Advertisment

ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ನ್ಯಾಷನಲ್ ಕ್ರಷ್.. ಆರತಕ್ಷತೆಯಲ್ಲಿ ಭಾಗಿಯಾದ ಡಿಸಿಎಂ ಡಿಕೆಶಿ

ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್‌ನ 'ರೌಡಿ ಬಾಯ್' ವಿಜಯ್ ದೇವರಕೊಂಡ ಅವರ ಮದುವೆ ಆರತಕ್ಷತೆ ಕಾರ್ಯಕ್ರಮವು ನಿನ್ನೆ ಅದ್ಧೂರಿಯಾಗಿ ನಡೆಯಿತು. ಫೆಬ್ರವರಿ 26 ರಂದು ಅತ್ಯಂತ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿಜಯ್ ಹಾಗೂ ರಶ್ಮಿಕಾ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

author-image
Ganesh Kerekuli
rashmika mandanna (22)
Advertisment

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್‌ನ 'ರೌಡಿ ಬಾಯ್' ವಿಜಯ್ ದೇವರಕೊಂಡ ಅವರ ಮದುವೆ ಆರತಕ್ಷತೆ ಕಾರ್ಯಕ್ರಮವು ನಿನ್ನೆ ಅದ್ಧೂರಿಯಾಗಿ ನಡೆಯಿತು. 

Advertisment

ಫೆಬ್ರವರಿ 26 ರಂದು ಅತ್ಯಂತ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿಜಯ್ ಹಾಗೂ ರಶ್ಮಿಕಾ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿನ್ನೆ ಹೈದರಾಬಾದ್‌ನ ಐಷಾರಾಮಿ 'ತಾಜ್ ಕೃಷ್ಣ' ಹೋಟೆಲ್‌ನಲ್ಲಿ ತಾರಾ ಜೋಡಿಯ ಆರತಕ್ಷತೆ (Reception) ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುವುದು ನವಜೋಡಿಯ ಉಡುಗೆ.

rashmika mandanna (23)

‘ಮೈಸೂರು ಸಿಲ್ಕ್’ ಸೀರೆಯಲ್ಲಿ ಕಂಗೊಳಿಸಿದ ರಶ್ಮಿಕಾ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಮದುವೆ-ರಿಸೆಪ್ಷನ್‌ಗಳಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮಾಡರ್ನ್ ಫ್ಯಾಷನ್ ಡಿಸೈನರ್ ಉಡುಪುಗಳನ್ನು ಧರಿಸುತ್ತಾರೆ. 'ವಿರೋಷ್' (Vijay-Rashmika) ಜೋಡಿ ಈ ವಿಚಾರದಲ್ಲಿ ಭಿನ್ನವಾಗಿ ನಿಂತಿದ್ದಾರೆ. ಇಬ್ಬರೂ ಅಪ್ಪಟ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಿದ್ದಾರೆ.

rashmika mandanna (26)

ರಶ್ಮಿಕಾ ಮಂದಣ್ಣ ಅವರು ನಮ್ಮ ಕರ್ನಾಟಕದ ಹೆಮ್ಮೆಯಾದ 'ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ'ಯುಟ್ಟು ಮಿರಮಿರನೆ ಮಿಂಚಿದ್ದಾರೆ. ಇತ್ತ ವಿಜಯ್ ದೇವರಕೊಂಡ ಕೂಡ ಅತ್ಯಂತ ಸರಳವಾಗಿ ಪಂಚೆ ಮತ್ತು ಶರ್ಟ್ ಧರಿಸಿ ದೇಸಿ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಈ ಜೋಡಿಯನ್ನು ನೋಡಿ ಅಲ್ಲಿದ್ದವರೆಲ್ಲರೂ ಕಣ್ತುಂಬಿಕೊಂಡಿದ್ದಾರೆ.

Advertisment

ಈ ಅದ್ಧೂರಿ ಆರತಕ್ಷತೆ ಸಮಾರಂಭದಲ್ಲಿ ಸಿನಿಮಾ ತಾರೆಯರಿಂದ ಹಿಡಿದು ರಾಜಕೀಯ ಗಣ್ಯರವರೆಗೆ ಹಲವು ಪ್ರಮುಖರು ಹಾಜರಾಗಿದ್ದರು. ವಿಶೇಷವಾಗಿ ಕರ್ನಾಟಕದಿಂದ ಹಲವು ಗಣ್ಯರು ತೆರಳಿದ್ದು, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. 

ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಅಡುಗೆ ಎಣ್ಣೆ ಬೆಲೆ ದಿಢೀರ್ ಏರಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK Shivakumar vijay deverakonda rashmika mandanna
Advertisment
Advertisment
Advertisment