ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದ ಅಪ್ಪು ಕೋಣ ಇನ್ನಿಲ್ಲ

ವಿಶ್ವದಾಖಲೆ ಬರೆದ ಕಾಂತಾರ (Kantara movie) ಚಿತ್ರ ತಂಡಕ್ಕೆ ಶಾಕ್ ಮೇಲೆ ಶಾಕ್ ಉಂಟಾಗಿದೆ. ಕಾಂತಾರ ಪ್ರಿಕ್ವೆಲ್ ಶೂಟಿಂಗ್ ಮುಗಿಸಿ ಬಿಡುಗಡೆ ಸಿದ್ಧವಾಗಿದೆ. ಚಿತ್ರದ ಕಂಬಳ ದೃಶ್ಯದಲ್ಲಿ ಕಾಣಿಸಿಕೊಂಡ ಅಪ್ಪು ಅನ್ನೋ ಕೋಣ ಪ್ರಾಣಬಿಟ್ಟಿದೆ.

author-image
Ganesh
kambala bull appu (1)
Advertisment

ವಿಶ್ವದಾಖಲೆ ಬರೆದ ಕಾಂತಾರ (Kantara movie) ಚಿತ್ರ ತಂಡಕ್ಕೆ ಶಾಕ್ ಮೇಲೆ ಶಾಕ್ ಉಂಟಾಗಿದೆ. ಕಾಂತಾರ ಪ್ರಿಕ್ವೆಲ್ ಶೂಟಿಂಗ್ ಮುಗಿಸಿ ಬಿಡುಗಡೆ ಸಿದ್ಧವಾಗಿದೆ. ಚಿತ್ರದ ಕಂಬಳ ದೃಶ್ಯದಲ್ಲಿ ಕಾಣಿಸಿಕೊಂಡ ಅಪ್ಪು ಅನ್ನೋ ಕೋಣ ಪ್ರಾಣಬಿಟ್ಟಿದೆ. 

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಜೊತೆಯಲ್ಲಿ ಕಾಣಿಸಿಕೊಂಡಿದ್ದ ಕೋಣ ನಿನ್ನೆ ಮೃತಪಟ್ಟಿದೆ. ಚಿತ್ರದ ಆರಂಭದ ಕಂಬಳದ ದೃಶ್ಯದಲ್ಲಿ ಎರಡು ಕೋಣವನ್ನು ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಮೃತಪಟ್ಟಿದೆ. ಬೈಂದೂರು ತಾಲೂಕು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ್‌ ಭಟ್ಟರು ಪ್ರೀತಿಯಿಂದ ಸಾಕಿದ್ದ ಕೋಣ ಇದ್ದಾಗಿತ್ತು. ಪರಮೇಶ್ವರ್‌ ಅವರ ಮಗಳು ಚೈತ್ರಾ ಪರಮೇಶ್ವರ ಭಟ್‌ ಅವರು ಈ ಅಪ್ಪು ಮತ್ತು ಕಾಲ ಎನ್ನುವ ಕೋಣವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಎರಡು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ 

ಕಾಂತಾರದ ಚಿತ್ರೀಕರಣಕ್ಕೆ ಮೊದಲು ರಿಷಬ್‌ ಶೆಟ್ಟಿ ಅವರು ಇದೇ ಬೊಳಂಬಳ್ಳಿ ಪರಮೇಶ್ವರ ಭಟ್‌ ಅವರ ಬಳಿ ತರಬೇತಿ ಪಡೆದು, ಅಪ್ಪು ಮತ್ತು ಕಾಲ ಕೋಣಗಳನ್ನು ಓಡಿಸಿದ್ದರು. ನೆಲ್ಲಿಕಾರಿನ ಶೇಣಿಕ್‌ ರಾಜ್‌ ಜೈನ್‌ ಅವರ ಬಳಿಯಿದ್ದ ಅಪ್ಪು ಕೋಣವನ್ನು‌ ದಶಕದ ಹಿಂದೆ ಬೋಳದಗುತ್ತು ಸತೀಶ್‌ ಶೆಟ್ಟಿ ಅವರು ಕರೆತಂದಿದ್ದರು. ನೇಗಿಲು ಜೂನಿಯರ್‌ ವಿಭಾಗದಲ್ಲಿ ಎರಡು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿತ್ತು.

ಇದನ್ನೂ ಓದಿ: 'ಇದ್ರೇ ನೆಮ್ಮದಿಯಾಗ್ ಇರ್ಬೇಕ್'.. ದರ್ಶನ್​ ಫ್ಯಾನ್ಸ್​ಗೆ ಭರ್ಜರಿ ನ್ಯೂಸ್ ಕೊಟ್ಟ ದಿ ಡೆವಿಲ್ ತಂಡ

kambala bull appu

ಆ ಬಳಿಕ ಬೋಳಂಬಳ್ಳಿ ಪರಮೇಶ್ವರ ಭಟ್‌ ಅವರ ಮನೆಗೆ ಸೇರಿತ್ತು. ಈ ಭಾಗಕ್ಕೆ ಬಂದ ಬಳಿಕ ಕುಂದಾಪುರ ಭಾಗದಲ್ಲಿ ನಡೆಯುವ ಸಾಂಪ್ರಾದಾಯಿಕ ಕಂಬಳಗಳಲ್ಲಿ ನಿರಂತರ ಐದು ವರ್ಷ ಚಾಂಪಿಯನ್‌ ಪಟ್ಟಕ್ಕೇರಿತ್ತು. 2023ರಲ್ಲಿ ನಡೆದಿದ್ದ ಪ್ರಥಮ ವರ್ಷದ ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹರಿಸಿ ಪ್ರಥಮ ಪ್ರಶಸ್ತಿ ಪಡೆದಿತ್ತು. ಬಂಟ್ವಾಳ, ಮೂಲ್ಕಿ ಮತ್ತು ಮಂಗಳೂರು ಕಂಬಳಗಳಲ್ಲಿ ಪ್ರಶಸ್ತಿ ಪಡೆದಿದ್ದವು. ಅಪ್ಪು ಕೋಣ ಮೃತಪಟ್ಟಿರುವುದು ಕಂಬಳ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

ಕಾಂತಾರ ಎಂದಾಕ್ಷಣ ಒಮ್ಮೆ ಚಿತ್ರ ಪ್ರೇಮಿಗಳು ತಿರುಗಿ ನೋಡಲೇಬೇಕು ಎನ್ನುವ ಮಟ್ಟಿಗೆ ರಾಜ್ಯ, ರಾಷ್ಟ್ರದ ಗಡಿ ದಾಟಿ ಮೆಚ್ಚುಗೆ ಪಡೆದ ಚಿತ್ರ. ಕಾಂತಾರ ಪ್ರಿಕ್ವೇಲ್‌ ಇದೇ ಅಕ್ಟೋಬರ್​ನಲ್ಲಿ ತೆರೆ ಕಾಣಕು ಸಿದ್ಧತೆಯಲ್ಲಿದೆ. ಕಾಂತಾರ ಚಿತ್ರದ ತಂಡ ಪ್ರಿಕ್ವೇಲ್‌ ನಿರ್ಮಾಣಕ್ಕೆ ಇಳಿದ ದಿನದಿಂದ ಇಲ್ಲಿಯವರೆಗೂ ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಾಗುತ್ತಿದೆ. 

ಇದನ್ನೂ ಓದಿ:ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ದರ್ಶನ್ ಪತ್ನಿ.. ಮೂವರ ಬಗ್ಗೆ ಬರೆದುಕೊಂಡ ವಿಜಯಲಕ್ಷ್ಮೀ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rishab Shetty Kantara Movie Kantara buffalo
Advertisment