/newsfirstlive-kannada/media/media_files/2025/09/11/karna-2025-09-11-17-35-42.jpg)
ಇಷ್ಟು ದಿನ ನಿಧಿ-ಕರ್ಣ ಅಭಿಮಾನಿಗಳು ಕಾಯ್ತಾಯಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ನಿಧಿಗೆ ಕಾವಲು ಆಗಿ ಇರೋ ಪ್ರತಿಜ್ಞೆ ಮಾಡಿದ್ದಾನೆ ಕರ್ಣ. ಪರಸ್ಪರ ಆಕರ್ಷಕ ಭಾವನೆಗಳು ಪ್ರೀತಿಯ ಅಲೆಯಲ್ಲಿ ತೇಲುತ್ತಿವೆ.
/filters:format(webp)/newsfirstlive-kannada/media/media_files/2025/08/01/karnata-2025-08-01-16-59-38.jpg)
ಇಬ್ಬರ ಕ್ಯೂಟ್​ ಕ್ಷಣಗಳನ್ನ ವೀಕ್ಷಕರು ಎಂಜಾಯ್​ ಮಾಡ್ತಿದ್ದಾರೆ. ಈ ನಡುವೆ ಕರ್ಣ ಹಾಗೂ ನಿತ್ಯಾ-ನಿಧಿ ಸಂಬಂಧದ ಗುಟ್ಟಿನ ಸುತ್ತ ಕಥೆ ಸಾಗ್ತಿದೆ. ಧಾರಾವಾಹಿಯಲ್ಲಿ ಮೇಜರ್​ ಟ್ವಿಸ್ಟ್​ ತೆರೆದುಕೊಳ್ತಿದೆ. ನಿತ್ಯಾ-ನಿಧಿ ಸೋದರ ಅತ್ತೆ ಮಗ ಕರ್ಣ ಇರಬಹುದು ಎಂಬ ಊಹೆ ಜೊತೆಗೆ ವೀಕ್ಷಕರು ಕುತೂಹಲದ ಚರ್ಚೆ ಮಾಡ್ತಿದ್ದಾರೆ.
ಇನ್ನೂ ನಿಧಿ-ನಿತ್ಯಾ ಫ್ಯಾನ್ಸ್ ಅಂತೂ ಕರ್ಣ ಯಾರನ್ನ ಮದುವೆ ಆಗ್ಬೇಕು ಎಂಬುದರ ಬಗ್ಗೆ ಕಾಮೆಂಟ್​ಗಳ ಮೂಲಕ ಗಲಾಟೆ ಮಾಡ್ತಾನೆ ಇರ್ತಾರೆ. ಈ ನಡುವೆ ನಿತ್ಯಾ ಮದುವೆ ಸಂಚಿಕೆಗಳ ಶೂಟಿಂಗ್​ ಈಗಾಗ್ಲೇ ಕಂಪ್ಲೀಟ್​ ಆಗಿವೆ. ಸದ್ಯದಲ್ಲೇ ವೀಕ್ಷಕರ ಮುಂದೆ ಮಹಾ ತಿರುವು ಬರಲಿದೆ. ಮಾರಿಗುಡಿಗೆ ಇಡೀ ಕುಟುಂಬ ಹೋಗ್ತಿರೋವಾಗ ಗಣಪ ಎದುರಾಗ್ತಾನೆ. ಅಲ್ಲಿ ನಿತ್ಯಾ, ನಿಧಿ, ಕರ್ಣ ಸಖತ್ ಸ್ಟೆಪ್ ಹಾಕ್ತಾರೆ. ರೌಡಿಗಳ ಆಟ್ಯಾಕ್​ ಆಗುತ್ತೆ. ಅತ್ತ ನಿಧಿಗೆ ಅರಶಿನ, ಇತ್ತ ನಿತ್ಯಾಗೆ ಕುಂಕುಮದ ಅಭಿಷೇಕ ಆಗುತ್ತೆ. ದೈವ ಬೆಸದ ಬೇಸುಗೆ ಇದು ಎಂಬ ರೀತಿಯಲ್ಲಿ ತೋರಿಸಲಾಯ್ತು.
ರಮೇಶ್​ ಇಂದಿರಾ ಅವರ ನಿರ್ದೇಶನದಲ್ಲಿ ಕರ್ಣ ಮೂಡಿಬರುತ್ತಿದ್ದು, ಭರ್ಜರಿ ದೃಶ್ಯಗಳ ಶೂಟಿಂಗ್​ ಪ್ಲ್ಯಾನ್​ ಮಾಡಿಕೊಂಡಿದೆ ತಂಡ. ಅದ್ರಲ್ಲಿ ಕರ್ಣ ಹೇಗೆ ತೊಟ್ಟಿಯಲ್ಲಿ ತಾತನಿಗೆ ಸಿಕ್ಕಿದ? ನಿತ್ಯಾ ಮದುವೆ ಕಥೆ ಏನು? ಇದಲ್ಲವೂ ಮಾರಿಗುಡಿ ಸಂಚಿಕೆಗಳಲ್ಲಿ ಪ್ರಸಾರವಾಗಲಿವೆ. ಈ ನಡುವೆ ಅಣ್ಣಯ್ಯ ಹಾಗೂ ಕರ್ಣ ಮಹಾ ಸಂಗಮ ಬರೋ ಚಾನ್ಸ್​ ಕೂಡ ಇದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us