/newsfirstlive-kannada/media/post_attachments/wp-content/uploads/2025/02/SANJANA.jpg)
ತೆಲುಗು ಬಿಗ್ ಬಾಸ್ ಸದ್ದು ಜೋರಾಗಿದ್ದು, ಸಂಜನಾ ಗಲ್ರಾನಿ ಕಾಲಿಟಿದ್ದಾರೆ. ಇತ್ತೀಚಿಗೆ ನಟಿ ಸಂಜನಾ ಗಲ್ರಾನಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಪುಟ್ಟ ಮಗುವನ್ನ ಬಿಟ್ಟು ಸಂಜನಾ ಗಲ್ರಾನಿ ಬಿಗ್ ಬಾಸ್ ತೆಲುಗು 9 ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದಾರೆ.
ತೆಲುಗು ಬಿಗ್ಬಾಸ್ ಕಾರ್ಯಕ್ರಮದಲ್ಲಿ ನಟಿ ಸಂಜನಾ ಗಲ್ರಾನಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಇತರೆ ಭಾಷೆಯ ಬಿಗ್ಬಾಸ್ ಕಾರ್ಯಕ್ರಮಗಳಲ್ಲೂ ಕೂಡ ಕನ್ನಡಿಗರು ರಾರಾಜಿಸುತ್ತಿದ್ದಾರೆ. ಅದರಂತೆ ನಟಿ ಸಂಜನಾ ಗಲ್ರಾನಿ ತೆಲುಗು ಬಿಗ್ ಬಾಸ್ಗೆ ಸ್ಪರ್ಧಿಯಾಗಿ ಹೋಗಿದ್ದಾರೆ.ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಮಿನುಗಿದ್ದ ಸಂಜನಾ ಗಲ್ರಾನಿ ಸದ್ಯ ತೆಲುಗು ಶೋನಿಂದ ಕರೆ ಬಂದ ತಕ್ಷಣ ಒಪ್ಪಿ ಹೋಗಿದ್ದಾರೆ.
ಈ ಬಗ್ಗೆ ನಟಿ ಸಂಜನಾ ಗಲ್ರಾನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಸಂಕಷ್ಟಗಳಿಗೆ ಸಿಲುಕಿದ್ದ ನನಗೆ ಬಿಗ್ಬಾಸ್ ತೆಲುಗು ಸುವರ್ಣಾವಕಾಶ. ತಮ್ಮ ಮನದ ಮಾತು, ಕುಗ್ಗದ ಮನೋಬಲವನ್ನ ಜನರ ಮುಂದೆ ಹಂಚಿಕೊಂಡು ಹಲವರಿಗೆ ಸ್ಫೂರ್ತಿಯಾಗಲು ‘ಬಿಗ್ ಬಾಸ್ ತೆಲುಗು 9’ ಶೋಗೆ ಕಾಲಿಟ್ಟಿದ್ದೀನಿ ಅಂತ ನಟಿ ಸಂಜನಾ ಗಲ್ರಾನಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈಗಾಗಲೇ ಶೋ ಶುರುವಾಗಿದ್ದು, ಹೊಸ ಜೀವನದ ನಿರೀಕ್ಷೆಯಲ್ಲಿರೋ ಸಂಜನಾ ಗಲ್ರಾನಿ ತೆಲುಗು ವೀಕ್ಷಕರ ಮನಸ್ಸು ಗೆಲ್ತಾರ ಅಂತ ಕಾದು ನೋಡ್ಬೇಕು.
ಇದನ್ನೂ ಓದಿ : ವೀಕ್ಷಕರಿಗೆ ಗುಡ್ನ್ಯೂಸ್.. ಬಿಗ್ಬಾಸ್ ನೀಡುವ ಸರ್ಪ್ರೈಸ್ ಬಗ್ಗೆ ಅಪ್ಡೇಟ್ಸ್ ಕೊಟ್ಟ ಪ್ರಿಯಾಂಕ | VIDEO