್ಷಕನಿಗೆ ಮದುವೆಯಾಗಿದೆ. ಆ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಈ ಶಿಕ್ಷಕ ಹೆಸರು ಪ್ರವೀಣ್. ಹೆಸರಿಗೆ ತಕ್ಕಂತೆ ಎಲ್ಲದರಲ್ಲೂ ಪ್ರವೀಣನೇ. ಈತನ ಕೆಲಸ ಪಾಠ ಮಾಡೋದು. ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಶಿಕ್ಷಕ. ಆದ್ರೆ ಈತ ಮಾಡಿದ್ದು ಮಾತ್ರ ಪಕ್ಕಾ ಐನಾತಿ ಕೆಲಸ.
ವಿದ್ಯಾರ್ಥಿನಿ ಜೊತೆಗೆ ಶಿಕ್ಷಕ ಪ್ರವೀಣನ ಓಟ
ಕಳೆದ 15 ವರ್ಷಗಳಿಂದ ಶಿಕ್ಷಕ ವೃತ್ತಿ ಮಾಡುತ್ತಿರುವ ಶಿಕ್ಷಕ ಪ್ರವೀಣ್, ಇದೀಗ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿರೋ ಆರೋಪ ಕೇಳಿ ಬಂದಿದೆ.
‘ಪರಾರಿ’ ಪ್ರವೀಣ!
- ಯುವತಿಗೆ ಇದೇ ತಿಂಗಳ 11 ರಂದು ನಿಶ್ಚಯವಾಗಿದ್ದ ಮದುವೆ
- ಮದುವೆ ಇಷ್ಟ ಇಲ್ಲದೆ ಶಿಕ್ಷಕನ ಜೊತೆ ಪರಾರಿಯಾದ ಆರೋಪ
- ಆಗಸ್ಟ್ 2ರಂದು ಮನೆ ಬಿಟ್ಟಿದ್ದ ಯುವತಿ, ಪೋಷಕರ ಹುಡುಕಾಟ
- ಮಿಸ್ಸಿಂಗ್ ಕಂಪ್ಲೆಂಟ್ ಕೂಡ ದಾಖಲು ಮಾಡಿದ್ದ ಪೋಷಕರು
- ದೆಹಲಿಗೆ ಹೋಗಿ ವಾಪಸ್ ನಂಜನಗೂಡಿನ ಲಾಡ್ಜ್ನಲ್ಲಿ ವಾಸ
ಇಷ್ಟಕ್ಕೆ ಈ ಕಥೆ ಮುಗಿದಿಲ್ಲ, ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ. ಯಾಕಂದ್ರೆ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿದ್ದ ಶಿಕ್ಷಕನಿಗೆ ಈಗಾಗಲೇ ಮದುವೆಯಾಗಿದೆ. ಸದ್ಯ ಈ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಗೆ ಪತಿ ಪ್ರವೀಣ್ ವಿರುದ್ಧ ಪತ್ನಿಯೇ ದೂರು ನೀಡಿದ್ದಾಳೆ. ವರದಕ್ಷಿಣೆ ಕಿರುಕುಳ, ದೈಹಿಕ ಹಲ್ಲೆಯ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮೇಲೆ ಕೋಟಿ ಕೋಟಿ ಹಣ ವಂಚನೆ ಕೇಸ್.. ಅಸಲಿಗೆ ಆಗಿದ್ದೇನು?
ಪ್ರವೀಣ್ ಪತ್ನಿ ದೂರಿನಲ್ಲೇನಿದೆ?
- 2015ರಲ್ಲಿ ಪ್ರವೀಣ್ ಜೊತೆ ವಿವಾಹವಾಗಿದ್ದ ಪತ್ನಿ ಇಬ್ಬರು ಮಕ್ಕಳಿದ್ದಾರೆ
- ಪ್ರವೀಣ್ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಅಂತಾ ಪತ್ನಿ ದೂರು
- ಗಂಡನಿಗೆ ಇನ್ನೊಂದು ಹುಡುಗಿ ಜೊತೆಯ ಅನೈತಿಕ ಸಂಬಂಧ ಗೊತ್ತಾಯ್ತು
- ಪ್ರಶ್ನೆ ಮಾಡಿದಾಗ ಹಲ್ಲೆ ಮಾಡಿದ್ರು ಅಂತಾ ಪ್ರವೀಣ್ ವಿರುದ್ಧ ಪತ್ನಿ ಆರೋಪ
- ನಾನು ಗರ್ಭಣಿಯಾಗಿದ್ದ ವೇಳೆ, ಅನೈತಿಕ ಸಂಬಂಧದ ಬಗ್ಗೆ ಕೇಳಿದ್ದಕ್ಕೆ ಹಲ್ಲೆ
- ನನ್ನ ಜುಟ್ಟನ್ನು ಹಿಡಿದು ಎಳೆದಾಡಿ, ಕಾಲಿನಲ್ಲಿ ಒದ್ದು ಪ್ರವೀಣ್ನಿಂದ ಹಲ್ಲೆ
- ತವರು ಮನೆಗೆ ಹೋಗು. ಇಲ್ಲವಾದರೆ ಸಾಯಿಸುತ್ತೇನೆಂದು ಜೀವ ಬೆದರಿಕೆ
- ತಂದೆ ಬಳಿ ವರದಕ್ಷಿಣೆಯಾಗಿ ಸೈಟ್ ಕೊಡಲು ಕೇಳು ಅಂತಾ ದೈಹಿಕ ಹಿಂಸೆ
- ವಿಚ್ಛೇದನ ನೀಡು ಇಲ್ಲವಾದರೆ ಮನೆ ನಿರ್ಮಿಸಿಕೊಡು ಅಂತಾ ಒತ್ತಾಯ
- ದೈಹಿಕ, ಮಾನಸಿಕ ಹಿಂಸೆ, ಜೀವ ಬೆದರಿಕೆ ಹಾಕಿ, ವರದಕ್ಷಿಣೆ ಕಿರುಕುಳ
- ಪ್ರವೀಣ್ ಹಾಗೂ ಆತನ ಕುಟುಂಬದ ವಿರುದ್ಧ ಕ್ರಮಕ್ಕೆ ಪತ್ನಿಯ ಆಗ್ರಹ
ಪತ್ನಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿನಿಯೊಂದಿಗೆ ಎಸ್ಕೇಪ್ ಆಗಿದ್ದ ಶಿಕ್ಷಕ ಪವೀಣ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನ ಬಂಧಿಸಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಈ ಘಟನೆ ವಿದ್ಯಾರ್ಥಿನಿ ಕುಟುಂಬವನ್ನ ತಬ್ಬಿಬ್ಬಾಗುವಂತೆ ಮಾಡಿದೆ. ಪೊಲೀಸರು ಇಬ್ಬರನ್ನೂ ಹುಡುಕಿ ಕರೆತಂದಾಗಲೇ ತಮ್ಮ ಮಗಳು ಶಿಕ್ಷಕನ ಜೊತೆಯೇ ಓಡಿ ಹೋಗಿದ್ದಳು ಅನ್ನೋದು ಪೋಷಕರಿಗೆ ಗೊತ್ತಾಗಿದೆ. ಈ ಮಾಹಿತಿ ತಿಳಿದು ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ