ಅಭಿಮಾನಿಗಳಿಗೆ ಬಿರಿಯಾನಿ ಹಂಚಿದ ರಚಿತಾ ರಾಮ್ -VIDEO

ಸ್ಯಾಂಡಲ್​ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್​​ಗೆ ಇಂದು 33ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ಮನೆಯಲ್ಲಿ ಅಭಿಮಾನಿಗಳು, ಸಿನಿಮಾ ತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

author-image
Ganesh Kerekuli
Advertisment

ಸ್ಯಾಂಡಲ್​ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರಚಿತಾ ರಾಮ್ ಇಂದು 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದ ಬಳಿ ಅಭಿಮಾನಿಗಳಿಂದ ರಚಿತಾ ರಾಮ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. 

ನಿನ್ನೆ ರಾತ್ರಿಯಿಂದಲೇ ರಚಿತಾ‌‌ ನಿವಾಸದ ಬಳಿ ಅಭಿಮಾನಿಗಳ ದಂಡು ನೆರೆದಿದೆ. ಲ್ಯಾಂಡ್ ಲಾರ್ಡ್ ಸಿನಿಮಾ ತಂಡದಿಂದ ರಚಿತಾ ರಾಮ್ ಹುಟ್ಟುಹಬ್ಬದ ಅದ್ದೂರಿ ಆಚರಣೆಯನ್ನು ಮಾಡಲಾಗುತ್ತಿದೆ. ದುನಿಯಾ‌ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಸಿನಿಮಾ ಆಗಿದೆ. ರಚಿತರಾಮ್  ನಿವಾಸದ ಬಳಿ ಡೊಳ್ಳು‌ ಕುಣಿತ, ಯಕ್ಷಗಾನ ಕಲಾವಿದರಿಂದ ನೃತ್ಯ ಪ್ರದರ್ಶನ ಕೂಡ ನಡೆಯುತ್ತಿದೆ. ರಚಿತಾ ರಾಮ್  ನಿವಾಸದ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಇಂದಿನಿಂದ ಸಂಜೆಯವರೆಗೆ ಆರ್.ಆರ್.ನಗರದ ನಿವಾಸದಲ್ಲಿ ಅಭಿಮಾನಿಗಳನ್ನು ರಚಿತಾ ರಾಮ್ ಭೇಟಿಯಾಗಲಿದ್ದಾರೆ. ಮಧ್ಯಾಹ್ನ ತಮ್ಮ ಅಭಿಮಾನಿಗಳಿಗೆ ರಚಿತಾ ರಾಮ್ ಬಿರಿಯಾನಿ ಹಂಚಿದ್ದಾರೆ. 

ಇದನ್ನೂ ಓದಿ:ಡಿಂಪಲ್ ಕ್ವೀನ್ ರಚಿತರಾಮ್ ಗೆ ಮದುವೆಗೆ ಹುಡುಗನ ಹುಡುಕಾಟ ಶುರು: ರಾಜಕೀಯಕ್ಕೆ ಬರಲ್ಲ ಎಂದ ನಟಿ ರಚಿತರಾಮ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jagga and Rachita Ram ರಚಿತಾ ರಾಮ್
Advertisment