ಆಪ್ತಮಿತ್ರನಿಗೆ ಕರ್ನಾಟಕ ರತ್ನ; ರಮೇಶ್ ಅರವಿಂದ್ ಹೇಳಿದ್ದೇನು..?

ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ಸರ್ಕಾರ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿದೆ. ಬೆನ್ನಲ್ಲೇ ವಿಷ್ಣುವರ್ಧನ್ ಜೊತೆಗಿನ ಒಡನಾಟವನ್ನು ಹಿರಿಯ ನಟ ರಮೇಶ್ ಅರವಿಂದ್ ಅವರು ಹಂಚಿಕೊಂಡಿದ್ದಾರೆ.

author-image
Ganesh Kerekuli
Advertisment

ನಟ ವಿಷ್ಣುವರ್ಧನ್​ರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂಬುದು ಅಭಿಮಾನಿಗಳು ಹಾಗೂ ಕುಟುಂಬದವರ ಒತ್ತಾಯ ಆಗಿತ್ತು. ಆ ಮನವಿಯನ್ನ ಸರ್ಕಾರ ಪುರಸ್ಕರಿಸಿದೆ. ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿರಿಗೆ ಮರಣೋತ್ತವರಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ.

ಈ ಸುದ್ದಿ ತಿಳಿದ ಕೂಡಲೇ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಷ್ಣುವರ್ಧನ್​ಗೆ ಕರ್ನಾಟಕ ರತ್ನ ಕೊಡೋ ವಿಚಾರವಾಗಿ ರಮೇಶ್ ಅರವಿಂದ್​ ದನಿಗೂಡಿಸಿದ್ದರು. ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ಲಭಿಸಿರೋ ಬಗ್ಗೆ ಹಿರಿಯ ನಟ ರಮೇಶ್ ಅರವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಷ್ಣುವರ್ಧನ್ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ. ರಮೇಶ್ ಅರವಿಂದ್ ಏನು ಮಾತನ್ನಾಡಿದ್ದಾರೆ ಅನ್ನೋದು ಮೇಲಿನ ವಿಡಿಯೋದಲ್ಲಿ ಇದೆ. 

ಇದನ್ನೂ ಓದಿ:ಕರ್ಣನ ಜರ್ನಿಗೆ 50 ರ ಸಂಭ್ರಮ... ಈ ಸಂಭ್ರಮಲ್ಲಿ ಕರ್ಣನ ಲೈಫ್​ನಲ್ಲಿ ಏನ್​ ನಡೀತಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Vishnuvardhan Ramesh Aravind
Advertisment