/newsfirstlive-kannada/media/media_files/2025/09/11/priyanka-shivanna-2025-09-11-12-49-42.jpg)
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡಲಿರುವ ಬಿಗ್ಬಾಸ್ ಕನ್ನಡ ಸೀಸನ್ 12 ವೀಕ್ಷಣೆಗೆ ಇಡೀ ಕರುನಾಡೇ ಕಾಯುತ್ತಿದೆ. ಈ ಭಾರಿ ಬಿಗ್ಬಾಸ್ಗೆ ಯಾಱರು ಬರ್ತಾರೆ ಅನ್ನೋ ಕಾತರ ಒಂದ್ಕಡೆಯಾದ್ರೆ, ಬಿಗ್ಬಾಸ್ ನಿರೂಪಣೆ ಮಾಡಲಿರುವ ನಟ ಕಿಚ್ಚ ಸುದೀಪ್ ಹೊಸ ಲುಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರೊಟ್ಟಿಗೆ ಬಿಗ್ಬಾಸ್ ವೀಕ್ಷಕರಿಗೆ ಬಿಗ್ ಸಪ್ರೈಸ್ ನೀಡಿದೆ.
ಬಿಗ್ಬಾಸ್ ಮನೆಗೆ ಬನ್ನಿ..
ಹೌದು, ಬಿಗ್ಬಾಸ್ ಸೀಸನ್ 12ರ ಮನೆಗೆ ನೀವು ಅಥಿತಿಯಾಗಿ ಹೋಗಬೇಕಾ? ಹಾಗಾದ್ರೆ ಇದೇ ಶುಕ್ರವಾರದಂದು ಕಲರ್ಸ್ ಕನ್ನಡ ಚಾನಲ್ನಲ್ಲಿ ಪ್ರಸಾರವಾಗುವ ಎಲ್ಲಾ ಸೀರಿಯಲ್ಗಳನ್ನ ತಪ್ಪದೇ ನೋಡಿ. ಈ ಬಗ್ಗೆ ಬಿಗ್ಬಾಸ್ ಮಾಜಿ ಸ್ಪರ್ಧಿ ಪ್ರಿಯಾಂಕ ಶಿವಣ್ಣ ಹೇಳಿದ್ದಾರೆ.
ಶುಕ್ರವಾರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೀರಿಯಲ್ ಬಗ್ಗೆ ವೀಕ್ಷಕರಿಗೆ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನ ವೀಕ್ಷಕರು ಜಿಯೋ ಹಾಟ್‌ಸ್ಟಾರ್ ಮೂಲಕ ನೀಡಬಹುದು. ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ವೀಕ್ಷಕರಿಗೆ ಬಿಗ್ಬಾಸ್ ಮನೆಗೆ ಅಥಿತಿಯಾಗಿ ಹೋಗುವ ಅವಕಾಶವನ್ನ ನೀಡಲಾಗುತ್ತದೆ ಎಂದು ಬಿಗ್ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಪ್ರಿಯಾಂಕ ಶಿವಣ್ಣ ಹೇಳಿದ್ದಾರೆ.
ಬಿಗ್ಬಾಸ್ ಮನೆಗೆ ಹೋಗಬೇಕೆಂಬ ಆಸೆ ಹೊಂದಿರುವವರು ಶುಕ್ರವಾರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೀರಿಯಲ್ಗಳನ್ನ ನೋಡಿ.. ಅವಕಾಶವನ್ನ ನಿಮ್ಮದಾಗಿಸಿಕೊಳ್ಳಿ.
ಇದನ್ನೂ ಓದಿ: ಧನರಾಜ್ ಆಚಾರ್ ಮನೆಗೆ ಬಂದ ತಂಗಿ ಜಿಂಕೆ.. ಮಂಗಳೂರು ಬನ್ ತಿಂದು ಭವ್ಯಗೌಡ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ