ಫ್ರಾಂಕ್ ಆಗಿ ಹೇಳ್ತೀನಿ ಕೇಳಿ. ಇದರಲ್ಲಿ ಡಿಕೆ ಸಾಹೇಬರದ್ದು ಏನೂ (D.K.Shivakumar) ಇಲ್ಲ. ಎಲ್ಲಾ ಕಿತಾಪತಿ ಇರೋದು ಸಾಧು ಕೋಕಿಲಾರದ್ದು ಕಿಚ್ಚ ಸುದೀಪ್ ಹೇಳಿದ್ದಾರೆ.
ನಾಳೆ ಸುದೀಪ್ ಅವರು ಜನ್ಮದಿನ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇವತ್ತು ಮಾಧ್ಯಮಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ಸುದೀಪ್ ರಾಜಕೀಯಕ್ಕೆ ಬರುವ ವಿಚಾರ ಪ್ರಸ್ತಾಪವಾಗಿ, ಕೆಲವು ತಿಂಗಳ ಹಿಂದೆ ಸುದ್ದಿಯಲ್ಲಿದ್ದ ಸ್ಯಾಂಡಲ್ವುಡ್ ನಟ್ಟು ಬೋಲ್ಟು ವಿಷಯ ಎಳೆದು ತರಲಾಯಿತು.
ಅದಕ್ಕೆ ಪ್ರತಿಕ್ರಿಯಿಸಿದ ಸುದೀಪ್.. ಸಾಧು ಕೋಕಿಲಾ ಅವರು ಆಮೇಲೆ ಕೂತುಕೊಂಡು ಹೇಳ್ತಾರೆ. ಎಲ್ಲರನ್ನೂ ಕರೆದ್ರೆ (ಫಿಲ್ಮ್ ಫೆಸ್ಟಿವಲ್ಗೆ) ನಾನು ಹೆಂಗೆ ಮೆಂಟೇನ್ ಮಾಡಲಿ. ಯಾರಿಗೆ ಸೆಕ್ಯೂರಿಟಿ ಕೊಡಲಿ ಎಂದು. ಇದನ್ನು ಅವರಿಗೆ ನೀಟ್ ಆಗಿ ಹೇಳಬೇಕಿತ್ತು. ಅಲ್ಲಿ ಬಂದು ಡಿಕೆಶಿ ಹೇಳಿದಾಗಿ ಸೈಲೆಂಟ್ ಆಗಿ ನಿಂತುಕೊಂಡು ಇದ್ದರು.
ಇದು ಕಿತಾಪತಿ ಸಾಧು ಅವರದ್ದು. ಬೇರೆ ಯಾರದ್ದೂ ಅಲ್ಲ. ಇಂಡಸ್ಟ್ರಿಯಲ್ಲಿ ಯಾರಿಗೆಲ್ಲ ಕರೆದಿದ್ದಾರೋ ಅವರೆಲ್ಲರೂ ಹೋಗಿದ್ದಾರೆ. ಕರೆದಿಲ್ಲ ಯಾರು ಹೋಗ್ತಾರೆ? ಕೆಲವರಿಗೆ ಬರೋಕೆ ಆಗಿಲ್ಲ. ಇನ್ನು ಕೆಲವರು ದೊಡ್ಡ ದೊಡ್ಡ ಲೈನ್ಗಳನ್ನು ಹೇಳಿದರು. ಪರವಾಗಿಲ್ಲ. ತಪ್ಪೇನು ಇಲ್ಲ. ಅದನ್ನು ತಿಳಿದುಕೊಳ್ಳಬೇಕು. ಪಾಪ ಸಾಧುದು ತಪ್ಪೇನೂ ಇಲ್ಲ. ಅವರು ಇರೋದೇ ಹಾಗೆ. ತಮಾಷೆ ಮಾಡಿಕೊಂಡು ಇರುತ್ತಾರೆ. ತಮಾಷೆ ಮಾಡಿಬಿಟ್ಟಿದ್ದಾರೆ, ಅದು ಸಿರೀಯಸ್ ಆಗಿದೆ.
ಇದನ್ನೂ ಓದಿ:ಸುದೀಪ್ ರಾಜಕೀಯಕ್ಕೆ.. ಕಿಚ್ಚ ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ